BREAKING : ಆಧಾರ್ ಮಾನ್ಯತೆ ಎತ್ತಿಹಿಡಿದ ಸುಪ್ರೀಂಕೋರ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Adhaar--01

ನವದೆಹಲಿ, ಸೆ.26- ಆಧಾರ್‍ಗೆ ಸಂವಿಧಾನಿಕ ಮಾನ್ಯತೆಯ ತೀರ್ಪನ್ನು ಎತ್ತಿ ಹಿಡಿದಿರುವ ಸುಪ್ರೀಂಕೋರ್ಟ್ ಆಧಾರ ವಿರುದ್ಧದ ದಾಳಿ ಭಾರತೀಯ ಸಂವಿಧಾನಕ್ಕೆ ವಿರೋಧವಾದುದು ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದೆ. ಖಾಸಗಿತನವು ಘನತೆಯಿಂದ ಬದುಕುವ ಹಕ್ಕನ್ನು ಹೊಂದಿದೆ . ಸಮಾಜದ ಹಿತದೃಷ್ಟಿಯಿಂದ ಆಧಾರ್‍ಗೆ ಕೆಲವು ನಿರ್ಬಂಧಗಳ ಅಗತ್ಯವಿದೆ ಎಂದು ಕೂಡ ಸರ್ವೋಚ್ಚ ನ್ಯಾಯಾಲಯ ಪ್ರತಿಪಾದಿಸಿದೆ.

ಈ ತೀರ್ಪಿನೊಂದಿಗೆ ಆಧಾರ್ ಸಂವಿಧಾನಿಕ ಮಾನ್ಯತೆ ಕುರಿತು ತಲೆದೋರಿದ್ದ ಗೊಂದಲ ಈಗ ನಿವಾರಣೆಯಾದಂತಾಗಿದೆ. ಆಧಾರ್ ಕಾರ್ಡ್ ಯೋಜನೆಯಿಂದ ಸಂವಿಧಾನದ ಖಾಸಗಿತನ ಹಕ್ಕು ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪಂಚ ನ್ಯಾಯಾಧೀಶರ ಪೀಠ ಈ ಮಹತ್ವ ತೀರ್ಪು ನೀಡಿದೆ.

ಆಧಾರ್ ದೇಶದ ಬಹು ಚರ್ಚಿತ ವಿಷಯವಾಗಿದೆ. ವಿಶಿಷ್ಟವಾದ ಗುರುತಿರುವಂತಹ ವ್ಯವಸ್ಥೆಯ ಅಗತ್ಯವಿದೆ. ಆಧಾರ್‍ನಿಂದ ಫಲಾನುಭವಿಗಳಿಗೆ ಪ್ರಯೋಜನವಾಗಿದೆ. ಇದು ದುರ್ಬಲರ ಸಬಲೀಕರಣಕ್ಕೆ ನೆರವಾಗುತ್ತದೆ ಎಂದು ಪೀಠವು ತಿಳಿಸಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಈ ಪೀಠದಲ್ಲಿ ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ, ಎ.ಎಂ.ಕನ್ವಿಲ್ಕರ್, ಡಿ.ವೈ.ಚಂದ್ರಚೂಡ್ ಮತ್ತು ಅಶೋಕ್ ಭೂಷಣ್ ಅವರುಗಳಿದ್ದಾರೆ.

ಆಧಾರ್ ಕಾರ್ಡ್ ಸಂಪೂರ್ಣ ಸುರಕ್ಷಿತ ಎಂದು ಹೇಳಿರುವ ನ್ಯಾಯಪೀಠ, ಆಧಾರ್‍ನನ್ನು ತಿರುಚಲು, ನಕಲು ಮಾಡಲು ಸಾಧ್ಯವಿಲ್ಲ. ಆಧಾರ್ ಮಾಹಿತಿ ಮೇಲೆ ಕೇಂದ್ರ ಸರ್ಕಾರ ಕಣ್ಗಾವಲು ಇಡಬೇಕು. ಆಧಾರ್ ಪ್ರಾಧಿಕಾರದಿಂದಲೂ ಗೌಪ್ಯತೆಯ ಭರವಸೆ ಈಗಾಗಲೇ ನೀಡಲಾಗಿದೆ ಎಂದು ಅವರು ತಿಳಿಸಿದರು.  ಆಧಾರ್‍ನಿಂದ ಜನರ ಖಾಸಗಿತನ ಮತ್ತು ಗೌಪ್ಯತೆಗೆ ಧಕ್ಕೆಯಾಗಿದ್ದು, ಇದರಿಂದ ಸಂವಿಧಾನದ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ 31 ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು.

Facebook Comments

Sri Raghav

Admin