ಏನ್ ಕಾಲ ಬಂತು ಶಿವಾ…ಬೀಚ್ ನಲ್ಲಿ ನಗ್ನವಾಗಿ ಲಗ್ನವಾದ ಜೋಡಿ..!

ಈ ಸುದ್ದಿಯನ್ನು ಶೇರ್ ಮಾಡಿ

Marriage--03
ಸಾರ್ಡಿನಿಯಾ(ಇಟಲಿ), ಸೆ.25-ವಧು-ವರರು ತಮ್ಮ ವಿವಾಹ ಮಹೋತ್ಸವದಲ್ಲಿ ಯಾವ ವಸ್ತ್ರ ಧರಿಸಬೇಕೆಂಬ ಬಗ್ಗೆ ತಲೆ ಕೆಡಿಸಿಕೊಂಡು ಉತ್ತಮ ಆಯ್ಕೆಗಾಗಿ ರಾಶಿ ರಾಶಿ ಬಟ್ಟೆಗಳನ್ನು ತಡಕಾಡುತ್ತಾರೆ. ಆದರೆ ಇಟಲಿಯ ಸಾರ್ಡಿಯಾನ ದ್ವೀಪದಲ್ಲಿ ನಡೆದ ಸ್ವಯಂವರದಲ್ಲಿನ ಗಂಡು-ಹೆಣ್ಣುಗಳಿಗೆ ಬಟ್ಟೆಗಳ ಪ್ರಮೇಯವೇ ಬರಲಿಲ್ಲ. ಏಕೆಂದರೆ ಅಲ್ಲಿ ನಡೆದಿದ್ದು ಬೆತ್ತಲೆ ವಿವಾಹ..!!

ಸಾರ್ಡಿಯಾನ ದ್ವೀಪದ ಟಾರ್ಕೋಯಿಸ್ ಸಾಗರ ತೀರದಲ್ಲಿ ನಡೆದ ನೇಕೆಡ್ ಬೀಚ್ ಉತ್ಸವದಲ್ಲಿ ಕೆಲವು ಜೋಡಿಗಳು ನಗ್ನವಾಗಿಯೇ ಸತಿ-ಪತಿಗಳಾದರು.
ದಂತ ವೈದ್ಯೆ ಅಂಕಾ ಅರ್ಸೆನೆ(29) ತನ್ನ ಸಾಫ್ಟ್‍ವೇರ್ ಡೆವಲಪರ್ ಉದ್ಯೋಗಿ ವ್ಯಾಲೆಂಟೈನ್(34) ಹುಟ್ಟುಡುಗೆಯಲ್ಲಿಯೇ ವಿವಾಹವಾದರು. ಈ ನಗ್ನ ಲಗ್ನವನ್ನು ವಧು-ವರರ ಹೆತ್ತವರು, ಬಂಧು-ಮಿತ್ರರು ಸಾಕ್ಷೀಕರಿಸಿದರು. ಇವರಲ್ಲಿ ಕೆಲವರು ದಿಗಂಬರರಾಗಿಯೇ ಭಾಗವಹಿಸಿದ್ದು ವಿಶೇಷ…!

Marriage--01
ಮದುವೆ ನಂತರ ಗಂಡು-ಹೆಣ್ಣು ನಗ್ನರಾಗುತ್ತಾರೆ. ಆದರೆ ನಾವಿಲ್ಲಿ ವಿವಾಹಕ್ಕೆ ಮುನ್ನವೇ ಬೆತ್ತಲಾಗಿದ್ದೇವೆ. ಈ ರೀತಿ ಸ್ವಯಂವರ ವಿನೂತನ ಮತ್ತು ವಿಶಿಷ್ಟ. ನಗ್ನತೆ ನಿರ್ಮಲತೆಯ ಸಂಕೇತ. ಪರಿಶುದ್ಧತೆಯ ಪ್ರತೀಕ ಎನ್ನುತ್ತಾಳೆ ಅಂಕಾ ಅರ್ಸೆನೆ.

Marriage--02

Marriage--04

Facebook Comments

Sri Raghav

Admin