ಎಐಎಡಿಎಂಕೆ ಶಾಸಕ ಹಾಗೂ ನಟ ಕರುಣಾಸ್ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Karunas--01

ಚೆನ್ನೈ, ಸೆ.23(ಪಿಟಿಐ)- ಸಾರ್ವಜನಿಕ ಸಭೆಯೊಂದರಲ್ಲಿ ಪ್ರಚೋದನಾಕಾರಿ ಮತ್ತು ಅವಹೇಳನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಆಡಳಿತರೂಢ ಎಐಎಡಿಎಂಕೆ ಶಾಸಕ ಎಸ್. ಕರುಣಾಸ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಖ್ಯಾತ ನಟ ಮತ್ತು ಸಂಘಟನೆಯೊಂದರ ಸಂಸ್ಥಾಪಕರೂ ಆಗಿರುವ ಕರುಣಾಸ್ ಅವರನ್ನು ವಿಶೇಷ ಪೊಲೀಸ್ ತಂಡದ ಅಧಿಕಾರಿಗಳು ಇಂದು ಚೆನ್ನೈನ ಅವರ ನಿವಾಸದಲ್ಲಿ ಬಂಧಿಸಿದರು. ಇತ್ತೀಚೆಗೆ ನಡೆದ ಸಾರ್ವಜನಿಕ ಸಭೆಗಳಲ್ಲಿ ಶಾಸಕ ಕರುಣಾಸ್ ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದೇ ಅಲ್ಲದೇ ಜಾತಿ ಆಧಾರಿತ ಟೀಕೆಗಳನ್ನು ಮಾಡಿದ್ದರು. ಅವರ ಹೇಳಿಕೆಗಳ ಬಗ್ಗೆ ವಿವಿಧ ವಲಯಗಳಿಂದ ತೀವ್ರ ಆಕ್ಷೇಪಗಳು ವ್ಯಕ್ತವಾಗಿದ್ದವು.

2016ರ ವಿಧಾನಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ಬೆಂಬಲದೊಂದಿಗೆ ಅವರು ರಾಮನಾಥಪುರಂ ಜಿಲ್ಲೆಯ ತಿರುವಡನೈ ವಿಧಾಸಭಾ ಕ್ಷೇತ್ರದಿಂದ ಚುನಾಯಿತರಾಗಿದ್ದರು. ಅಣ್ಣಾಡಿಎಂಕೆ ಪಕ್ಷದ ಪರಿತ್ಯಕ್ತ ನಾಯಕ ಮತ್ತು ಆರ್‍ಕೆ ನಗರ ಶಾಸಕ ದಿನಕರ್ ಜೊತೆ ಸಖ್ಯ ಹೊಂದಿರುವ ಕರುಣಾಸ್ ಇತ್ತೀಚೆಗೆ ಮುಖ್ಯಮಂತ್ರಿ ಪಳನಿಸ್ವಾಮಿ ಸೇರಿದಂತೆ ಪಕ್ಷದ ವಿರುದ್ಧ ಬಂಡಾಯ ಎದ್ದಿದ್ದಾರೆ.

Facebook Comments

Sri Raghav

Admin