ವೀರಪ್ಪನ್’ನಿಂದ ರಾಜ್‍ಕುಮಾರ್ ಅಪಹರಣ ಪ್ರಕರಣದ 9 ಆರೋಪಿಗಳ ಖುಲಾಸೆ

ಈ ಸುದ್ದಿಯನ್ನು ಶೇರ್ ಮಾಡಿ

Veerappan--01
ಈರೋಡ್, ಸೆ.25: ಹದಿನೆಂಟು ವರ್ಷಗಳ ಹಿಂದೆ ಕನ್ನಡದ ವರನಟ ರಾಜ್‍ಕುಮಾರ್ ಅವರನ್ನು, ದಂತಚೋರ ವೀರಪ್ಪನ್ ಮತ್ತು ಆತನ ಸಂಗಡಿಗರು ಅಪಹರಣ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿ ಆರೋಪಿಗಳನ್ನು ಇಲ್ಲಿನ ಗೋಪಿಚೆಟ್ಟಿಪಾಳ್ಯಂನ ನ್ಯಾಯಾಲಯ ಇಂದು ಖುಲಾಸೆಗೊಳಿಸಿದೆ.

ಆರೋಪಿಗಳ ಆರೋಪ ಸಾಬೀತುಪಡಿಸಲು ಪ್ರಾಷಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಲಯ ನ್ಯಾಯಾಧೀಶ ಮಣಿ ಅವರು ತೀರ್ಪು ನೀಡಿ, ಆರೋಪಿಗಳ ಬಿಡುಗಡೆಗೆ ಆದೇಶ ನೀಡಿದ್ದಾರೆ.

2000ನೆ ಜುಲೈ 30ರಂದು ತಮಿಳುನಾಡಿನ ಗಡಿಭಾಗದಲ್ಲಿರುವ ಗಾಜನೂರಿನ ಮನೆಯಿಂದ ರಾಜ್‍ಕುಮಾರ್ ಅವರನ್ನು ವೀರಪ್ಪನ್ ಮತ್ತು ಸಹಚರರು ಅಪಹರಿಸಿದ್ದರು. ಈ ವಿಷಯ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಭಾರೀ ಹಿಂಸಾಚಾರಕ್ಕೆ ಕಾರಣವಾಗಿತ್ತು. ರಾಜ್ ಅವರನ್ನು ಬಿಡಿಸಲು ಉಭಯ ರಾಜ್ಯಗಳು ಭಾರೀ ಶ್ರಮವಹಿಸಿದ್ದವು. ಅಂತಿಮವಾಗಿ 108 ದಿನಗಳ ನಂತರ ನಡೆದ ಸಂಧಾನದ ಬಳಿಕ ರಾಜ್ ಕುಮಾರ್ ಅವರನ್ನು ಬಿಡುಗಡೆಗೊಳಿಸಿ ಕರೆತರಲಾಯಿತು.

ಪ್ರಕರಣ ಸಂಬಂಧ ವೀರಪ್ಪನ್ ಸೇರಿದಂತೆ 13 ಜನರ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿತ್ತು. ಆದರೆ ಕಾರ್ಯಾಚರಣೆಯ ವೇಳೆ ಪ್ರಮುಖ ಆರೋಪಿ ವೀರಪ್ಪನ್ ಮತ್ತು ಇತರ ನಾಲ್ವರು, ವಿಚಾರಣೆಯ ವೇಳೆ ಇಬ್ಬರು ಸಾವನ್ನಪ್ಪಿದ್ದರು. ಉಳಿದ 9 ಜನ ಹಾಲಿ ಪ್ರಕರಣ ಸಂಬಂಧ ಜೈಲು ಸೇರಿದ್ದರು. 18 ವರ್ಷಗಳ ಕಾಲ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿಗಳನ್ನು ಖುಲಾಸೆಗೊಳಿಸಿದೆ.

Veerappan--02

Facebook Comments

Sri Raghav

Admin