ಶಿಖರ್-ಶರ್ಮಾ ದಾಖಲೆಯ ಶತಕದ ಜೊತೆಯಾಟಕ್ಕೆ ಪಾಕ್ ಧೂಳಿಪಟ, ಭಾರತಕ್ಕೆ 9 ವಿಕೆಟ್ ಗಳ ಜಯ

ಈ ಸುದ್ದಿಯನ್ನು ಶೇರ್ ಮಾಡಿ

India
ದುಬೈ. ಸೆ.23 : ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಬಿರುಗಾಳಿಗೆ ಪಾಕ್ ಧೂಳಿಪಟವಾಗಿದೆ. ಪಾಕ್ ಮತ್ತು ಭಾರತದ ನಡುವೆ ಇಲ್ಲಿ ನಡೆದ ಹೈ ವೋಲ್ಟೇಜ್ ಪಂದ್ಯದಲ್ಲಿ ಶಿಖರ್ ಧವನ್ – ರೋಹಿತ್ ಶರ್ಮಾ ಭರ್ಜರಿ ಜೊತೆಯಾಟದಿಂದ ಭಾರತ 9 ವಿಕೆಟ್ ಗಳ ಅಮೋಘ ಜಯ ಸಾಧಿಸಿದೆ.  ಏಷ್ಯಾಕಪ್ ಸೂಪರ್ 4 ಹಂತದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಶೋಯೆಬ್ ಮಲಿಕ್’ರ ಅದ್ಭುತ ಪ್ರದರ್ಶನದಿಂದ 78(90) ಉತ್ತಮ ರನ್ ಕಲೆಹಾಕುವಲ್ಲಿ ಯಶಸ್ವಿಯಾಗಿತು. ನಿಗದಿತ 50 ಗಳಲ್ಲಿ 7 ವಿಕೆಟ್ ನಷ್ಟಕ್ಕೆ 237 ರನ್ ಗಳಿಸಿದ ಪಾಕ್ ಭಾರತಕ್ಕೆ 238 ರನ್ ಗಳ ಕಠಿಣ ಸವಾಲು ನೀಡಿತ್ತು.

ಪಾಕಿಸ್ತಾನ ಆರಂಭದಲ್ಲೇ ಇಮಾಮ್ ಉಲ್ ಹಕ್ ವಿಕೆಟ್ ಕಳೆದುಕೊಂಡಿತು. ಇಮಾಮ್ 10 ರನ್ ಸಿಡಿಸಿ ಔಟಾದರು. ಆದರೆ 1 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 31 ರನ್ ಸಿಡಿಸಿದ್ದ ಫಕರ್ ಜಮಾನ್, ಕುಲ್ದೀಪ್ ಮೋಡಿಗೆ ಬಲಿಯಾದರು. ಇನ್ನು 9ರನ್ ಸಿಡಿಸಿದ ಬಾಬರ್ ಅಜಮ್ ರನೌಟ್‌ಗೆ ಬಲಿಯಾದರು. 3 ವಿಕೆಟ್ ಕಳೆದುಕೊಂಡ ಪಾಕಿಸ್ತಾನ ತಂಡಕ್ಕೆ ನಾಯಕ ಸರ್ಫಾರಾಜ್ ಅಹಮ್ಮದ್ ಹಾಗೂ ಶೋಯಿಬ್ ಮಲ್ಲಿಕ್ ಆಸರೆಯಾದರು. ಪಾಕಿಸ್ತಾನ ಆಲ್ರೌಂಡರ್ ಶೋಯಿಬ್ ಮಲ್ಲಿಕ್ ಉತ್ತಮ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಯಿತು. ಅಂತಿಮವಾಗಿ ಗಳಿಸಿತು. ಈ ಮೂಲಕ ಭಾರತಕ್ಕೆ 238 ರನ್’ಗಳ ಕಠಿಣ ಸವಾಲ್ ನೀಡಿತ್ತು.

ನಂತರ ಹುಮ್ಮಸ್ಸಿನಿಂದ ಬ್ಯಾಟಿಂಗ್ ಗಿಳಿದ ನಾಯಕ ರೋಹಿತ್ ಶರ್ಮ ಮತ್ತು ಶಿಖರ್ ಧವನ್ ಜೊತೆ ತಾಳ್ಮೆಯ ಜೊತೆಯಾಟವಾಡಿ ಇಬ್ಬರೂ ಶತಕ ಸಿಡಿಸುವ ಮೂಲಕ ಅದ್ಭುತ ಇನ್ನಿಗ್ಸ್ ಕಟ್ಟಿದರು. ಪಾಕ್ ಗಳ ಬೆವರಿಳಿಸಿದ ಈ ಜೋಡಿ ಭಾರತ ನಿರಾಯಾಸವಾಗಿ ಗೆಲುವು ಸಾಧಿಸಲು ನೆರವಾದರು. ಅಂತಿಮವಾಗಿ 39.3 ನೇ ಓವರ್ ನಲ್ಲಿ ಭಾರತ ಕೇವಲ ಒಂದು ವಿಕೆಟ್ ಕಳೆದುಕೊಂಡು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಬಗ್ಗುಬಡಿಯಿತು. ಭಾರತದ ಪರ ಶಿಖರ್ ಧವನ್ 114(100), ರೋಹಿತ್ ಶರ್ಮ 109(115) ಹಾಗೂ ಅಂಬಾಟಿ ರಾಯುಡು 8(13) ರನ್ ಗಳಿಸಿದರು.

