ಹುಟ್ಟಿದ ಕೂಡಲೇ ಮರಿ ಆನೆ ಸಾವು, ಕರುಳು ಕಿವುಚುವಂತಿತ್ತು ತಾಯಿ ಆನೆಯ ವೇದನೆ..!

ಈ ಸುದ್ದಿಯನ್ನು ಶೇರ್ ಮಾಡಿ

elephan--01

ಹಾಸನ, ಸೆ.26- ಪ್ರೀತಿ, ಕರುಣೆ, ಅನುಬಂಧ ತೋರುವುದರಲ್ಲಿ ಮನುಷ್ಯರಿಗಿಂತ ಪ್ರಾಣಿಗಳು ಒಂದು ಕೈ ಹೆಚ್ಚು. ನಮ್ಮಲ್ಲಿ ಯಾರಾದರೂ ಸಾವನ್ನಪ್ಪಿದರೆ ಶವಸಂಸ್ಕಾರ ಮಾಡಿ ಬಂದು ಸ್ನಾನ ಮಾಡಿ , ಊಟ ಮಾಡಿ ದುಃಖ ಮರೆಯಲು ಯತ್ನಿಸುತ್ತೇವೆ.  ಆದರೆ ಪ್ರಾಣಿಗಳು ಹಾಗಲ್ಲ. ತನ್ನ ಬಳಗದಲ್ಲಿ ಸಾವಾಗಿದ್ದು , ಗೊತ್ತಾದರೆ ಮೃತ ದೇಹ ಬಿಟ್ಟು ಕದಲುವುದಿಲ್ಲ. ಅಲ್ಲೇ ರೋಧಿಸುತ್ತಾ ಅಲೆಯುತ್ತಿರುತ್ತವೆ. ಇಲ್ಲೊಂದು ಮನ ಮಿಡಿಯುವ ಉದಾಹರಣೆ ಇದೆ.

ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಯಸಳೂರು ಹೋಬಳಿ ಕೊತ್ನಹಳ್ಳಿ ಗ್ರಾಮದ ಭತ್ತದ ಗದ್ದೆಯೊಂದರಲ್ಲಿ ಆನೆ ಮರಿಯೊಂದು ಜನಿಸಿತ್ತು. ಅದೇನು ಕಾರಣವೋ ಹುಟ್ಟಿದ ಕೂಡಲೇ ಆನೆಯ ಮರಿ ಮೃತಪಟ್ಟಿದೆ. ಪಾಪ ತಾಯಿ ಆನೆಗೆ ಮರಿ ಸತ್ತಿರುವುದು ಗೊತ್ತಾಗಲಿಲ್ಲವೋ ಏನೋ ಅಲುಗಾಡದೆ ಗದ್ದೆಯಲ್ಲೇ ನಿಶ್ಚೇತವಾಗಿ ಬಿದ್ದ ತನ್ನ ಪುಟ್ಟ ಕಂದನನ್ನು ಎಬ್ಬಿಸಲು ಪ್ರಯತ್ನಿಸುತ್ತಲೇ ಇತ್ತು.

ಹೇಗಾದರೂ ಮಾಡಿ ಕಡಂಚಿಗೆ ಕೊಂಡೊಯ್ದರೆ ತನ್ನ ಬಳಗದವರಿಂದ ಸಹಾಯ ಸಿಗಬಹುದು ಎಂಬ ಕಾರಣಕ್ಕೇನೋ ತನ್ನ ಸೊಂಡಿಲು ಹಾಗೂ ಕಾಲಿಂದ ಮರಿಯನ್ನು ನಿಧಾನಕ್ಕೆ ನೋವಾಗದಂತೆ ತಳ್ಳುತ್ತಾ ದುಃಖಿಸುತ್ತಾ ಪ್ರಯತ್ನಿಸಿ ಕೊನೆಗೂ ಕಾಡಿಗೆ ಸೇರಿಸುವಲ್ಲಿ ಸಫಲವಾಗಿದೆ. ಆನೆ ಮಾತ್ರ ದುಃಖಿಸುತ್ತಾ ಅಲ್ಲೇ ಅಡ್ಡಾಡುತ್ತಿದೆ. ಇದನ್ನು ಕಂಡು ಕಲ್ಲು ಹೃದಯದವರ ಕಣ್ಣಾಲಿಗಳು ತೇವಗೊಳ್ಳದೆ ಇರಲಾರದು.  ಈ ದೃಶ್ಯವನ್ನು ಸ್ಥಳೀಯರೊಬ್ಬರು ವೀಡಿಯೋ ಮಾಡಿ ವ್ಯಾಟ್ಸಪ್‍ನಲ್ಲಿ ಹಾಕಿ ದುಃಖವನ್ನು ಹಂಚಿಕೊಂಡಿದ್ದಾರೆ.

 

 

Facebook Comments

Sri Raghav

Admin