ಮಹಾರಾಷ್ಟ್ರದಲ್ಲಿ ಗಣೇಶ ವಿಸರ್ಜನೆ ವೇಳೆ 18 ಮಂದಿ ನೀರುಪಾಲು

ಈ ಸುದ್ದಿಯನ್ನು ಶೇರ್ ಮಾಡಿ

Ganesha--02
ಮುಂಬೈ, ಸೆ.24-ಗಣೇಶ ಮಹೋತ್ಸವದ ಕೊನೆ ದಿನವಾದ ನಿನ್ನೆ ಮಹಾರಾಷ್ಟ್ರದ ವಿವಿಧೆಡೆ ವಿನಾಯಕನ ವಿಸರ್ಜನೆ ವೇಳೆ ಒಟ್ಟು 18 ಮಂದಿ ನೀರುಪಾಲಾಗಿದ್ದಾರೆ.  ಮಹರಾಷ್ಟ್ರದ ಮುಂಬೈ, ರಾಯ್‍ಗಡ, ಜಲ್ನಾ, ಪುಣೆ(ಗ್ರಾಮಾಂತರ), ಸತಾರ, ಭಂಡಾರ, ಪಿಂಪ್ರಿ-ಚಿಂಚ್‍ವಡ, ಬುಲ್ಧಾನ, ನಂದೇಡ್ ಮತ್ತು ಅಹಮದ್‍ನಗರ್ ಜಿಲ್ಲೆಗಳಲ್ಲಿ ಗಣೇಶ ಮೂರ್ತಿ ವಿರ್ಸಜನೆ ಸಂದರ್ಭದಲ್ಲಿ ಒಟ್ಟು 18 ಮಂದಿ ಜಲಸಮಾಧಿಯಾಗಿದ್ದಾರೆ ಎಂದು ನಿಯಂತ್ರಣ ಕೊಠಡಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.   ದಕ್ಷಿಣ ಮುಂಬೈನಲ್ಲಿ ಇಂದು ಮುಂಜಾನೆ ದೋಣಿ ಮಗುಚಿ ನೀರುಪಾಲಾಗುತ್ತಿದ್ದ ಐವರನ್ನು ರಕ್ಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Facebook Comments

Sri Raghav

Admin