ಹುಷಾರ್, ರೈಲಿನಲ್ಲಿ ಮಹಿಳೆಯರನ್ನು ಕೆಣಕಿದರೆ 3 ವರ್ಷ ಜೈಲು..!

ಈ ಸುದ್ದಿಯನ್ನು ಶೇರ್ ಮಾಡಿ

Train-n-01

ನವದೆಹಲಿ, ಸೆ.23 (ಪಿಟಿಐ)- ರೈಲಿನಲ್ಲಿ ಮಹಿಳೆಯರನ್ನು ಕಿಚಾಯಿಸುವುದು, ಕೀಟಲೆ ಮಾಡುವುದು ಅಥವಾ ಕಿರುಕುಳ ನೀಡುವುದಕ್ಕೆ ಕಡಿವಾಣಿ ಹಾಕಲು ರೈಲ್ವೆ ರಕ್ಷಣಾ ಪಡೆ(ಆರ್‍ಎಎಫ್) ಮುಂದಾಗಿದೆ. ಇಂಥ ಕಾಮಣ್ಣರಿಗೆ ಮೂರು ವರ್ಷ ಶಿಕ್ಷೆ ನೀಡಲು ಹೊಸ ಕಾನೂನು ರೂಪಿಸಲಾಗುತ್ತಿದೆ.

ರೈಲುಗಳಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಆರ್‍ಎಎಫ್ ರೈಲ್ವೆ ಕಾಯ್ದೆಯಲ್ಲಿ ಹೊಸ ಕಾನೂನುಗಳನ್ನು ಸೇರಿಸಲು ಪ್ರಸ್ತಾವನೆ ಸಲ್ಲಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಾಯ್ದೆಗೆ ತಿದ್ದುಪಡಿಯಾದಲ್ಲಿ, ಭಾರತೀಯ ದಂಡ ಸಂಹಿತೆ(ಐಪಿಸಿ) ಅಡಿ ಇಂಥ ಅಪರಾಧಗಳಿಗೆ ಇರುವ ಗರಿಷ್ಠ ಒಂದು ವರ್ಷ ಜೈಲುವಾಸದ ಶಿಕ್ಷೆ ಮೂರು ಪಟ್ಟು ಹೆಚ್ಚಾಗಲಿದೆ.  ರೈಲ್ವೆ ಪೊಲೀಸರ ಸಹಾಯ ಇಲ್ಲದೇ ತಪ್ಪಿತಸ್ಥರು ಮತ್ತು ಕಾಮಣ್ಣರನ್ನು ತಾವೇ ಖುದ್ದಾಗಿ ಹಿಡಿದು ಕಾನೂನು ಕ್ರಮಕ್ಕೆ ಒಳಪಡಿಸಲು ಮಹಿಳೆಯರಿಗೆ ಈ ಕಾಯ್ದೆಯಲ್ಲಿ ಅವಕಾಶವಿದೆ.

Train-03

Train-02

Facebook Comments

Sri Raghav

Admin