ಬಿ.ಸಿ.ಪಾಟೀಲ್ ಕಾರು ಅಡ್ಡಗಟ್ಟಿ ಬಿಜೆಪಿ ಸೇರುವಂತೆ ದುಂಬಾಲು ಬಿದ್ದ ಕಾರ್ಯಕರ್ತರು.!

ಈ ಸುದ್ದಿಯನ್ನು ಶೇರ್ ಮಾಡಿ

BC-Patil--01

ಚಿತ್ರದುರ್ಗ, ಸೆ.24- ಕಾಂಗ್ರೆಸ್‍ನಲ್ಲಿ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿರುವ ಶಾಸಕ ಬಿ.ಸಿ.ಪಾಟೀಲ್ ಅವರ ಕಾರು ಅಡ್ಡಗಟ್ಟಿದ ಬಿಜೆಪಿ ಕಾರ್ಯಕರ್ತರು, ಬಿಜೆಪಿ ಸೇರುವಂತೆ ಒತ್ತಾಯಿಸಿದ ಘಟನೆ ಚಿತ್ರದುರ್ಗದ ಸಿರಿಗೆರೆಯಲ್ಲಿ ನಡೆದಿದೆ.  ಅಣ್ಣಾ ಬಿಜೆಪಿಗೆ ಸೇರಣ್ಣ ಎಂದು ಶಾಸಕ ಬಿ.ಸಿ ಪಾಟೀಲ್‍ಗೆ ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ನಿನ್ನೆ ರಾತ್ರಿ ಚಿತ್ರದುರ್ಗದ ಸಿರಿಗೆರೆಯಲ್ಲಿ. ಸಿರಿಗೆರೆಯ ತರಳಬಾಳು ಬೃಹನ್ಮಠದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ವಾಪಾಸಾಗುತ್ತಿದ್ದಾಗ ಶಾಸಕರ ಕಾರು ಅಡ್ಡಗಟ್ಟಿದ ಬಿ.ಎಸ್.ಯಡಿಯೂರಪ್ಪ ಅಭಿಮಾನಿಗಳು, ಅವರನ್ನು ಬಿಜೆಪಿ ಸೇರುವಂತೆ ದುಂಬಾಲು ಬಿದ್ದಿದ್ದಾರೆ.

ಅಣ್ಣ ಬಿಜೆಪಿ ಸೇರಣ್ಣ. ಯಡಿಯೂರಪ್ಪ ಜತೆಗಿರಿ ಅಣ್ಣ. ಯಡಿಯೂರಪ್ಪಗೆ ಜೈ, ಬಿ.ಸಿ. ಪಾಟೀಲ್‍ಗೆ ಜೈ ಎಂದು ಘೋಷಣೆ ಕೂಗಿದ್ದಾರೆ. ಕಾರು ಮುತ್ತಿಕೊಂಡ ಕಾರ್ಯಕರ್ತರನ್ನು ತೆರವುಗೊಳಿಸಲು ಪೊಲೀಸರು ಹರಸಾಹಸಪಡಬೇಕಾಯಿತು.

ಘಟನೆಯಿಂದ ಕಸಿವಿಸಿಗೊಂಡ ಬಿ.ಸಿ.ಪಾಟೀಲ್ ಯಾವುದೇ ಪ್ರತಿಕ್ರಿಯೆ ನೀಡದೆ ಕಾರಿನಲ್ಲಿ ತೆರಳಿದರು. ಹಾವೇರಿ ಜಿಲ್ಲೆಯ ಹಿರೇಕೆರೂರು ಕ್ಷೇತ್ರದಿಂದ ಎರಡನೇ ಬಾರಿಗೆ ಕಾಂಗ್ರೆಸ್‍ನಿಂದ ಆಯ್ಕೆಯಾಗಿರುವ ಬಿ.ಸಿ ಪಾಟೀಲ್ ಅವರು ಸಚಿವ ಸ್ಥಾನದ ಪ್ರಮುಖ ಆಕಾಂಕ್ಷಿಯಾಗಿದ್ದಾರೆ. ಈಗಾಗಲೆ ಅವರು ಕಾಂಗ್ರೆಸ್ ನಾಯಕರೊಂದಿಗೆ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಆದರೆ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಕಡಿಮೆ ಇರುವ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಅವರನ್ನು ಪಕ್ಷ ಸೇರುವಂತೆ ಒತ್ತಾಯಿಸಿದ್ದಾರೆ.

