ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಬೋಧನೆಗೆ ಸರ್ಕಾರ ಸಿದ್ಧ

ಈ ಸುದ್ದಿಯನ್ನು ಶೇರ್ ಮಾಡಿ

Cm-Selfie--01-Kumaraswamy

ಬೆಂಗಳೂರು, ಸೆ.26- ಸರ್ಕಾರಿ ಮತ್ತು ಬಿಬಿಎಂಪಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಬಡಮಕ್ಕಳಿಗೆ ಕನ್ನಡದ ಜತೆಗೆ ಇಂಗ್ಲಿಷ್ ಅನ್ನು ಒಂದು ವಿಷಯವಾಗಿ ಬೋಧಿಸಲು ಸಮ್ಮಿಶ್ರ ಸರ್ಕಾರ ಸಿದ್ದವಿದೆ. ಈ ವಿಚಾರದಲ್ಲಿ ಹುಸಿ ಕನ್ನಡಪರ ಹೋರಾಟಗಾರರ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಘೋಷಿಸಿದರು.  ಮೈಕ್ರೋಸಾಫ್ಟ್ ಸಂಸ್ಥೆಯ ಸಹಯೋಗದೊಂದಿಗೆ ಪಾಲಿಕೆ ವ್ಯಾಪ್ತಿಯ 156 ಶಾಲಾ-ಕಾಲೇಜುಗಳಲ್ಲಿ ಖಾಸಗಿ ಶಾಲೆಗಳಿಗೆ ಸರಿಸಮಾನವಾಗಿ ಗುಣಮಟ್ಟದ ಶಿಕ್ಷಣ ನೀಡುವ ಕುರಿತಂತೆ ಇಂದಿನಿಂದ ಆರಂಭಿಸಿರುವ ಬಿಬಿಎಂಪಿ ರೋಷಿಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕನ್ನಡ ಕನ್ನಡ ಎಂದು ಬೊಬ್ಬೆ ಇಡುವ ಕನ್ನಡಪರ ಹೋರಾಗಾರರು ತಮ್ಮ ಮಕ್ಕಳನ್ನು ಯಾವ ಶಾಲೆಗಳಲ್ಲಿ ಓದಿಸುತ್ತಿದ್ದಾರೆ ಎಂಬುದು ನನಗೆ ಗೊತ್ತಿದೆ. ನೀವು ಯಾವ ಶಾಲೆಯಲ್ಲಿ ಓದಿಸುತ್ತಿದ್ದೀರಿ ಎಂಬ ಬಗ್ಗೆ ಜಾಹೀರಾತು ಕೊಟ್ಟಿಬಿಡಿ. ಇಂಗ್ಲಿಷ್ ಖಾಸಗಿ ಶಾಲೆಗಳ ಗೊತ್ತಾ ? ಬಿಬಿಎಂಪಿ ಶಾಲೆಗಳ ಮಕ್ಕಳಿಗೆ ಇಂಗ್ಲಿಷ್ ಬೇಡವಾ? ಇನ್ನು ಮುಂದೆ ಸರ್ಕಾರಿ ಹಾಗೂ ಪಾಲಿಕೆ ಶಾಲೆಗಳು ಇಂಗ್ಲಿಷ್‍ಅನ್ನು ಒಂದು ಭಾಷೆಯಾಗಿ ಕಲಿಸಲು ನಮ್ಮ ಸಮ್ಮಿಶ್ರ ಸರ್ಕಾರ ಸಿದ್ದ ಎಂದು ಪ್ರಕಟಿಸಿದರು.

ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನವೇ ಸರ್ಕಾರಿ ಹಾಗೂ ಬಿಬಿಎಂಪಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ಕೊಡಿಸಬೇಕು ಎಂಬುದು ನನ್ನ ಹಾಗೂ ಡಿಸಿಎಂ ಪರಮೇಶ್ವರ್ ಅವರ ಕನಸಾಗಿತ್ತು. ಆ ಕನಸು ಇಂದು ಮೈಕ್ರೋ ಸಾಫ್ಟ್ ಸಂಸ್ಥೆಯ ಮೂಲಕ ನನಸಾಗುತ್ತಿದೆ ಎಂದು ಹೇಳಿದರು. ಪ್ರತಿ ಬಡ ಕುಟುಂಬಗಳು ನೆಮ್ಮದಿಯಿಂದ ಬದುಕಬೇಕೆಂಬುದೆ ನಮ್ಮ ಸರ್ಕಾರದ ಉದ್ದೇಶವಾಗಿದೆ. ಮೈಕ್ರೋ ಸಾಫ್ಟ್ ಸಂಸ್ಥೆಯವರು ಬಿಬಿಎಂಪಿ ಶಾಲೆಗಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಬಂದಿರುವ ಈ ಕಾರ್ಯಕ್ರಮದಲ್ಲಿ ನಾನು ಪಾಲ್ಗೊಂಡಿರುವುದು ನನ್ನ ಜೀವನದ ಸಂತಸದ ಕ್ಷಣ ಎಂದು ಬಣ್ಣಿಸಿದರು.  ಇದುವರೆಗೆ ಪಾಲಿಕೆ ಶಾಲೆಗಳೆಂದರೆ ಗುಣಮಟ್ಟದ ಶಿಕ್ಷಣ ಸಿಗುವುದಿಲ್ಲ ಎಂದು ನಂಬಲಾಗಿದ್ದು, ಇನ್ನು ಮುಂದೆ ಉತ್ತಮ ಗುಣಮಟ್ಟದ ಶಿಕ್ಷಣಸಿಗಲಿದೆ ನೀವು ಕೂಡ ತಂದೆ-ತಾಯಿಗಳ ನಿರೀಕ್ಷೆಗೆತಕ್ಕಂತೆ ಬೆಳೆಯಬಹುದು ಇದಕ್ಕೆ ನಮ್ಮ ಸರ್ಕಾರ ಎಲ್ಲ ಸಹಕಾರ ನೀಡಲಿದೆ ಎಂದರು.

