ಎನ್‍ಕೌಂಟರ್’ನಲ್ಲಿ ಜೆಇಎಂ ಕಮಾಂಡರ್ ಸೇರಿ ಇಬ್ಬರು ಉಗ್ರರು ಖತಂ

ಈ ಸುದ್ದಿಯನ್ನು ಶೇರ್ ಮಾಡಿ

Encounter

ಕುಪ್ವಾರ, ಸೆ.24-ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಒಂದೆಡೆ ಭಯೋತ್ಪಾದಕರ ಹಿಂಸಾಕೃತ್ಯಗಳು ಮುಂದುವರಿದಿದ್ದರೆ, ಅವರನ್ನು ಮಟ್ಟ ಹಾಕುವ ಕಾರ್ಯಾಚರಣೆಯನ್ನು ಭದ್ರತಾಪಡೆಗಳು ಮತ್ತಷ್ಟು ತೀವ್ರಗೊಳಿಸಿವೆ. ಕುಪ್ವಾರ ವಲಯದಲ್ಲಿ ಉಗ್ರರ ಒಳ ನುಸುಳುವಿಕೆಯನ್ನು ವಿಫಲಗೊಳಿಸಿರುವ ಯೋಧರು, ಜೈಷ್-ಎ-ಮಹಮದ್(ಜೆಇಎಂ)ನ ಕುಖ್ಯಾತ ಭಯೋತ್ಪಾದಕ ಸೇರಿ ಇಬ್ಬರು ಉಗ್ರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಾಕಿಸ್ತಾನದ ನಿಷೇಧಿತ ಉಗ್ರಗಾಮಿ ಸಂಘಟನೆ ಜೆಇಎಂ ಕಮಾಂಡರ್ ಅದಾನ್ ಹಾಗೂ ಮತ್ತೊಬ್ಬ ಆತಂಕವಾದಿಯನ್ನು ಎನ್‍ಕೌಂಟರ್‍ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.  ಕುಪ್ವಾರ ಸೆಕ್ಟರ್‍ನ ಪುಲ್ವಾಮ ಜಿಲ್ಲೆಯ ಮಿರ್ ಮೊಹಲ್ಲಾ ಏರ್ ಪಾಲ್ ಟ್ರಾಲ್ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹತನಾದ ಅದಾನ್ ಪಾಕಿಸ್ತಾನ ಮೂಲದವನಾಗಿದ್ದು, ಜೆಇಎಂ ಸಂಘಟನೆಯ ಕಮಾಂಡರ್ ಆಗಿದ್ದ. ಹಲವು ಹಿಂಸಾಕೃತ್ಯಗಳಲ್ಲಿ ಈತ ಶಾಮೀಲಾಗಿದ್ದ. ಕಾಶ್ಮೀರದ ವಿವಿಧೆಡೆ ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರಿದಿದೆ.

Facebook Comments

Sri Raghav

Admin