ಈ ವೇಳೆ ಬಿಜೆಪಿ ಅಭಿಮಾನಿಗಳ ಒತ್ತಾಯದಿಂದ ಕಸಿವಿಸಿಗೊಂಡ ಬಿ.ಸಿ ಪಾಟೀಲ್ ಏನೂ ಮಾತನಾಡದೇ ಕಾರಿನಲ್ಲಿ ತೆರಳಿದರು. ಈ ವೇಳೆ ಶಾಸಕರ ಕಾರನ್ನು ಮುತ್ತಿಕೊಂಡ ಜನರನ್ನು ನಿಭಾಯಿಸಲು ಪೊಲೀಸರು ಹರ ಸಾಹಸಪಡಬೇಕಾಯಿತು.

ಇದಕ್ಕೂ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪಾಟೀಲ್, ನಾನೂ ಸಚಿವ ಸ್ಥಾನದ ಆಕಾಂಕ್ಷಿ.  ಕೊಡುತ್ತಾರೆ ಎಂಬ ಆಶಾಭಾವನೆಯಿಂದ ಇದ್ದೇನೆ. ನಾನೂ ಮುಂಬೈ, ಹೈದರಾಬಾದ್‌ಗೆ ಹೋಗಿದ್ದೇನೆ ಎಂಬ ಗಾಳಿ  ಸುದ್ದಿಯನ್ನು ಕೆಲವರು ಹಬ್ಬಿಸುತ್ತಿದ್ದಾರೆ. ಆದರೆ, ಹಿರೇಕೆರೂರಿನಲ್ಲಿಯೇ ಇದ್ದೇನೆ. ಸಿರಿಗೆರೆ ಕಾರ್ಯಕ್ರಮದಲ್ಲಿ  ಭಾಗವಹಿಸಿದ್ದೇನೆ. ಪುನಃ ಹಿಂದಿರುಗುತ್ತಿದ್ದೇನೆ ಎಂದರು.

ಲಿಂಗಾಯತ ರಾಜ್ಯದಲ್ಲೇ ದೊಡ್ಡ ಸಮುದಾಯ. ಆದರೆ, ಈ ಸಮುದಾಯದವರು ಮೇಲೆ ಬರುತ್ತಾರೆ ಎಂಬ ಕಾರಣಕ್ಕಾಗಿ  ತುಳಿಯಲು ಕೆಲವರು ಮುಂದಾಗಿದ್ದಾರೆ. ಅಲ್ಲದೆ, ಎಲ್ಲೋ ಒಂದು ಕಡೆ ಕಡೆಗಣಿಸುತ್ತಿದ್ದಾರೆ ಎಂಬ ಭಾವನೆ ಉಂಟಾಗಿದೆ. ನಮ್ಮ ಸಮಾಜ ಕಾಂಗ್ರೆಸ್‌ಗೆ ಸಾಕಷ್ಟು ಕೊಡುಗೆ ನೀಡಿದೆ.  ಅದರಲ್ಲೂ ಸಾದ ಲಿಂಗಾಯತ ಸಮಾಜದಿಂದ ನಾನ್ನೊಬ್ಬನ್ನೇ ಶಾಸಕನಾಗಿದ್ದು, ಮೂರು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದೇನೆ. ಹಾವೇರಿ ಜಿಲ್ಲೆಯ ಏಕೈಕ
ಕಾಂಗ್ರೆಸ್ ಶಾಸಕ ಆಗಿರುವ ನನಗೆ ಪಕ್ಷದ ಹೈಕಮಾಂಡ್ ಪರಿಗಣಿಸಿ ಸಚಿವ ಸ್ಥಾನ ನೀಡುವ ವಿಶ್ವಾಸವಿದೆ ಎಂದು ಹೇಳಿದರು.

Facebook Comments

Sri Raghav

Admin