‘ಕರಿಚಿರತೆ’ಯ ಕಿರಿಕ್ ಕುರಿತು ಗೃಹ ಸಚಿವರ ಬಳಿ ಪಾನೀಪುರಿ ಕಿಟ್ಟಿ ಹೇಳಿದ್ದೇನು ಗೊತ್ತೇ…!

ಈ ಸುದ್ದಿಯನ್ನು ಶೇರ್ ಮಾಡಿ

Duniya-Vijay--01

ಬೆಂಗಳೂರು, ಸೆ.24- ನಟ ದುನಿಯಾ ವಿಜಿ ಮತ್ತು ಅವರ ತಂಡ ಮಾರುತಿಗೌಡನ ಮೇಲೆ ಜಾಕ್‍ರಾಡ್‍ನಿಂದ ಹಲ್ಲೆ ನಡೆಸಿರುವುದರಿಂದ ಗಂಭೀರಗಾಯಗಳಾಗಿವೆ ಎಂದು ಜಿಮ್ ಟ್ರೈನರ್ ಪಾನೀಪುರಿ ಕಿಟ್ಟಿ ಆರೋಪಿಸಿದ್ದಾರೆ. ಇಂದು ಬೆಳಗ್ಗೆ ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿ ದುನಿಯಾ ವಿಜಿ ಪ್ರಕರಣದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ವಕೀಲ ಶಾಮ್‍ಸುಂದರ್ ಅವರನ್ನು ನೇಮಿಸಬೇಕೆಂದು ಮನವಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಕಿಟ್ಟಿ ಮಾತನಾಡಿದರು.

ಹಲ್ಲೆಗೆ ಒಳಗಾಗಿರುವ ಮಾರುತಿಗೌಡರ ತಲೆಗೆ ಪೆಟ್ಟಾಗಿದೆ. ಎಡಗಣ್ಣಿನ ಭಾಗಕ್ಕೆ ಏಟು ಬಿದ್ದಿರುವುದರಿಂದ ಕಣ್ಣು ಮಂಜಾಗಿದೆ. ಬಾಯಿಯ ಬಳಿ ಗಾಯವಾಗಿದ್ದು 14 ಹೊಲಿಗೆ ಹಾಕಲಾಗಿದೆ. ವೈದ್ಯರು 48 ಗಂಟೆ ತೀವ್ರ ನಿಗಾಘಟಕದಲ್ಲಿ ಇಡುವಂತೆ ಹೇಳಿದ್ದಾರೆ. ಆನಂತರ ಅವರ ಪರಿಸ್ಥಿತಿ ಏನೆಂಬುದು ಸ್ಪಷ್ಟವಾಗಿ ತಿಳಿಯಲಿದೆ. ನಿನ್ನ ಸ್ಕ್ಯಾನಿಂಗ್ ಮಾಡಲಾಗಿದ್ದು, ಇಂದು ಅದರ ವರದಿ ನಮ್ಮ ಕೈ ಸೇರಲಿದೆ ಎಂದರು.

ದುನಿಯಾ ವಿಜಿ ಮತ್ತು ಅವರ ಗ್ಯಾಂಗ್ ಜಾಕ್‍ರಾಡ್‍ನಿಂದ ಹಲ್ಲೆ ನಡೆಸಿರುವುದಾಗಿ ಮಾರುತಿಗೌಡ ಹೇಳಿದ್ದಾರೆ. ಪೊಲೀಸರಿಗೂ ಅದೇ ರೀತಿ ಹೇಳಿಕೆ ನೀಡಿದ್ದಾರೆ. ಜಾಕ್‍ರಾಡ್‍ನಿಂದ ಥಳಿಸಿರುವುದರಿಂದ ಗಂಭೀರ ಗಾಯಗಳಾಗಿವೆ ಎಂದು ಕಿಟ್ಟಿ ಆಕ್ರೋಶ ವ್ಯಕ್ತಪಡಿಸಿದರು. ಪ್ರಕರಣದ ತನಿಖೆಯ ಬಗ್ಗೆ ನಮಗೆ ಸಮಾಧಾನವಿದೆ. ಪೊಲೀಸರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಅವರು ತೆಗೆದುಕೊಂಡ ಕ್ರಮಗಳ ಬಗ್ಗೆ ನಮಗೆ ವಿಶ್ವಾಸವಿದೆ. ನಮಗೆ ನ್ಯಾಯ ಸಿಗುವ ನಂಬಿಕೆ ಇದೆ. ಮಾಧ್ಯಮಗಳು ನಮಗೆ ಉತ್ತಮ ಸಹಕಾರ ನೀಡುತ್ತಿವೆ. ಅದಕ್ಕಾಗಿ ಧನ್ಯವಾದ ಹೇಳುತ್ತೇನೆ ಎಂದು ಕಿಟ್ಟಿ ಕೈ ಮುಗಿದರು.  ಇಂದು ಪರಮೇಶ್ವರ್ ಅವರನ್ನು ಭೇಟಿ ಮಾಡಿ ಘಟನೆ ಬಗ್ಗೆ ಸಂಪೂರ್ಣ ವಿವರ ನೀಡಿದ್ದೇವೆ. ಅವರು ಕೂಡ ಕಾನೂನಿನ ಪ್ರಕಾರ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ ಎಂದರು.

# ಹಸ್ತಕ್ಷೇಪ ಮಾಡುವುದಿಲ್ಲ:

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು, ಪೊಲೀಸರು ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಾರೆ. ದುನಿಯಾ ವಿಜಿ ಪ್ರಕರಣದಲ್ಲಿ ನಾನೇ ಆಗಲಿ ಬೇರೆ ಯಾರೇ ಆಗಲಿ ಹಸ್ತಕ್ಷೇಪ ಮಾಡುವುದಿಲ್ಲ. ಪೊಲೀಸರಿಗೆ ಯಾವ ರೀತಿ ಕ್ರಮ ಕೈಗೊಳ್ಳಬೇಕೆಂಬ ಸ್ಪಷ್ಟ ಅರಿವಿದೆ. ಅವರು ಅದರಂತೆ ಕ್ರಮ ಕೈಗೊಳ್ಳುತ್ತಾರೆ. ನಗರ ಪೊಲೀಸ್ ಆಯುಕ್ತರು ಈಗಾಗಲೇ ಪ್ರಕರಣದ ಬಗ್ಗೆ ಎಲ್ಲಾ ವಿವರ ಪಡೆದುಕೊಂಡಿದ್ದು, ಸೂಕ್ತ ಪ್ರಕರಣಗಳನ್ನು ಕೈಗೊಂಡಿದ್ದಾರೆ. ಮುಂದೆಯೂ ನ್ಯಾಯೋಚಿತವಾಗಿ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.  ಪಾನೀಪುರಿ ಕಿಟ್ಟಿ ಮತ್ತು ಅವರ ತಂಡಕ್ಕೆ ಪೊಲೀಸ್ ಕಮಿಷನರ್ ಅವರ ಜತೆ ಮಾತನಾಡಿ ನ್ಯಾಯ ಕೊಡಿಸುವುದಾಗಿ ಪರಮೇಶ್ವರ್ ಭರವಸೆ ನೀಡಿದರು ಎಂದು ತಿಳಿದು ಬಂದಿದೆ.

Facebook Comments

Sri Raghav

Admin