ತಡರಾತ್ರಿವರೆಗೂ ನಡೆದ ಜೆಡಿಎಸ್ ಶಾಸಕಾಂಗ ಸಭೆ, ಇಬ್ಬರು ಹೊರತುಪಡಿಸಿ ಎಲ್ಲ ಶಾಸಕರು ಭಾಗಿ

ಈ ಸುದ್ದಿಯನ್ನು ಶೇರ್ ಮಾಡಿ

JDS-Meeting--01

ಹಾಸನ. ಸೆ. ಸೆ 23 : ತಡರಾತ್ರಿವರೆಗೂ ಇಲ್ಲಿನ ಖಾಸಗಿ ರೆಸಾರ್ಟ್ನಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಇಬ್ಬರು ಶಾಸಕರನ್ನು ಹೊರತುಪಡಿಸಿ ಉಳಿದ 35 ಶಾಸಕರು ಭಾಗವಹಿಸುವ ಮೂಲಕ ಸಮ್ಮಿಶ್ರ ಸರ್ಕಾರ ಸ್ಥಿರವಾಗಿದೆ ಎಂಬುದನ್ನು ತೋರಿಸಿದ್ದಾರೆ. ಇದರಿಂದ ಜೆಡಿಎಸ್ ಶಾಸಕರನ್ನು ಆಪರೇಷನ್ ಕಮಲದ ಮೂಲಕ ಸೆಳೆಯಲು ಯತ್ನಿಸಿದವರಿಗೆ ತೀವ್ರ ಹಿನ್ನಡೆಯಾಗಿದೆ.

ಶಾಸಕಾಂಗ ಸಭೆ ಮುಗಿದ ಬಳಿಕ ಮಾತನಾಡಿದ ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ್, ಇಂದಿನ ಶಾಸಕಾಂಗ ಸಭೆಯಲ್ಲಿ ನಮ್ಮ ಪಕ್ಷದ ಒಟ್ಟು 37 ಶಾಸಕರಲ್ಲಿ 35 ಮಂದಿ ಶಾಸಕರು ಭಾಗಿಯಾಗಿದ್ದು ಸರ್ಕಾರ ಸುಭದ್ರವಾಗಿದೆ ಎಂದು ಸ್ಪಷ್ಟವಾಗಿದೆ ನಮ್ಮ ಶಾಸಕರು ಯಾವ ಆಪರೇಷನ್ ಕಮಲದ ಬಲೆಗೆ ಸಿಲುಕಿಲ್ಲವೆಂದು ಸಾಬೀತು ಪಡಿಸಿದೆ ಎಂದರು.

ತುಮಕೂರು ಗ್ರಾಮಾಂತರ ಕ್ಷೇತ್ರ ದ ಶಾಸಕರಾದ ಗೌರಿಶಂಕರ್ ಹಾಗೂ ಕೆ.ಆರ್.ಪೇಟೆ ಶಾಸಕ ನಾರಾಯಣ ಗೌಡ ತುರ್ತು ಕೆಲಸದ ಹಿನ್ನೆಲೆಯಲ್ಲಿ ಸಭೆಯಲ್ಲಿ ಭಾಗವಹಿಸಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಅನುಮತಿ ಪಡೆದು ಬೇರೆಡೆಗೆ ಹೋಗಿದ್ದಾರೆ ಎಂದು ತಿಳಿಸಿದರು.   ಶಾಸಕಾಂಗ ಸಭೆಯಲ್ಲಿ ಪಕ್ಷ ಸಂಘಟನೆಯ ವಿಚಾರವಾಗಿ ಚರ್ಚೆ ನಡೆಯಿತು. ಅಲ್ಲದೆ ಜಿಲ್ಲಾವಾರು ಕೂಡ ಪಕ್ಷ ಸಂಘಟನೆ ಮಾಡುವ ವಿಚಾರವನ್ನು ಸುದೀರ್ಘವಾಗಿ ಎಲ್ಲ ಶಾಸಕರು ತಮ್ಮ ಸಲಹೆ ಸೂಚನೆಗ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

ಜೆಡಿಎಸ್ನ ಕೆಲ ಶಾಸಕರು ಪಕ್ಷಕ್ಕೆ ಗುಡ್ಬೈ ಹೇಳಿ, ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಗಳಿಗೆ ಬ್ರೇಕ್ ಹಾಕಿದ ಸಚಿವರು, ಎಲ್ಲ ಶಾಸಕರು ನಮ್ಮ ಜೊತೆಗೇ ಇದ್ದಾರೆ. ಖಂಡಿತವಾಗಿಯೂ ಈ ಸಮ್ಮಿಶ್ರ ಸರಕಾರ 5 ವರ್ಷ ನಡೆಯಲಿದೆ ಎಂದು ಭರವಸೆ ನೀಡಿದರು.  ಸಭೆಯಲ್ಲಿ ಆಪರೇಷನ್ ಕಮಲದ ಬಗ್ಗೆ ಚರ್ಚೆಯಾಗಲಿಲ್ಲ. ಆದರೆ ಸಮನ್ವಯ ಸಮಿತಿ ಸಭೆ ಬಗ್ಗೆ ಚರ್ಚೆಯಾಗಿದ್ದು, ನಿಗಮ-ಮಂಡಳಿ ಆಕಾಂಕ್ಷಿತರ ವಿಚಾರ, ವಿಧಾನ ಪರಿಷತ್ ಚುನಾವಣೆ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಜೊತೆಯಾಗಿ ಸ್ಪರ್ಧಿಸುವ ವಿಚಾರ ಕೂಡ ಚರ್ಚಿಸಲಾಗಿದೆ ಎಂದು ಹೇಳಿದರು.

JDS-Meeting--02

ಇನ್ನು ಪಕ್ಷದ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಕೂಡ ಕೆಲವು ಸಲಹೆಗಳನ್ನು ಕೊಟ್ಟಿದ್ದಾರೆ. ಜಿಲ್ಲಾವಾರು ಸಂಘಟನೆ ಮಾಡುವ ಜೊತೆಗೆ ಜಿಲ್ಲಾ ಪದಾಧಿಕಾರಿಗಳ ನೇಮಕ ಕೂಡ ಆಗಬೇಕಾಗಿದೆ. ಅದನ್ನು ಮಾಡುವ ಮೂಲಕ ಪಕ್ಷವನ್ನು ಸದೃಢಗೊಳಿಸಬೇಕು. ಅದಕ್ಕೆ ಕೆಲ ಶಾಸಕರು ಕೂಡ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.

ಸಭೆಯ ಬಳಿಕ ಮುಖ್ಯಮಂತ್ರಿ ಕುಮಾರಸ್ವಾಮಿ , ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ ಎಂದು ಹೇಳಬಹುದು ಜೆಡಿಎಸ್ ಶಾಸಕರು ಪಕ್ಷ ತ್ಯಜಿಸುತ್ತಾರೆಂಬ ಸುದ್ದಿಗಳು ಸುಳ್ಳು, ಅವೆಲ್ಲವೂ ಸತ್ಯಕ್ಕೆ ದೂರವಾದವು ಎಂದು ಶಾಸಕಾಂಗ ಸಭೆಯ ಮೂಲಕ ಸಮ್ಮಿಶ್ರ ಸರಕಾರ ಅಸ್ಥಿರಗೊಳಿಸಲು ಸಾಧ್ಯ ವಿಲ್ಲ ಎಂಬುದನ್ನು ಬಿಜೆಪಿ ಗೆ ತೋರಿಸಿದಂತಾಗಿದೆ.

Facebook Comments

Sri Raghav

Admin