ತಿಮ್ಮಪ್ಪನ ದರ್ಶನ ಪಡೆದ ಉಪ ರಾಷ್ಟ್ರಪತಿ ನಾಯ್ಡು, ಸಿಎಂ ಪಳನಿಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

Venakaia--01

ತಿರುಪತಿ, ಸೆ.25 (ಪಿಟಿಐ)-ಉಪ ರಾಷ್ಟ್ರಪತಿ ಡಾ.ಎಂ.ವೆಂಕಯ್ಯನಾಯ್ಡು ಮತ್ತು ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅವರು ಇಂದು ವಿಶ್ವವಿಖ್ಯಾತ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ ಶ್ರೀ ವೆಂಕಟೇಶ್ವರ ದರ್ಶನ ಪಡೆದು ವಿಶೇಷ ಪೂಜೆ ಸಮರ್ಪಿಸಿದರು. ತಿರುಪತಿಯಿಂದ 15 ಕಿಮೀ ದೂರದ ರೇನಿಗುಂಟಾದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಪ್ರವಾಸೋದ್ಯಮ ಇಲಾಖೆ ನಿರ್ಮಿಸಿರುವ ಭಾರತೀಯ ಪಾಕ ಸಂಸ್ಥೆಯ ಉದ್ಘಾಟನೆ ನಂತರ ನಿನ್ನೆ ತಿರುಮಲಕ್ಕೆ ತೆರಳಿ ರಾತ್ರಿ ವಾಸ್ತವ್ಯ ಹೂಡಿದ್ದರು. .

ತಿರುಪತಿ ತಿಮ್ಮಪ್ಪನ ಪರಮ ಭಕ್ತರಾದ ಅವರು ಇಂದು ಮುಂಜಾನೆಯೇ ದೇವಾಲಯಕ್ಕೆ ತೆರಳಿ 20 ನಿಮಿಷಗಳ ಕಾಲ ಅಲ್ಲಿದ್ದು, ವಿಶೇಷ ಪೂಜೆ ನೆರವೇರಿಸಿದರು.

ಈ ಮಧ್ಯೆ, ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಸಹ ಇಂದು ತಿರುಪತಿಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಪೂಜೆ ಸಲ್ಲಿಸಿ ಅಷ್ಟ ಪಾದಪದ್ಮಾರಾಧನಾ ಹೋಮದಲ್ಲಿ ಪಾಲ್ಗೊಂಡರು. ನಂತರ ಅವರು ಟಿಟಿಡಿ ಅತಿಥಿ ಗೃಹದಲ್ಲಿ ಉಪ ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ ಕೆಲಕಾಲ ಮಾತುಕತೆ ನಡೆಸಿದರು.

Facebook Comments

Sri Raghav

Admin