ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವೆಚ್ಚ ನಿಗದಿ

ಈ ಸುದ್ದಿಯನ್ನು ಶೇರ್ ಮಾಡಿ

Parameshwar--01

ಕೊರಟಗೆರೆ, ಸೆ.26- ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಮೇಲೆ ನಡೆಯುತ್ತಿರುವ ಶೋಷಣೆ ತಡೆಯುವ ಉದ್ದೇಶದಿಂದ ರಾಜ್ಯ ಸರಕಾರ ಚಿಕಿತ್ಸೆ ವೆಚ್ಚವನ್ನು ನಿಗದಿ ಪಡಿಸುವ ಆದೇಶವನ್ನು ಜಾರಿಗೆತಂದಿದೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.  ತಾಲೂಕಿನ ಹೊಳವನಹಳ್ಳಿ ಹೋಬಳಿ ಅಕ್ಕಿರಾಂಪುರ ಗ್ರಾಮದ ಸರಕಾರಿ ಪ್ರಾಥಮಿಕ ಆರೋಗ್ಯಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಆರೋಗ್ಯ ಇಲಾಖೆ ಉತ್ತಮ ಸ್ಥಿತಿಯಲ್ಲಿದೆ. ರಾಜಧಾನಿಯಲ್ಲಿ ಸೀಗುವ ಆರೋಗ್ಯ ಸೇವೆಯೂ ರಾಜ್ಯದ ಪ್ರತಿಯೊಂದು ಜಿಲಾ ್ಲಕೇಂದ್ರದಲ್ಲಿಯೇ ಸೀಗುತ್ತೀದೆ. ಅಕ್ಕಿರಾಂಪುರ ಗ್ರಾಮದ ಜನರ ಆರೋಗ್ಯ ರಕ್ಷಣೆಗಾಗಿ ನಬಾರ್ಡ್ ಯೋಜನೆಯ ಅನುಧಾನದಿಂದ 1. 87ಕೋಟಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣವಾಗಿದೆ. ಬಡಜನರು ಆಸ್ಪತ್ರೆಯ ಪ್ರಯೋಜನ ಪಡೆದುಕೊಳ್ಳಿ ಎಂದು ಮನವಿ ಮಾಡಿದರು.

ಅಕ್ಕಿರಾಂಪುರ ಗ್ರಾಮದಲ್ಲಿ ಸುವರ್ಣಗ್ರಾಮ ಯೋಜನೆಯಡಿ ಸುಮಾರು 2. 50ಕೋಟಿ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಕೆಲಸಕ್ಕೆ ಅನುದಾನ, ಕೆರೆ ಏರಿ ರಸ್ತೆ ಅಭಿವೃದ್ದಿಗಾಗಿ 5.60ಕೋಟಿ, ಎಂಪಿ ಮತ್ತು ಎಂಎಲ್‍ಸಿ ಗ್ರಾಂಟ್‍ನಲ್ಲಿ ಕುಡಿಯುವ ನೀರಿನ ಘಟಕದ ನಿರ್ಮಾಣಕ್ಕಾಗಿ ಒಂದು ಕೋಟಿ ಅನುದಾನ ನೀಡಲಾಗಿದೆ. ಅಕ್ಕಿರಾಂಪುರ ಸಂತೆಯ ಸ್ಥಳದಲ್ಲಿ ಎಪಿಎಂಸಿ ಮಾರುಕಟ್ಟೆ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು.

ಸಂಸದ ಮುದ್ದಹನುಮೇಗೌಡ ಮಾತನಾಡಿ, ಸರಕಾರಿ ಆಸ್ಪತ್ರೆಯಲ್ಲಿ ತ್ವರಿತವಾಗಿ ನುರಿತ ವೈದ್ಯರು ಸೇರಿದಂತೆ ಮಹಿಳಾ ವೈದ್ಯರು ನೇಮಕ ಮಾಡಿಸಲು ಸರಕಾರಕ್ಕೆ ಮನವಿ ಸಲ್ಲಿಸುತ್ತೇವೆ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಅಧಿಕಾರಿ ವರ್ಗ ಹೆಚ್ಚಿನ ಆದ್ಯತೆ ನೀಡಬೇಕು. ಪ್ರತಿಯೊಬ್ಬ ಮನುಷ್ಯನ ಆರ್ಥಿಕ ಅಭಿವೃದ್ದಿಗೆ ಆರೋಗ್ಯ ಪ್ರಮುಖವಾದ ಅಂಶವಾಗಿದೆ ಎಂದು ಹೇಳಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಜಮೀರ್ ಅಹಮ್ಮದ್, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಎಸ್‍ಪಿ ಡಾ.ದೀವ್ಯಗೋಪಿನಾಥ್, ಜಿಪಂ ಸದಸ್ಯ ನಾರಾಯಣಮೂರ್ತಿ, ತಾಪಂ ಉಪಾಧ್ಯಕ್ಷ ನರಸಮ್ಮ, ಸದಸ್ಯ ವೆಂಕಟಪ್ಪ, ಗ್ರಾಪಂ ಅಧ್ಯಕ್ಷೆ ಅಂಬಿಕಾ, ಉಪಾಧ್ಯಕ್ಷ ಶಿವಕುಮಾರ್, ಡಿಎಚ್‍ಒ ಚಂದ್ರಿಕಾ, ತಹಶೀಲ್ದಾರ್ ನಾಗರಾಜು, ಟಿಎಚ್‍ಒ ವಿಜಯಕುಮಾರ್, ಇಒ ಶಿವಪ್ರಸಾದ್, ಸಿಪಿಐ ಮುನಿರಾಜು, ಪಿಎಸೈ ಮಂಜುನಾಥ ಮತ್ತಿತರರಿದ್ದರು.

Facebook Comments

Sri Raghav

Admin