ಸ್ಥಿರ ಸರ್ಕಾರ ಆಯ್ಕೆ ಖಚಿತ : ಪ್ರಧಾನಿ ಮೋದಿ ವಿಶ್ವಾಸ

ಈ ಸುದ್ದಿಯನ್ನು ಶೇರ್ ಮಾಡಿ

Modi--01

ಜಂಜ್‍ಗಿರ್-ಚಂಪಾ , ಸೆ.23 (ಪಿಟಿಐ)- ಕೇಂದ್ರ ಮತ್ತು ರಾಜ್ಯಗಳಲ್ಲಿ ಯಾವ ಸರ್ಕಾರ ಸ್ಥಿರವಾಗಿರುತ್ತದೆ ಎಂಬುದನ್ನು ಮತದಾರರಿಗೆ ಚೆನ್ನಾಗಿ ತಿಳಿದಿದೆ. ಉತ್ತಮ ಆಡಳಿತ ನೀಡುವ ಸರ್ಕಾರ ಆಯ್ಕೆ ಮಾಡುವಷ್ಟು ಪ್ರೌಢಜ್ಞೆಯನ್ನು ಜನರು ಹೊಂದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.  ಛತ್ತೀಸ್‍ಗಢದಲ್ಲಿ ಹೆದ್ದಾರಿ ಯೋಜನೆಗಳು ಮತ್ತು ಬಿಲಾಸ್‍ಪುರ್-ಅನುಪ್ಪುರ್ ರೈಲ್ವೆ ಮಾರ್ಗಕ್ಕೆ ಶಿಲಾನ್ಯಾಸ ನೆರವೇರಿಸಿದ ನಂತರ ಜಂಜ್‍ಗಿರ್-ಚಂಪಾದಲ್ಲಿ ಸಾರ್ವಜನಿಕ ರ್ಯಾಲಿಯೊಂದರಲ್ಲಿ ಮೋದಿ ಮಾತನಾಡಿದರು.

ಉತ್ತರಾಖಂಡ್, ಜಾರ್ಖಂಡ್ ಮತ್ತು ಛತ್ತೀಸ್‍ಗಢ-ಈ ಮೂರು ರಾಜ್ಯಗಳಿಗೆ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ನೀಡಿರುವ ಕೊಡುಗೆಗಳ ಗುಣಗಾನ ಮಾಡಿದ ಪ್ರಧಾನಿ, ಅವರ ದೂರದೃಷ್ಟಿಯಿಂದಾಗಿ ಈ ರಾಜ್ಯಗಳು ಅಭಿವೃದ್ದಿಯಾಗಿದ್ದು, ಅದನ್ನು ನಮ್ಮ ಸರ್ಕಾರ ಮುಂದುವರಿಸಿಕೊಂಡು ಹೋಗುತ್ತಿದೆ ಎಂದರು.   ದೇಶದ ಪ್ರತಿ ಬಡವರಿಗೂ 2020ರ ವೇಳೆಗೆ ಸೂರು ಒದಗಿಸಲು ಕೇಂದ್ರ ಸರ್ಕಾರ ಬದ್ದವಾಗಿದೆ. ದೇಶ ಮತ್ತು ರಾಜ್ಯಗಳ ಸರ್ವಾಂಗೀಣ ಅಭಿವೃದ್ದಿ ನಮ್ಮ ಮೂಲಮಂತ್ರವಾಗಿದೆ ಎಂದು ಮೋದಿ ಪುನರುಚ್ಚರಿಸಿದರು.

Facebook Comments

Sri Raghav

Admin