ಆಕ್ಸಿಡೆಂಟ್ ಅಲ್ಲ ಸೂಸೈಡ್, ಸಿಸಿಟಿವಿ ಯಿಂದ ಬಯಲಾಯ್ತು ಸತ್ಯ ..!

ಈ ಸುದ್ದಿಯನ್ನು ಶೇರ್ ಮಾಡಿ

Accident--01

ಕೋಲಾರ, ಸೆ.25- ನಗರದ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೆಎಸ್‍ಆರ್‍ಟಿಸಿ ಬಸ್‍ಗೆ ಸಿಲುಕಿ ದ್ವಿಚಕ್ರ ವಾಹನ ಸವಾರ ಮೃತಪಟ್ಟಿದ್ದ ಪ್ರಕರಣ ಸಿಸಿಟಿವಿಯಿಂದಾಗಿ ಆತ್ಮಹತ್ಯೆ ಎಂಬುದು ದೃಢಪಟ್ಟಿದೆ. ನಗರದಲ್ಲಿ ಬೆಳಗ್ಗೆ ಕೇರಳ ರಾಜ್ಯದ ತಿರುನಲ್ಲೂರು ತಾಲೂಕಿನ ಮರಿಯಾಪುರ ಗ್ರಾಮದ ಮೋಹನನ್ (60) ಎಂಬುವವರು ಬಸ್‍ನ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ.

ಘಟನೆ ನಡೆದ ತಕ್ಷಣ ಸಾರ್ವಜನಿಕರು ಬಸ್ ಡ್ರೈವರ್ ನಿರ್ಲಕ್ಷ್ಯದಿಂದ ದ್ವಿಚಕ್ರ ವಾಹನ ಸವಾರ ಸಾವನ್ನಪ್ಪಿದ್ದಾನೆಂದು ಆಕ್ರೋಶ ವ್ಯಕ್ತಪಡಿಸಿದ್ದರು.  ಸಂಚಾರಿ ಪೊಲೀಸರು ಕೂಡ ಬಸ್ ಚಾಲಕನ ತಪ್ಪೆಂದು ಪ್ರಕರಣ ದಾಖಲಿಸಿದ್ದರು. ವಿಷಯ ತಿಳಿದು ಕೆಎಸ್‍ಆರ್‍ಟಿಸಿ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲಿಸಿದರು. ಅಪಘಾತ ನಡೆದ ಸ್ಥಳದಲ್ಲಿನ ಸಿಸಿಟಿವಿ ಫುಟೇಜ್‍ಗಳನ್ನು ತರಿಸಿಕೊಂಡು ಕೂಲಂಕಶವಾಗಿ ಅವಲೋಕಿಸಿದಾಗ ದ್ವಿಚಕ್ರ ವಾಹನ ಸವಾರ ತಾನಾಗಿಯೇ ಹಿಂಬದಿಯಿಂದ ಬಸ್ ಚಕ್ರಕ್ಕೆ ಸಿಲುಕಿ ಮೃತಪಟ್ಟಿರುವುದು ದೃಢಪಟ್ಟಿದೆ.

ಟ್ರೈನ್‍ಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವುದು ಸಾಮಾನ್ಯವಾಗಿಬಿಟ್ಟಿದೆ. ಇದೀಗ ಕೆಎಸ್‍ಆರ್‍ಟಿಸಿ ಬಸ್‍ಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಳ್ಳುವ ಚಾಳಿ ಪ್ರಾರಂಭವಾಗಿರಬಹುದು ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದುದು ಕಂಡುಬಂದಿತು. ಇದೇ ರೀತಿಯ ಘಟನೆ ಇತ್ತೀಚೆಗೆ ಹಾಸನದಲ್ಲೂ ನಡೆದಿದ್ದದ್ದನ್ನು ಸ್ಮರಿಸಬಹುದು. ಸಿಸಿಟಿವಿ ಫುಟೇಜ್‍ನಿಂದಾಗಿ ಬಸ್ ಚಾಲಕ ಅಪರಾಧಿಯಾಗುವುದು ತಪ್ಪಿದಂತಾಗಿದೆ.

Accident--02

Facebook Comments

Sri Raghav

Admin