‘ರಸ್ತೆ ಗುಂಡಿಗಳಿಲ್ಲದ ವಾರ್ಡ್’ಗಳನ್ನು ಪರಿಶೀಲಿಸಿ ವರದಿ ನೀಡಿ’

ಈ ಸುದ್ದಿಯನ್ನು ಶೇರ್ ಮಾಡಿ

mysore to bengaluru road

ಬೆಂಗಳೂರು, ಸೆ.24-ಬಿಬಿಎಂಪಿ ವ್ಯಾಪ್ತಿಯ ರಸ್ತೆ ಗುಂಡಿಗಳಲ್ಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ನೀಡಿದ ವರದಿಯ ಬಗ್ಗೆ ಪರಿಶೀಲನೆ ನಡೆಸಿ ಮಾಹಿತಿ ನೀಡುವಂತೆ ಸೇನಾಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ರಚಿಸಿರುವ ಹೈಕೋರ್ಟ್ ನಾಳೆಯೊಳಗೆ ವರದಿ ನೀಡುವಂತೆ ಸೂಚಿಸಿದೆ. ಮಿಲಿಟರಿ ಎಂಜನಿಯರಿಂಗ್ ವಿಭಾಗದ ಅಧೀಕ್ಷಕ ದಿನೇಶ್ ಅಗರವಾಲ್ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಜೆ.ಉಮಾ ನೇತೃತ್ವದಲ್ಲಿ ಸಮಿತಿ ರಚಿಸಿರುವ ಹೈಕೋರ್ಟ್ ಗುಂಡಿ ಮುಕ್ತವಾಗಿದೆ ಎನ್ನಲಾದ 18 ವಾರ್ಡ್‍ಗಳ ಪರಿಶೀಲನೆ ನಡೆಸಿ ನಾಳೆಯೇ ವರದಿ ಸಲ್ಲಿಸುವಂತೆ ತಿಳಿಸಿದೆ.

ರಸ್ತೆ ನಿರ್ವಹಣೆ ಸಂಬಂಧ ಸಲ್ಲಿಕೆಯಾಗಿದ್ದ ಪಿಐಎಲ್ ವಿಚಾರಣೆ ಸಂದರ್ಭದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಗುಂಡಿ ಇಲ್ಲದ ವಾರ್ಡ್‍ಗಳ ವಿವರಗಳನ್ನು ಹೈಕೋರ್ಟ್ ವಿಭಾಗೀಯ ಪೀಠ ಕೇಳಿತ್ತು. ಮಲ್ಲೇಶ್ವರಂನ 7, ಮಹಾಲಕ್ಷ್ಮಿಲೇಔಟ್‍ನ 7, ಯಲಹಂಕದ ನಾಲ್ಕು ವಾರ್ಡ್‍ಗಳಲ್ಲಿ ಗುಂಡಿಗಳಿಲ್ಲ ಎಂಬ ಮಾಹಿತಿಯನ್ನು ಬಿಬಿಎಂಪಿ ಪರ ವಕೀಲರು ಹೈಕೋರ್ಟ್‍ಗೆ ಸಲ್ಲಿಸಿದ್ದರು.

ಗುಂಡಿ ಮುಕ್ತವಾಗಿದೆ ಎನ್ನಲಾದ 18 ವಾರ್ಡ್‍ಗಳ ಪರಿಶೀಲನೆ ನಡೆಸಿ ನಾಳೆಯೇ ಪ್ರಾಥಮಿಕ ವರದಿ ಸಲ್ಲಿಸುವಂತೆ ವಿಚಾರಣೆ ನಡೆಸಿದ ಮುಖ್ಯನ್ಯಾಯಾಧೀಶರಾದ ದಿನೇಶ್‍ಮಾಹೇಶ್ವರಿ ಅವರ ನೇತೃತ್ವದ ವಿಭಾಗೀಯ ಪೀಠ, ಸೇನೆಯ ಎಂಜನಿಯರಿಂಗ್ ವಿಭಾಗದ ಮುಖ್ಯಸ್ಥರನ್ನು ಕರೆಸಿ ಪರಿಶೀಲಿಸುವಂತೆ ಸೂಚಿಸಿದೆ. ಇಂದು ಮಧ್ಯಾಹ್ನ 3.30ರಿಂದಲೇ ಪರಿಶೀಲನೆ ಆರಂಭಿಸಬೇಕು. ಸಮಿತಿಯ ಕೆಲಸಕ್ಕೆ ಅಗತ್ಯವ ವ್ಯವಸ್ಥೆ ಕಲ್ಪಿಸುವುದು ಪೊಲೀಸ್ ಆಯುಕ್ತರ ಜವಾಬ್ದಾರಿಯಾಗಿದೆ ಎಂದು ಮುಖ್ಯ ನ್ಯಾಯಾಧೀಶರು ಖಡಕ್ ಸೂಚನೆ ನೀಡಿದ್ದಾರೆ.

Facebook Comments

Sri Raghav

Admin