ನಿಯಂತ್ರಣ ತಪ್ಪಿ ಟ್ಯಾಂಕರ್ ಪಲ್ಟಿ, ಚಾಲಕ ಸಾವು, ಎಣ್ಣೆಗಾಗಿ ಮುಗಿಬಿದ್ದ ಜನ

ಈ ಸುದ್ದಿಯನ್ನು ಶೇರ್ ಮಾಡಿ

vijaypura--01

ವಿಜಯಪುರ, ಸೆ.26- ಚಾಲಕನ ನಿಯಂತ್ರಣ ತಪ್ಪಿ ಸೊಯಾಬೀನ್ ಎಣ್ಣೆ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಡಚಣ ಪಟ್ಟಣದ ಹೊರ ವಲಯದಲ್ಲಿ ನಡೆದಿದೆ. ಮಹಾರಾಷ್ಟ್ರದ ಲಾಥೂರ್‍ನಿಂದ ವಿಜಯಪುರದ ವಿದ್ಯಾಶ್ರೀ ಟ್ರೇಡರ್ಸ್‍ಗೆ ಎಣ್ಣೆಯನ್ನು ತುಂಬಿಕೊಂಡು ಆಗಮಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿ ಬಿದ್ದಿದ್ದು , ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.  ಇದನ್ನು ಕಂಡ ಗ್ರಾಮಸ್ಥರು ಬಾಟಲಿ, ಬಿಂದಿಗೆ, ಬಕೇಟ್‍ಗಳನ್ನು ಹಿಡಿದು ಲಾರಿಯತ್ತ ಓಡೋಡಿ ಬಂದು ಎಣ್ಣೆ ತುಂಬಿಕೊಂಡ ದೃಶ್ಯಗಳು ಕಂಡು ಬಂತು. ಸ್ಥಳಕ್ಕೆ ಚಡಚಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Facebook Comments

Sri Raghav

Admin