ರೇಪ್ ಪ್ರಕರಣದಲ್ಲಿ ಅಪ್ರಾಪ್ತೆ ಸಮ್ಮತಿ ಇದ್ದರೂ ಅದು ಅಪರಾಧ : ಕೋರ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Rape-Victims

ಥಾಣೆ(ಮಹಾರಾಷ್ಟ್ರ), ಸೆ.25-ಕಾನೂನು ದೃಷ್ಟಿಯಲ್ಲಿ ಅಪ್ರಾಪ್ತೆಯ ಸಮ್ಮತಿಯನ್ನು ಅತ್ಯಾಚಾರ ಪ್ರಕರಣಗಳಲ್ಲಿ ಒಪ್ಪಿಗೆಯಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿರುವ ಮಹಾರಾಷ್ಟ್ರದ ನ್ಯಾಯಾಲಯವೊಂದು ಆರೋಪಿಗೆ ಏಳು ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.

ಕಾಜುವಾಡಿ ಬಡಾವಣೆಯಲ್ಲಿ 2015ರಲ್ಲಿ 16 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ 31 ವರ್ಷ ದೇವೇಂದ್ರ ಗುಪ್ತ ಎಂಬಾತನಿಗೆ ಥಾಣೆ ಜಿಲ್ಲಾ ನ್ಯಾಯಾಧೀಶ ಪಿ.ಪಿ. ಜಾಧವ್ 7 ವರ್ಷ ಕಠಿಣ ಶಿಕ್ಷೆ ಹಾಗೂ ಮನೆಯೊಳಗೆ ಅತಿಕ್ರಮಣ ಪ್ರವೇಶಿಸಿದ್ದಾಗಿ ಒಂದು ವರ್ಷ ಕಠಿಣ ಸಜೆ ವಿಧಿಸಿದರು.

ಮನೆಗೆ ನುಗ್ಗಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ಆರೋಪಿ ಸಿಕ್ಕಿ ಬಿದ್ದಿದ್ದ. ಈ ಕೃತ್ಯ ಎಸಗುವುದಕ್ಕೆ ಮುನ್ನ ಇವರಿಬ್ಬರ ನಡುವೆ ಲೈಂಗಿಕ ಸಂಪರ್ಕ ಇತ್ತು ಎಂಬುದು ನ್ಯಾಯಾಧೀಶರ ಗಮನಕ್ಕೆ ಬಂದಿತು.

ಇಂಥ ಸನ್ನಿವೇಶಗಳಲ್ಲಿ ಸಂತ್ರಸ್ತೆಯ ವಯೋಮಾನವನ್ನು ಗಣನೆಗೆ ತೆಗೆದುಕೊಂಡರೆ, ಕಾನೂನು ದೃಷ್ಟಿಯಲ್ಲಿ ಅಪ್ರಾಪ್ತೆಯ ಸಮ್ಮತಿಯನ್ನು ಒಪ್ಪಿಗೆಯಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿ ಅತ್ಯಾಚಾರ ಅಪರಾಧಿಗೆ ನ್ಯಾಯಾಧೀಶರು ಶಿಕ್ಷೆ ವಿಧಿಸಿದರು.
.

Facebook Comments

Sri Raghav

Admin