50 ವರ್ಷ ಮೇಲ್ಪಟ್ಟ ಅವಿವಾಹಿತ ಮಹಿಳೆಯರಿಗೆ ಮಾಸಿಕ 500 ರೂ. ಪಿಂಚಣಿ

ಈ ಸುದ್ದಿಯನ್ನು ಶೇರ್ ಮಾಡಿ

Old-Women--01

ಭೋಪಾಲ್, ಸೆ.25 (ಪಿಟಿಐ)- ಮುಂಬರುವ ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಮಧ್ಯಪ್ರದೇಶ ಸರ್ಕಾರ 50 ವರ್ಷಗಳ ಮೇಲ್ಪಟ್ಟ ಅವಿವಾಹಿತ ಮಹಿಳೆಯರಿಗೆ ಮಾಸಿಕ ಪಿಂಚಣಿ ಮಂಜೂರಾತಿ ಯೋಜನೆಗೆ ಅನುಮೋದನೆ ನೀಡಿದೆ.

ಈ ಯೋಜನೆ ಅಡಿ 50 ರಿಂದ 79 ವರ್ಷಗಳ ಒಳಗಿನ ಅವಿವಾಹಿತ ಮಹಿಳೆಯರು ಮಾಸಿಕ 300 ರೂ.ಗಳು ಹಾಗೂ 80 ವರ್ಷಗಳ ಮೇಲ್ಪಟ್ಟ ವಯೋಮಾನದ ವೃದ್ದೆಯರಿಗೆ ಮಾಸಿಕ 500 ರೂ. ಪಿಂಚಣಿ ಪಡೆಯಲಿದ್ದಾರೆ.

ಶಿವರಾಜ್ ಸಿಂಗ್ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಸಮಾಜ ಕಲ್ಯಾಣ ಮತ್ತು ದಿವ್ಯಾಂಗರ ಕಲ್ಯಾಣ ಇಲಾಖೆ ವತಿಯಿಂದ ಅವಿವಾಹಿತ ಮಹಿಳೆಯರಿಗೆ ಪಿಂಚಣಿ ನೀಡುವ ಯೋಜನೆ ಪ್ರಾರಂಭದ ಪ್ರಸ್ತಾವನೆಗೆ ಸಮ್ಮತಿ ನೀಡಲಾಗಿದೆ.

Facebook Comments

Sri Raghav

Admin