ಜೈಲು ಸುಧಾರಣೆಗೆ ಮೂವರು ಸದಸ್ಯರ ಸಮಿತಿ ರಚಿಸಿದ ಸುಪ್ರೀಂ

ಈ ಸುದ್ದಿಯನ್ನು ಶೇರ್ ಮಾಡಿ

Jail--02

ನವದೆಹಲಿ, ಸೆ.25-ದೇಶದಲ್ಲಿರುವ ಜೈಲುಗಳ ಸುಧಾರಣೆ ಅಂಶಗಳನ್ನು ಪರಿಶೀಲಿಸಿ ಅಗತ್ಯ ಕ್ರಮಗಳಿಗೆ ಸಲಹೆಗಳನ್ನು ನೀಡಲು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಅಮಿತಾವ್ ರಾಯ್ ನೇತೃತ್ವದ ಮೂವರು ಸದಸ್ಯರ ಸಮಿತಿಯನ್ನು ಸುಪ್ರೀಂಕೋರ್ಟ್ ಇಂದು ರಚಿಸಿದೆ.  ಜೈಲುಗಳಲ್ಲಿ ಕಿಕ್ಕಿರಿದಿರುವ ಸಂಗತಿ, ಮಹಿಳಾ ಕೈದಿಗಳ ಅಹವಾಲುಗಳೂ ಸೇರಿದಂತೆ ವಿವಿಧ ಅಂಶಗಳ ಬಗ್ಗೆ ಸಮಿತಿಯು ಪರಾಮರ್ಶೆ ನಡೆಸಲಿದೆ ಎಂದು ನ್ಯಾಯಮೂರ್ತಿ ಎಂ.ಬಿ.ಲೋಕುರ್ ನೇತೃತ್ವದ ಪೀಠವು ಹೇಳಿದೆ.

ದೇಶದ ವಿವಿಧ ಜೈಲುಗಳು ಕೈದಿಗಳಿಂದ ತುಂಬಿ ತುಳುಕುತ್ತಿರುವುದೂ ಸೇರಿದಂತೆ ಅಲ್ಲಿನ ಅವ್ಯವಸ್ಥೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಸುಪ್ರೀಂಕೋರ್ಟ್ ಆ.27ರಂದು ಕಾರಾಗೃಹಗಳ ಸುಧಾರಣೆಗಾಗಿ ಸಮಿತಿಯೊಂದನ್ನು ರಚಿಸಬೇಕೆಂಬ ಮನವಿ ಕುರಿತ ತೀರ್ಮಾನವನ್ನು ಕಾಯ್ದಿರಿಸಿತ್ತು.  ದೇಶದ ವಿವಿಧ ಬಂದೀಖಾನೆಗಳಲ್ಲಿರುವ 1.382 ಕೈದಿಗಳ ಅಮಾನವೀಯ ಪರಿಸ್ಥಿತಿಗಳಿಗೆ ಸಂಬಂಧಿಸಿದ ಪ್ರಕರಣಗಳ ಬಗ್ಗೆ ಸುಪ್ರೀಂಕೋರ್ಟ್ ವಿಚಾರಣೆ ನಡೆಸಿತ್ತು.

Facebook Comments

Sri Raghav

Admin