# ರೋಹಿತ್-ಧವನ್ ದಾಖಲೆ ಶತಕ :
ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ಸೂಪರ್ 4 ಹಂತದ ಪಂದ್ಯದಲ್ಲಿ ಟೀಂ ಇಂಡಿಯಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಅಬ್ಬರಿಸಿದ ಶಿಖರ್ ಧವನ್ ಏಕದಿನ ಕ್ರಿಕೆಟ್‌ನಲ್ಲಿ 15ನೇ ಶತಕ ಸಿಡಿಸಿದರು. ಇಷ್ಟೇ ಅಲ್ಲ, ಏಷ್ಯಾಕಪ್, ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಎರಡೆರಡು ಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಕೆಗೂ ಧವನ್ ಪಾತ್ರರಾಗಿದ್ದಾರೆ. ನಾಯಕ ರೋಹಿತ್ ಶರ್ಮಾ ಕೂಡ ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್ 19 ನೇ ಶತಕ ಸಿಡಿಸಿ 7000 ರನ್ ಪೂರೈಸಿದರು.

# ಸಂಕ್ಷಿಪ್ತ ಸ್ಕೋರ್ :
ಪಾಕಿಸ್ತಾನ : 237/7 * (50 ov)
ಭಾರತ ; 238/1 (39.3/50 ov, target 238)

# ಮತ್ತೆ ಜಾಣತನ ಮೆರೆದ ಧೋನಿ ಧೋನಿ :

Pakistan
ಯುಇಎನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ 2018 ಕ್ರಿಕೆಟ್ ಟೂರ್ನಮೆಂಟ್‌ನ ಸೂಪರ್ ಫೋರ್ ಹಂತದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮಗದೊಮ್ಮೆ ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಜಾಣತನವನ್ನು ಮೆರೆದಿದ್ದಾರೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ಸಾಗುತ್ತಿರುವ ಪಂದ್ಯದಲ್ಲಿ ಧೋನಿ ರಿವ್ಯೂ ಸಿಸ್ಟಂ ವರ್ಕೌಟ್ ಆಗಿದೆ. ಇದರೊಂದಿಗೆ ಪಾಕ್ ಆಟಗಾರರು ದಂಗಾಗಿದ್ದಾರೆ. ಪಾಕ್ ಇನ್ನಿಂಗ್ಸ್‌ನ ಎಂಟನೇ ಓವರ್‌ನಲ್ಲಿ ಘಟನೆ ನಡೆದಿದೆ. ಯುಜ್ವೇಂದ್ರ ಚಹಲ್ ಎಸೆದ ಚೆಂಡು ಪಾಕ್ ಎಡಗೈ ಆರಂಭಿಕ ಇಮಾಮ್ ಉಲ್ ಹಕ್ ಕಾಲಿಗೆ ಬಡಿದಿತ್ತು. ಆದರೆ ಭಾರತ ಮನವಿಯನ್ನು ಫೀಲ್ಡ್ ಅಂಪೈರ್ ಪುರಸ್ಕರಿಸಲಿಲ್ಲ. ತಕ್ಷಣವೇ ನಾಯಕ ರೋಹಿತ್ ಶರ್ಮಾ ಬಳಿಕ ಡಿಆರ್‌ಎಸ್ ಮನವಿ ಮಾಡುವಂತೆ ಮಹಿ ಸೂಚಿಸಿದರು. ಬಳಿಕ ರಿಪ್ಲೇನಲ್ಲಿ ಡಿಆರ್‌ಎಸ್ ಪರೀಶೀಲಿಸಿದಾಗ ಚೆಂಡು ವಿಕೆಟ್‌ಗೆ ಬಡಿಯುವುದು ಸ್ಪಷ್ಟವಾಗಿ ಕಂಡುಬಂದಿತ್ತು. ಬಳಿಕ ನಿರ್ಣಯ ಬದಲಾಯಿಸಿದ ಅಂಪೈರ್, ಔಟ್ ಎಂದು ತೀರ್ಪು ನೀಡಿದರು. ಇದರೊಂದಿಗೆ 10 ರನ್ ಗಳಿಸಿದ ಇಮಾಮ್ ಪೆವಿಲಿಯನ್‌ಗೆ ಮರಳಬೇಕಾಯಿತು.

Pakistan--02

Facebook Comments

Sri Raghav

Admin