ಬಿಬಿಎಂಪಿ ಎಲ್ಲಾ ಶಾಲೆಗಳಲ್ಲಿ ‘ಪ್ರಾಜೆಕ್ಟ್ ರೋಶಿನಿ’

ಈ ಸುದ್ದಿಯನ್ನು ಶೇರ್ ಮಾಡಿ

BBMP

ಬೆಂಗಳೂರು. ಸೆ. 25 : ವಿಶ್ವದಲ್ಲೇ ಇದೇ ಮೊದಲ ಬಾರಿಗೆ 21ನೇ ಶತಮಾನದ ಕಲಿಕಾ ಸೌಲಭ್ಯವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲೆಗಳಲ್ಲಿ “ಪ್ರಾಜೆಕ್ಟ್ ರೋಶಿನಿ” ಮೂಲಕ ಈಗಾಗಲೇ ಪ್ರಾರಂಭಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಈ ಯೋಜನೆಯ ಅನುಷ್ಠಾನವನ್ನು ಈಗಾಗಲೇ ಪ್ರಾರಂಭಿಸಲಾಗಿದ್ದು, ಮೈಕ್ರೋಸಾಫ್ಟ್, ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ ಸೇರಿದಂತೆ ಹಲವಾರು ಸಂಸ್ಥೆಗಳು ಬೆಂಬಲ ನೀಡುತ್ತಿವೆ. ಇದರೊಟ್ಟಿಗೆ ಬಿಬಿಎಂಪಿಯ ಎಲ್ಲಾ ಶಾಲೆಗಳು ಸದ್ಯದಲ್ಲಿಯೇ ವಿಶ್ವದರ್ಜೆಯ ಮೂಲ ಸೌಕರ್ಯಗಳನ್ನು ಹೊಂದಲಿದ್ದು, ವಿದ್ಯಾರ್ಥಿಗಳು 21 ನೇ ಶತಮಾನದ ಕಲಿಕೆಯನ್ನು ಆರಂಭಿಸುವ ಮೂಲಕ ಜ್ಞಾನದ ಹೊಸ ಯುಗ ಆರಂಭವಾಗಲಿದೆ ಎಂದು ಉಪಮುಖ್ಯಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ತಂತ್ರಜ್ಞಾನದ ಜೊತೆಗೆ ಪರಿಸರ, ಸಾಂಸ್ಕøತಿಕ ಮತ್ತು ಸಾಮಾಜಿಕ ಕ್ಷೇತ್ರಗಳಿಗೆ ಸಂಬಂಧಿಸಿದ ಮೌಲ್ಯಾಧಾರಿತ ಕಲಿಕಾ ಕ್ರಮವನ್ನು ನೀಡುವ ಮೂಲಕ ವಿದ್ಯಾರ್ಥಿಗಳ ಜ್ಞಾನ ವೃದ್ಧಿಸಲಾಗುವುದು. ಅತ್ಯುತ್ತಮ ಶಿಕ್ಷಣ ಮತ್ತು ಮೂಲ ಸೌಕರ್ಯಗಳನ್ನು ಕಲ್ಪಿಸುವುದು, ಶಿಕ್ಷಕರಿಗೆ 21 ನೇ ಶತಮಾನದ ಕೌಶಲ್ಯಗಳ ತರಬೇತಿ ನೀಡುವುದು, ಅನುಭವ ಆಧಾರಿತ ಕಲಿಕೆಯಲ್ಲಿ ಸಮುದಾಯವನ್ನು ಭಾಗಿಮಾಡುವುದು ಸೇರಿದಂತೆ ಇನ್ನು ಹಲವಾರು ಪ್ರಮುಖ ಚಟುವಟಿಕೆಗಳನ್ನು ಅಳವಡಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

Facebook Comments

Sri Raghav

Admin