ಯಶಸ್ವಿಯಾಗಿ ಕ್ಷಿಪಣಿ ಪ್ರತಿರೋಧಕ ಪರೀಕ್ಷೆ ನಡೆಸಿದ ಭಾರತ

ಈ ಸುದ್ದಿಯನ್ನು ಶೇರ್ ಮಾಡಿ

India--01

ಬಾಲಸೋರ್(ಪಿಟಿಐ), ಸೆ.24-ಭಾರತದ ರಕ್ಷಣಾ ಇಲಾಖೆ ಎರಡು ಪದರಗಳ ಖಂಡಾಂತರ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಅಭಿವೃದ್ದಿಯಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಒಡಿಶಾ ಕರಾವಳಿಯಲ್ಲಿ ನಿನ್ನೆ ರಾತ್ರಿ ಕ್ಷಿಪಣಿ ಪ್ರತಿರೋಧಕ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.    ಬಾಲಸೋರ್‍ನ ಅಬ್ದುಲ್ ಕಲಾಂ ದ್ವೀಪ(ವೀಲ್ಹರ್ ಐಲ್ಯಾಂಡ್)ದ ಸಮಗ್ರ ಪರೀಕ್ಷಾ ವಲಯದಿಂದ(ಐಟಿಆರ್) ನಿನ್ನೆ ರಾತ್ರಿ 8.05ರಲ್ಲಿ ಕ್ಷಿಪಣಿ ಪ್ರತಿರೋಧಕವನ್ನು ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಲಾಯಿತು ಎಂದು ಉನ್ನತ ಮೂಲಗಳು ತಿಳಿಸಿವೆ.

ಭೂಮಿಯ ವಾತಾವರಣದಿಂದ 50 ಕಿ.ಮೀ. ಎತ್ತರದಲ್ಲಿನ ಪರಿಸರದಲ್ಲಿ ನಿಖರ ಗುರಿಗಳನ್ನು ತಲುಪುವ ಯೋಜನೆಯಲ್ಲಿ ಈ ಪೃಥ್ವಿ ರಕ್ಷಣಾ ವಾಹನ(ಪಿಡಿವಿ) ಕಾರ್ಯೋನ್ಮುಖವಾಗಲಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಘಟನೆ(ಡಿಆರ್‍ಡಿಒ)ಯ ಹಿರಿಯ ವಿಜ್ಞಾನಿಯೊಬ್ಬರು ಹೇಳಿದ್ದಾರೆ.

ಪಿಡಿವಿ ಪ್ರತಿರೋಧಕ ಮತ್ತು ನಿಖರ ಗುರಿಯ ಕ್ಷಿಪಣಿ-ಈ ಎರಡು ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಈ ಮೂಲಕ ಎರಡು ಪದರಗಳ ಖಂಡಾಂತರ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಅಭಿವೃದ್ದಿಯಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.   ಸ್ವಯಂಚಾಲಿತ ಅತ್ಯಾಧುನಿಕ ಕಾರ್ಯಾಚರಣೆಯಲ್ಲಿ, ರೆಡಾರ್‍ನಿಂz ವೈರಿಗಳ ಪ್ರಕ್ಷೇಪಕ ಕ್ಷಿಪಣಿಯನ್ನು ಪತ್ತೆ ಮಾಡುವ ಹಾಗೂ ಅವು ಚಲಿಸುವ ದಿಕ್ಕನ್ನು ಪತ್ತೆ ಮಾಡಿದ ಧ್ವಂಸಗೊಳಿಸುವ ಪ್ರಯೋಗವನ್ನು ಯಶಸ್ತಿಯಾಗಿ ನಿಭಾಯಿಸಲಾಗಿದೆ.

Facebook Comments

Sri Raghav

Admin