ಕೇರಳಕ್ಕೆ ಮತ್ತೆ ಕಾದಿದೆ ಆಪತ್ತು ..! ಮತ್ತೊಮ್ಮೊ ಭಾರಿ ಮಳೆ ಸಾಧ್ಯತೆ

ಈ ಸುದ್ದಿಯನ್ನು ಶೇರ್ ಮಾಡಿ

KJerala--01
ತಿರುವನಂತಪುರ, ಸೆ.24- ಕಳೆದ ತಿಂಗಳು ಮಳೆ ಹಾಗೂ ಪ್ರವಾಹದಿಂದ ತತ್ತರಿಸಿರುವ ಕೇರಳಕ್ಕೆ ಮತ್ತೆ ಅಪಾಯ ಕಾದಿದೆ. ನಾಳೆ ಮತ್ತು ನಾಡಿದ್ದು ಪಟ್ಟಣಂತಿಟ್ಟ, ಇಡುಕ್ಕಿ, ವಯನಾಡು ಮತ್ತು ತ್ರಿಶೂರ್‍ನಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹವಾಮಾನ ಇಲಾಖೆಯ ನೀಡಿರುವ ಸೂಚನೆಯಂತೆ ಈ ನಾಲ್ಕು ಜಿಲ್ಲೆಗಳಲ್ಲಿ 64.4 ಮಿ.ಮೀ ನಿಂದ 124 ಮಿ.ಮೀ ತನಕ ಮಳೆಯಾಗುವ ಸಾಧ್ಯತೆ ಇದೆ. ಪರಿಸ್ಥಿತಿಯನ್ನು ನಿಭಾಯಿಸಲು ತಯಾರಾಗಿರುವಂತೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಆಯಾ ಜಿಲ್ಲಾಡಳಿತ ಕಚೇರಿಗಳಿಗೆ ಸೂಚನೆ ನೀಡಿದೆ ಎಂದು ಮುಖ್ಯ ಮಂತ್ರಿ ಕಚೇರಿಯ ಮೂಲಗಳು ತಿಳಿಸಿವೆ.

ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಈಗಾಗಲೇ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಅಂತೆಯೇ ಕೇರಳದಲ್ಲೂ ಸೆ.25 ಮತ್ತು 26 ರಂದು ಧಾರಾಕಾರ ಮಳೆ ಸುರಿಯಲಿದ್ದು, ರಾಜ್ಯದ ಪಠಾನ್ತಿಟ್ಟ, ಇಡುಕ್ಕಿ, ಪಲಕ್ಕಾಡ್, ತ್ರಿಶೂರ್ ಮತ್ತು ವಯ್ನಾಡ್ ಜಿಲ್ಲೆಯ ಜನರಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.

ಈ ಕುರಿತು ಸ್ವತಃ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟ್ವೀಟ್ ಮಾಡಿದ್ದು, ಪಠಾನ್ತಿಟ್ಟ, ಇಡುಕ್ಕಿ, ಪಲಕ್ಕಾಡ್, ತ್ರಿಶೂರ್ ಮತ್ತು ವಯ್ನಾಡ್ ಜಿಲ್ಲೆಗಳಲ್ಲಿ ಛ್ಝ್ಝಿಟಡಿ Z್ಝಛ್ಟಿಠಿ ಘೋಷಣೆ ಮಾಡಲಾಗಿದ್ದು, ಸುಮಾರು 64.4 ರಿಂದ 124.4 ಮಿ.ಮೀ. ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ ಎಂದಿದ್ದಾರೆ. ಜೊತೆಗೆ ಈಗಾಗಲೇ ರಾಹ್ಯ ವಿಪತ್ತು ನಿರ್ವಹಣಾ ದಳ ಕ್ಕೆ ಮಳೆ ಮುನ್ಸೂಚನೆ ಇರುವ ಎಲ್ಲಾ ಜಿಲ್ಲೆಗಳಲ್ಲೂ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಆದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೇರಳದಲ್ಲಿ ಆಗಸ್ಟ್ ತಿಂಗಳ ಮೊದಲೆರಡು ವಾರ ಸುರಿದ ನಿರಂತರ ಮಳೆಗೆ ಸುಮಾರು 350 ಕ್ಕೂ ಹೆಚ್ಚು ಜನರು ಮೃತರಾಗಿದ್ದು, ಇದುವರೆಗೂ 19512 ನಷ್ಟ ಸಂಭವಿಸಿತ್ತು. ಲಕ್ಷಕ್ಕೂ ಹೆಚ್ಚು ಜನ ನಿರಾಶ್ರಿತರಾಗಿದ್ದು, ದೇಶದಾದ್ಯಂತ ಹರಿದುಬಂದ ದೇಣಿಗೆಯ ನೆರವಿನಿಂದ ಕೇರಳವನ್ನು ಮತ್ತೆ ಕಟ್ಟುವ ಕೆಲಸ ನಡೆಯುತ್ತಿದೆ. ಆದರೆ ಈ ನಡುವೆ ಮತ್ತೊಮ್ಮೆ ಮಳೆಯ ಮುನ್ಸೂಚನೆ ದೊರೆತಿದ್ದು ದೇವರ ನಾಡಿನ ಜನರ ನಿದ್ದೆ ಕೆಡಿಸಿದೆ. ಕಳೆದ ತಿಂಗಳು ಕೇರಳದಲ್ಲಿ ಮಳೆಯು 350 ಮಂದಿಯನ್ನು ಬಲಿ ತೆಗೆದುಕೊಂಡಿತ್ತು. ಲಕ್ಷಾಂತರ ಮಂದಿ ಮನೆ ಕಳೆದುಕೊಂಡಿದ್ದರು.

Facebook Comments

Sri Raghav

Admin