ಪಂಜಾಬ್ ಜಿಲ್ಲಾ ಪರಿಷತ್, ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಮುನ್ನಡೆ

ಈ ಸುದ್ದಿಯನ್ನು ಶೇರ್ ಮಾಡಿ

Congress

ಚಂಡಿಗಢ, ಸೆ.23 (ಪಿಟಿಐ)- ಪಂಜಾಬ್ ಜಿಲ್ಲಾ ಪರಿಷತ್ ಮತ್ತು ಪಂಚಾಯಿತಿ ಸಮಿತಿ ಚುನಾವಣೆಗಳ ಮತ ಎಣಿಕೆ ಕಾರ್ಯ ಮುಂದುವರಿದಿದ್ದು, ಕಾಂಗ್ರೆಸ್ ಭರ್ಜರಿ ಮುನ್ನಡೆ ಸಾಧಿಸಿದೆ. ಇಂದು ರಾತ್ರಿ ವೇಳೆಗೆ ಪೂರ್ಣ ಫಲಿತಾಂಶ ಪ್ರಕಟಗೊಳ್ಳಲಿದೆ. ಶಿರೋಮಣಿ ಅಕಾಲಿದಳ್-ಬಿಜೆಪಿ ಮೈತ್ರಿಕೂಟಕ್ಕೆ ಈ ಚುನಾವಣೆಯಲ್ಲಿ ಮುಖಭಂಗವಾಗಿದ್ದು, ಸ್ಪರ್ಧಾ ಕಣದಲ್ಲಿದ್ದ ಅಮ್ ಆದ್ಮಿ ಪಾರ್ಟಿ(ಎಎಪಿ) ನೆಲಕಚ್ಚಿದೆ.

ಜಿ ಲ್ಲಾ ಪರಿಷತ್ ಮತ್ತು ಪಂಚಾಯಿತಿ ಸಮಿತಿಗಳಿಗೆ ಬುಧವಾರ ಚುನಾವಣೆ ನಡೆದಿತ್ತು. 354 ಜಿಲ್ಲಾ ಪರಿಷತ್ ಸದಸ್ಯರು ಹಾಗೂ 2,900 ಪಂಚಾಯಿತಿ ಸಮಿತಿ ಸದಸ್ಯರನ್ನು ಚುನಾಯಿಸಲು ಸೆ.19ರಂದು ಮತದಾನವಾಗಿತ್ತು. ನಿನ್ನೆಯಿಂದ ಮತ ಎಣಿಕೆ ಕಾರ್ಯ ನಡೆಯುತ್ತಿದೆ.  ಈಲ್ಲಾ ಪರಿಷತ್‍ನ 33 ಅಭ್ಯರ್ಥಿಗಳು ಹಾಗೂ ಪಂಚಾಯಿತಿ ಸಮಿತಿಗಳ 369 ಹುರಿಯಾಳುಗಳು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈವರೆಗೆ ಲಭ್ಯವಿರುವ ಫಲಿತಾಂಶದಂತೆ ಜಿಲ್ಲಾ ಪರಿಷತ್ ಮತ್ತು ಪಂಚಾಯಿತಿ ಸಮಿತಿಗಳ ಬಹುತೇಕ್ಷ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸುತ್ತಿದೆ ಎಂದು ಚುನಾವಣಾ ಆಯೋಗದ ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ. ಎಲ್ಲ ಜಿಲ್ಲೆಗಳ ಫಲಿತಾಂಶಗಳ ನಂತರ ಇಂದು ಮಧ್ಯರಾತ್ರಿ ವೇಳೆಗೆ ನಿಖರ ಫಲಿತಾಂಶ ಲಭ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.

ಗುರುದಾಸ್‍ಪುರ್ ಜಿಲ್ಲೆಯ 213 ಪಂಚಾಯಿತಿ ಸಮಿತಿಗಳಲ್ಲಿ ಕಾಂಗ್ರೆಸ್ 212ರಲ್ಲಿ ಭರ್ಜರಿ ಜಯ ದಾಖಲಿಸಿದ್ದು, ಒಂದು ಸ್ಥಾಪ ಸ್ವತಂತ್ರ ಅಭ್ಯರ್ಥಿ ಪಾಲಾಗಿದೆ. ಉಳಿದ ಜಿಲ್ಲೆಗಳಲ್ಲೂ ಕಾಂಗ್ರೆಸ್ ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ.

Facebook Comments

Sri Raghav

Admin