ವಿವಿಧ ದೇಶಗಳ ವಿದೇಶಾಂಗ ಸಚಿವರ ಜತೆ ಸುಷ್ಮಾ ಸ್ವರಾಜ್ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

Susham-Swaraj--01

ನ್ಯೂಯಾರ್ಕ್, ಸೆ. 25-ವಿಶ್ವಸಂಸ್ಥೆಯ 73ನೇ ಸಾಮಾನ್ಯ ಅಧಿವೇಶನದಲ್ಲಿ(ಯುಎನ್‍ಜಿಎ) ಭಾಗವಹಿಸಲು ನ್ಯೂಯಾರ್ಕ್‍ನಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ವಿವಿಧ ದೇಶಗಳ ಸಹವರ್ತಿಗಳೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಿದರು. ವಾಣಿಜ್ಯ-ವ್ಯಾಪಾರ, ಬಂಡವಾಳ ಹೂಡಿಕೆ ಮತ್ತು ಸಾಮಥ್ರ್ಯ ನಿರ್ಮಾಣ ಸೇರಿದಂತೆ ಅನೇಕ ಪ್ರಮುಖ ವಿಷಯಗಳು ಚರ್ಚೆಯಾದವು.

ಸುಷ್ಮಾ ಸ್ವರಾಜ್ ಸೆ.29 ಶನಿವಾರದಂದು ಯುನ್‍ಜಿಎನಲ್ಲಿ ಭಾಷಣ ಮಾಡಲಿದ್ದಾರೆ. ಅದಕ್ಕೂ ಮುನ್ನ ನಡೆದ ಉನ್ನತ ಮಟ್ಟದ ಸಭೆಯ ಸಂದರ್ಭದಲ್ಲಿ ಅವರು ಅನೇಕ ದೇಶಗಳ ವಿದೇಶಾಂಗ ಸಚಿವರೊಂದಿಗೆ ದ್ವಿಪಕ್ಷೀಯ ಸಭೆ-ಸಮಾಲೋಚನೆ ನಡೆಸಿದರು.

ಮೊರೊಕೋ ವಿದೇಶಾಂಗ ಸಚಿವ ನಸೀರ್ ಬೌರಿಟಾ, ವಿದೇಶಾಂಗ ವ್ಯವಹಾರಗಳ ಐರೋಪ್ಯ ಒಕ್ಕೂಟದ ಪ್ರತಿನಿಧಿ ಫೆಡೆರಿಕಾ ಮೊಗೆರಿನಿ, ಲೀಚ್‍ಟೆನ್‍ಸ್ಟೀನ್ ವಿದೇಶಾಂಗ ಸಚಿವ ಔರೆಲೀ ಫ್ರಿಕ್, ನೇಪಾಳ ವಿದೇಶಾಂಗ ಮಂತ್ರಿ ಪ್ರದೀಪ್ ಕುಮಾರ್ ಗ್ಯಾವಲಿ, ಸ್ಪೇನ್ ವಿದೇಶಾಂಗ ವ್ಯವಹಾರಗಳ ಸಚಿವ ಜೋಸೆಫ್ ಬರ್ರೆಲ್, ಕೊಲಂಬಿಯಾ ವಿದೇಶಾಂಗ ಮಂತ್ರಿ ಕಾರ್ಲೋಸ್ ಹೋಮ್ಸ್ ಟ್ರುಜಿಲ್ಲೋ, ಈಕ್ಚೆಡಾರ್ ಸಹವರ್ತಿ ಜೋಸ್ ವ್ಯಾಲೆಂಸಿಯಾ, ಆಸ್ಟ್ರೇಲಿಯಾದ ಮರೈಸ್ ಪೇನ್ ಹಾಗೂ ಮಂಗೋಲಿಯಾದ ವಿದೇಶಾಂಗ ಸಚಿವ ಡ್ಯಾಮ್‍ಡಿನ್ ಟಿಸೋಗ್‍ಬಾಟರ್ ಅವರೊಂದಿಗೆ ಸುಷ್ಮಾ ದ್ವಿಪಕ್ಷೀಯ ಸಭೆಗಳಲ್ಲಿ ಪಾಲ್ಗೊಂಡರು.

ಮಾತುಕತೆ ವೇಳೆ ವಾಣಿಜ್ಯ-ವ್ಯಾಪಾರ, ಬಂಡವಾಳ ಹೂಡಿಕೆ ಮತ್ತು ಸಾಮಥ್ರ್ಯ ನಿರ್ಮಾಣ ಸೇರಿದಂತೆ ಅನೇಕ ಪ್ರಮುಖ ವಿಷಯಗಳು ಚರ್ಚೆಯಾದವು. ಮಾತುಕತೆಗಳು ಫಲಪ್ರದವಾಗಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಬಹುಪಕ್ಷೀಯ ವ್ಯವಸ್ಥೆ, ಪರಿಸರ ಸಂರಕ್ಷಣೆ, ಸುಸ್ಥಿರ ಅಭಿವೃದ್ದಿ, ಶಾಂತಿ ಮತ್ತು ಭದ್ರತೆ ಇವು ನ್ಯೂಯಾರ್ಕ್‍ನಲ್ಲಿ ನಿನ್ನೆಯಿಂದ ಆರಂಭವಾಗಿರುವ ವಿಶ್ವಸಂಸ್ಥೆಯ 73ನೇ ಸಾಮಾನ್ಯ ಅಧಿವೇಶನದಲ್ಲಿಭಾರತ ಪ್ರಮುಖ ಆದ್ಯತೆಯ ವಿಚಾರಗಳಾಗಿದ್ದು, ಇವುಗಳ ಮೇಲೆ ಸೆ.29ರ ತಮ್ಮ ಭಾಷಣದಲ್ಲಿ ಸುಷ್ಮಾ ಬೆಳಕು ಚೆಲ್ಲಲಿದ್ದಾರೆ.

Facebook Comments

Sri Raghav

Admin