ಐಸ್ ಕ್ರೀಮ್ ತಿಂದು ಕೂಲ್ ಆದ ಸಿಎಂ ಕುಮಾರಸ್ವಾಮಿ..!

ಈ ಸುದ್ದಿಯನ್ನು ಶೇರ್ ಮಾಡಿ

CM-Ice-Cream--01

ಹಾಸನ. ಸೆ.23 : ಹಾಸನ ಹಾಲು ಒಕ್ಕೂಟ (ನಿ),ವತಿಯಿಂದ ರೂ 556.20 ಕೋಟಿಗಳ(ರೂ. 37 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ನೂತನ ಐಸ್ ಕ್ರೀಂ ಉತ್ಪಾದನಾ ಘಟಕವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಉದ್ಘಾಟಿಸಿದರು. ಇದೆ ವೇಳೆ ಐಸ್‍ಕ್ರೀಂ ಸವಿದ ಖುಷಿಪಟ್ಟುರು.

ಇದೆ ವೇಳೆ ರೂ. 279 ಕೋಟಿ ವೆಚ್ಚದಲ್ಲಿ ಮೆಗಾ ಡೈರಿ ಮತ್ತು ಹಾಲಿನಪುಡಿ ಘಟಕ ಸಮುಚ್ಚಯ ನಿರ್ಮಾಣದ ಶಂಕುಸ್ಥಾಪನೆ, ರೂ.136 ಕೋಟಿ ವೆಚ್ಚದಲ್ಲಿ ಯು.ಹೆಚ್.ಟಿ. ಸುವಾಸಿತ ಹಾಲಿನ ಪೆಟ್ ಬಾಟಲ್ ಘಟಕ ನಿರ್ಮಾಣದ ಶಂಕುಸ್ಥಾಪನೆ, ರೂ.67 ಕೋಟಿ ವೆಚ್ಚದಲ್ಲಿ ಯು.ಹೆಚ್.ಟಿ. ಘಟಕದ ಉತ್ಪಾದನಾ ಸಾಮಥ್ರ್ಯ 2 ರಿಂದ 4 ಲಕ್ಷ ಲೀಗಳಿಗೆ ವಿಸ್ತರಣೆಗೆ ಶಂಕುಸ್ಥಾಪನೆ, ರೂ. 23 ಕೋಟಿ ವೆಚ್ಚದಲ್ಲಿ ಹಾಸನ ಡೈರಿ ಸಂಸ್ಕರಣಾ ಸಾಮಥ್ರ್ಯ 3 ರಿಂದ 5 ಲಕ್ಷ ಲೀ.ಗಳಿಗೆ ವಿಸ್ತರಣೆಗೆ ಶಂಕುಸ್ಥಾಪನೆ, ರೂ.4.5 ಕೋಟಿ ವೆಚ್ಚದಲ್ಲಿ ಎಸ್.ಎಂ.ಒಇ ಗೋದಾಮು ಕಟ್ಟಡ ನಿರ್ಮಾಣದ ಶಂಕುಸ್ಥಾಪನೆ, ರೂ. 4.8 ಕೋಟಿ ವೆಚ್ಚದಲ್ಲಿ ಉಗ್ರಾಣ ಕಟ್ಟಡ ನಿರ್ಮಾಣದ ಶಂಕುಸ್ಥಾಪನೆ, ರೂ. 3.5 ಕೋಟಿ ವೆಚ್ಚದಲ್ಲಿ ಆಡಳಿತ ಕಚೇರಿ ಕಟ್ಟಡ ನಿರ್ಮಾಣದ ಶಂಕುಸ್ಥಾಪನೆ, ರೂ. 1.4 ಕೋಟಿ ವೆಚ್ಚದಲ್ಲಿ ಉಪಹಾರ ಗೃಹ ಕಟ್ಟಡ ನಿರ್ಮಾಣದ ಶಂಕುಸ್ಥಾಪನೆ ಮುಖ್ಯಮಂತ್ರಿ ಕುಮಾರಸ್ವಾಮಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್ .ಡಿ ದೇವೇಗೌಡ ,ಸಚಿವರಾದ ಹೆಚ್.ಡಿ‌ ರೇವಣ್ಣ, ಜಿ ಟಿ ದೇವೇಗೌಡ,ಸಾ.ರಾ ಮಹೇಶ್ ಮತ್ತಿತರರು ಭಾಗಿಯಾಗಿದ್ದರು.

WhatsApp Image 2018-09-23 at 12.36.56 PM

WhatsApp Image 2018-09-23 at 12.36.54 PM

Facebook Comments

Sri Raghav

Admin