‘ಮಹದಾಯಿ, ಕಳಸಾಬಂಡೂರಿ ವಿಚಾರದಲ್ಲಿ ನಾವು ಸುಮ್ಮನೆ ಕುಳಿತಿಲ್ಲ’

ಈ ಸುದ್ದಿಯನ್ನು ಶೇರ್ ಮಾಡಿ

D-K-Shivakumar--01

ಹುಬ್ಬಳ್ಳಿ, ಸೆ.26- ಮಹದಾಯಿ ಹಾಗೂ ಕಳಸಾಬಂಡೂರಿ ವಿಚಾರವಾಗಿ ನಾವು ಸುಮ್ಮನೆ ಕುಳಿತಿಲ್ಲ. ಕಾನೂನು ಹಾಗೂ ತಾಂತ್ರಿಕ ತಂಡದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಚರ್ಚಿಸುತ್ತಿದ್ದೇವೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಹೇಳಿದರು.  ಜಿಲ್ಲೆಯ ಖಾನಾಪುರ ಸಮೀಪ ನಡೆಯುತ್ತಿರುವ ಕಣಕುಂಬಿಯಲ್ಲಿನ ಮಹದಾಯಿ ಯೋಜನೆಯ ಕಾಮಗಾರಿ ಪರಿಶೀಲನೆಗೆ ಹೋಗುವ ಮುನ್ನ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ವಿಚಾರವಾಗಿ ನಾವು ಮತ್ತೆ ಕೋರ್ಟ್ ಮೊರೆ ಹೋಗುತ್ತೇವೆ ಎಂದರು.

ಕಣಕುಂಬಿಯಲ್ಲಿ ಏನೇನು ಕಾಮಗಾರಿ ಮಾಡಲಾಗಿದೆ, ಇನ್ನು ಏನೇನು ಮಾಡಬೇಕು ಎಂಬ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಿದ್ದು, ಪ್ರಸ್ತುತ ಉತ್ತರ ಕರ್ನಾಟಕಕ್ಕೆ ನೀರಿನ ಅಗತ್ಯವಿದ್ದು, ಈ ಸಂದರ್ಭದಲ್ಲಿ ನೀರು ತರಲು ಕಾನೂನು ಒಪ್ಪಿಗೆ ಕೇಳಿದ್ದೇವೆ. ಮಹದಾಯಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಪುನರುಚ್ಚರಿಸಿದರು.

ನ್ಯಾಯಾಧೀಕರಣದ ತೀರ್ಪು ಬಂದು ಇಷ್ಟಾದರೂ ನಾವು ಸುಮ್ಮನೆ ಕುಳಿತಿಲ್ಲ. ಕಾವೇರಿಗಿರುವ ಕಾಳಜಿ ಮಹದಾಯಿಗೆ ಇಲ್ಲ ಎನ್ನುವುದು ಸತ್ಯಕ್ಕೆ ದೂರವಾಗಿದ್ದು, ಮಹದಾಯಿ ವಿಚಾರದಲ್ಲಿ ಸರಿಯಾದ ನ್ಯಾಯ ಸಿಕ್ಕಿಲ್ಲ ಎಂದು ವಿಷಾದಿಸಿದರು. ಕಣಕುಂಬಿಯ ಭೇಟಿ ಬಳಿಕ ಸರ್ವ ಪಕ್ಷಗಳ ಸಭೆ ಕರೆಯಲಾಗುವುದು. ಆ ಸಭೆಯಲ್ಲಿ ಮಹದಾಯಿ ಯೋಜನೆಯ ಸಾಧಕ-ಬಾಧಕ ಕುರಿತು ಚರ್ಚಿಸಲಾಗುವುದು. ನಂತರ ಏನೇನು ಮಾಡಬಹುದು ಅದನ್ನು ಮಾಡುತ್ತೇವೆ. ರಾಜ್ಯದ ಒಂದೇ ಒಂದು ಹನಿ ನೀರು ಸಮುದ್ರ ಸೇರಲು ಬಿಡುವುದಿಲ್ಲ ಎಂದು ಹೇಳಿದರು.

# ಭಿನ್ನಾಭಿಪ್ರಾಯವಿಲ್ಲ:
ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಭಿನ್ನಮತವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ನಮ್ಮ ಶಾಸಕರು ಆಲ್ ಇಸ್ ವೆಲ್ ಎಂದ ಮುಗುಳ್ ನಗೆ ಬೀರುತ್ತಾ ಸ್ಥಳೀಯ ಮುಖಂಡರ ಜತೆ ತೆರಳಿದರು.

Facebook Comments

Sri Raghav

Admin