ರೂರ್ಕಿ ಐಐಟಿ ವಿದ್ಯಾರ್ಥಿಗಳೂ ಸೇರಿ 45 ಚಾರಣಿಗರು ಕಣ್ಮರೆ..!

ಈ ಸುದ್ದಿಯನ್ನು ಶೇರ್ ಮಾಡಿ

45-Missing--01

ನವದೆಹಲಿ/ಶಿಮ್ಲಾ, ಸೆ.25 (ಪಿಟಿಐ)- ಭಾರೀ ಮಳೆ, ಪ್ರವಾಹಪೀಡಿತ ಮತ್ತು ಹಿಮಪಾತಕ್ಕೆ ಸಿಲುಕಿರುವ ಹಿಮಾಚಲ ಪ್ರದೇಶದ ಪರ್ವತಮಯ ಲಾಹೌಲ್ ಮತ್ತು ಸ್ಪಿಟಿ ಜಿಲ್ಲೆಗಳ ಚಾರಣಕ್ಕೆ ತೆರಳಿದ್ದ ರೂರ್ಕಿಯ ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ)ಯ 35 ವಿದ್ಯಾರ್ಥಿಗಳೂ ಸೇರಿದಂತೆ 45 ಚಾರಣಿಗರು ಕಣ್ಮರೆಯಾಗಿದ್ದಾರೆ. ನಾಪತ್ತೆಯಾಗಿರುವವರಿಗೆ ತೀವ್ರ ಶೋಧ ಮುಂದುವರಿದಿದೆ.

45 ಟ್ರೆಕ್ಕರ್‍ಗಳು ನಾಪತ್ತೆಯಾಗುವುದಕ್ಕೂ ಮುನ್ನ ಈ ಪ್ರದೇಶದಲ್ಲಿ ಹಿಮಪಾತವಾಗುತ್ತಿತ್ತು ಎಂದು ರಕ್ಷಣಾ ಕಾರ್ಯಾಚರಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.  ನಿಸರ್ಗ ಸೊಬಗಿನ ಹಂಪ್ಟಾ ಪಾಸ್‍ಗೆ ಚಾರಕ್ಕೆ ಹೋಗಿದ್ದ ಈ ತಂಡವು ಮನಾಲಿಗೆ ಹಿಂದಿರುಗಬೇಕಿತ್ತು. ಆದರೆ ಈವರೆಗೂ ಇವರ ಸುಳಿವಿಲ್ಲ ಹಾಗೂ ಸಂಪರ್ಕಕ್ಕೂ ಲಭಿಸುತ್ತಿಲ್ಲ. 35 ವಿದ್ಯಾರ್ಥಿಗಳೂ ಸೇರಿದಂತೆ 45 ಮಂದಿ ಕಣ್ಮರೆಯಾಗಿರುವುದರಿಂದ ಪೋಷಕರು ಮತ್ತು ಬಂಧು-ಮಿತ್ರರು ತೀವ್ರ ಆತಂಕಗೊಂಡಿದ್ದಾರೆ. ನಾಪತ್ತೆಯಾದವರಿಗಾಗಿ ಆ ಪ್ರದೇಶದ ಸುತ್ತಮುತ್ತ ವ್ಯಾಪಕ ಶೋಧ ಮುಂದುವರಿದಿದೆ.

ಹಿಮಾಚಲ ಪ್ರದೇಶದ ಕಂಗ್ರಾ, ಕುಲು, ಹಮೀರ್‍ಪುರ್ ಜಿಲ್ಲೆಗಳಲ್ಲಿ ಭಾರಿ ಮಳೆ, ಪ್ರವಾಹ ಹಾಗೂ ಹಿಮಪಾತಗಳಾಗುತ್ತಿದ್ದು. ಸಾವು-ನೋವು ಸಂಭವಿಸಿದೆ. ಪ್ರಕೃತಿ ವಿಕೋಪದಿಂದ ನಲುಗುತ್ತಿರುವ ಹಿಮಾಚಲ ಪ್ರದೇಶದ ವಿವಿಧ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ಇನ್ನು ರಜೆ ಘೋಷಿಸಲಾಗಿದೆ.

Facebook Comments

Sri Raghav

Admin