ಶತ್ರುಘ್ನ ಸಿನ್ಹಾ ಹಾಗೂ ಯಶ್ವಂತ್ ಸಿನ್ಹಾಗೆ ಎಎಪಿ ಗಾಳ..?

ಈ ಸುದ್ದಿಯನ್ನು ಶೇರ್ ಮಾಡಿ

Kejriwal--01

ನವದೆಹಲಿ, ಸೆ.25 (ಪಿಟಿಐ)-ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದಿಂದ ಸ್ಪರ್ಧಿಸಲು ಕೇಂದ್ರದ ಮಾಜಿ ಸಚಿವ ಯಶ್ವಂತ್ ಸಿನ್ಹಾ ಹಾಗೂ ಸಂಸದ-ಬಿಜೆಪಿ ಬಂಡಾಯ ನಾಯಕ ಶತ್ರುಘ್ನ ಸಿನ್ಹಾ ಅವರನ್ನು ಸೆಳೆಯಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿಬಾಲ್ ನೇತೃತ್ವದ ಅಮ್ ಆದ್ಮಿ ಪಕ್ಷ(ಎಎಪಿ) ಶತ ಪ್ರಯತ್ನ ನಡೆಸುತ್ತಿದೆ.

ಕೇಂದ್ರದ ಮಾಜಿ ಸಚಿವ ಅರುಣ್ ಶೌರಿ, ಬಿಜೆಪಿಯ ಮತ್ತೊಬ್ಬ ಬಂಡಾಯ ಸಂಸದ ಕೀರ್ತಿ ಅಜಾದ್ ಅವರೂ ಕೂಡ ಎಎಪಿ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ದೆಹಲಿ ಕ್ಷೇತ್ರದಿಂದ ಬಿಜೆಪಿ ಮಾಜಿ ನಾಯಕಯಶ್ವಂತ್ ಸಿನ್ಹಾ ಆಮ್ ಆದ್ಮಿ ಪಕ್ಷ(ಎಎಪಿ)ದಿಂದ ಸ್ಪರ್ಧಿಸುವ ಸಾಧ್ಯತೆ ದಟ್ಟವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸಿನ್ಹಾರನ್ನು ಎಎಪಿಯಿಂದ ಚುನಾವಣಾ ಕಣಕ್ಕಿಳಿಸಲು ಸಮಾಲೋಚನೆಗಳು ಮುಂದುವರಿದಿವೆ ಎಂದು ಪಕ್ಷದ ಹಿರಿಯ ಧುರೀಣರೊಬ್ಬರು ತಿಳಿಸಿದ್ದಾರೆ. ಇದರೊಂದಿಗೆ ದೆಹಲಿ ಲೋಕಸಭಾ ಕ್ಷೇತ್ರ ಕದನ ಕುತೂಹಲ ಕೆರಳಿಸಲಿದೆ.  ಪಶ್ಚಿಮ ದೆಹಲಿ ಲೋಕಸಭಾ ಕ್ಷೇತ್ರದಿಂದ ಸಂಸದ ಹಾಗೂ ಬಿಜೆಪಿ ಬಂಡಾಯ ನಾಯಕ ಶತ್ರುಘ್ನ ಸಿನ್ಹಾ ಅವರನ್ನು ಅಖಾಡಕ್ಕೆ ಇಳಿಸಲು ಚರ್ಚೆ ನಡೆದಿದೆಯಾದರೂ, ಅವರು ಬಿಹಾರದ ಪಟ್ನಾದ ಸಾಹಿಬ್ ಕ್ಷೇತ್ರದಿಂದ ಹೊರಬರಲು ಒಲವು ತೋರುತ್ತಿಲ್ಲ ಎಂದು ಎಎಪಿ ಮುಖಂಡರೊಬ್ಬರು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಕಟುವಾಗಿ ಟೀಕಿಸಿ ಬಿಜೆಪಿಯಿಂದ ಹೊರಬಂದಿರುವ ಯಶ್ಮಂತ್ ಸಿನ್ಹಾ ಅವರ ವರ್ಚಸ್ಸನ್ನು ಬಳಕೆ ಮಾಡಿಕೊಳ್ಳಲು ಮುಂದಾಗಿರುವ ಎಎಪಿ, ದೆಹಲಿ ಕ್ಷೇತ್ರದಿಂದ ಅವರನ್ನು ಸ್ಪರ್ಧಾಕಣಕ್ಕೆ ಇಳಿಸಿ ಬಿಜೆಪಿ ಹಣಿಯಲು ಉದ್ದೇಶಿದೆ.

ಅರವಿಂದ್ ಕೇಜ್ರಿವಾಲ್, ಯಶ್ವಂತ್ ಸಿನ್ಹಾ, ಮತ್ತು ಶತ್ರುಘ್ನ ಸಿನ್ಹಾ ಅವರು ಅನೇಕ ಸಂದರ್ಭಗಳಲ್ಲಿ ಎಎಪಿ ಮುಖಂಡರೊಂದಿಗೆ ಸಭೆ-ಸಮಾವೇಶಗಳಲ್ಲಿ ಕಾಣಿಸಿಕೊಂಡು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿರುವುದನ್ನು ಇಲ್ಲಿ ಉಲ್ಲೇಖಿಸಬಹುದು.

Facebook Comments

Sri Raghav

Admin