# ಗಂಡು ಮಕ್ಕಳೆ ಇಲ್ಲ:
ಬಿಬಿಎಂಪಿ ಶಾಲಾ-ಕಾಲೇಜುಗಳಲ್ಲಿ ಹೆಣ್ಣುಮಕ್ಕಳೇ ಹೆಚ್ಚಾಗಿ ಓದುತತಿದ್ದಾರೆ. ಗಂಡು ಮಕ್ಕಳು ಅಷ್ಟಾಗಿಲ್ಲ. ಹಾಗಾಗಿ ಪೋಷಕರಿಗೆ ಅಭಿನಂದನೆ. ಸರ್ಕಾರ ರಚನೆಯಾದಾಗಲೇ ನಾನು ಮತ್ತು ಉಪಮುಖ್ಯಮಂತ್ರಿಗಳು ಖುದ್ದು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕೆಂದಿದ್ದೆವು. ನಾನು ಈ ಶಾಲಾ-ಕಾಲೇಜುಗಳ ದಾಖಲಾತಿ ಪರಿಶೀಲಿಸಿದಾಗ ಹೆಣ್ಣು ಮಕ್ಕಳು ಹೆಚ್ಚಾಗಿರುವುದು ಕಂಡು ಬಂದಿದೆ. ಇಲ್ಲಿ ಗಂಡುಮಕ್ಕಳೆ ಇಲ್ಲವಾ ಎಂದು ನಗೆ ಚಟಾಕಿ ಹಾರಿಸಿದರು. ಮುಂದಿನ ದಿನಗಳಲ್ಲಿ ಎಲ್ಲ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದರು.  ಬಿಬಿಎಂಪಿ ಶಾಲೆಗಳ ಜತೆಗೆ ರಾಜ್ಯದ ಎಲ್ಲ ಸರ್ಕಾರಿ ಶಾಲಾ-ಕಾಲೇಜುಗಳ ರಿಪೇರಿ ಮಾಡಲು ಹಾಗೂ ಹೊಸ ಕಟ್ಟಡ ಕಟ್ಟಲು ಒಂದು ಸಾವಿರ ಕೋಟಿ ಹಣವನ್ನು ಬಜೆಟ್‍ನಲ್ಲಿ ಮೀಸಲಿರಿಸಲಾಗಿದೆ ಎಂದು ತಿಳಿಸಿದರು.

ಮಲೆನಾಡು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗೆ ಹೋಗಲು ನದಿ ದಾಟುವಾಗ ಪ್ರಾಣ ಕಳೆದುಕೊಂಡ ಉದಾಹರಣೆ ಇವೆ. ಹಾಗಾಗಿ ಕಾಲು ಸೇತುವೆ ನಿರ್ಮಿಸಲು 121 ಕೋಟಿ ಮೀಸಲಿರಿಸಿದ್ದು, ಶೀಘ್ರವೇ ಈ ಯೋಜನೆ ಪ್ರಾರಂಭವಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದರು.

# ಬಿಬಿಎಂಪಿ ಅಧಿಕಾರಿಗಳಿಗೆ ಛೀಮಾರಿ:
ಕೋರ್ಟ್ ಛೀಮಾರಿ ಹಾಕಿದ ನಂತರವೇ ನೀವು ಕೆಲಸ ಮಾಡೋದಾ ? ಜವಾಬ್ದಾರಿ ಅರಿತು ಕೆಲಸ ಮಾಡೋಕಾಗಲ್ವಾ? ಮಳೆಗಾಲದ ಅನಾಹುತ ತಪ್ಪಿಸಲು, ರಸ್ತೆ ಗುಂಡಿ ಮುಚ್ಚುವ ಬಗ್ಗೆ, ಕಸದ ಸಮಸ್ಯೆ ನಿವಾರಣೆಗೆ ನ್ಯಾಯಾಲಯ ಛೀಮಾರಿ ಹಾಕಿದ ನಂತರ ಏಕೆ ಕೆಲಸ ಮಾಡ್ತೀರಾ ? ಇನ್ನು ಮುಂದಾದರೂ ಪ್ರಾಮಾಣಿಕವಾಗಿ ಜವಾಬ್ದಾರಿ ಅರಿತು ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ನಮ್ಮ ಪಾಲಿಕೆ ವ್ಯಾಪ್ತಿಯಲ್ಲಿ 4 ಡಿಗ್ರಿ ಕಾಲೇಜು, 14 ಪಿಯುಸಿ, 32 ಹೈಸ್ಕೂಲ್, 14 ಪ್ರಾಥಮಿಕ, 90 ಶಿಶುವಿಹಾರ ಕೇಂದ್ರಗಳಿವೆ. 17 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದರಲ್ಲಿ ಬಹುತೇಕರು ಅಲ್ಪಸಂಖ್ಯಾತರು, ಬಡವರು ಹೆಚ್ಚಾಗಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಆದಾಗ ಬಿಬಿಎಂಪಿ ಶಾಲಾ-ಕಾಲೇಜುಗಳನ್ನು ಮೇಲ್ದರ್ಜೆಗೆ ಏರ

Facebook Comments

Sri Raghav

Admin