’16ನೇ ವಯಸ್ಸಿನಲ್ಲೇ ನನ್ನನ್ನು ರೇಪ್ ಮಾಡಲಾಗಿತ್ತು’ : ಹೀಗೆ ಹೇಳಿದ ಈಕೆ ಯಾರು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

Rape--01

ನ್ಯೂಯಾರ್ಕ್, ಸೆ.26 (ಪಿಟಿಐ)- ನಾನು 16 ವರ್ಷದ ಅಪ್ರಾಪ್ತೆಯಾಗಿದ್ದಾಗಲೇ ನನ್ನ ಮೇಲೆ ಅತ್ಯಾಚಾರ ನಡೆದಿತ್ತು ಎಂಬ ಸಂಗತಿಯನ್ನು ಭಾರತೀಯ ಮೂಲದ ಅಮೆರಿಕ ರೂಪದರ್ಶಿ, ಲೇಖಕಿ ಹಾಗೂ ವಿವಾದಾತ್ಮಕ ಲೇಖಕ ಸಲ್ಮಾನ್ ರಶ್ದಿ ಅವರ ಮಾಜಿ ಪತ್ನಿ ಪದ್ಮಾ ಲಕ್ಷ್ಮಿ 32 ವರ್ಷಗಳ ನಂತರ ಬಹಿರಂಗಗೊಳಿಸಿದ್ದಾರೆ.

ಅಮೆರಿಕದ ಜನಪ್ರಿಯ ಟಿವಿ ನಿರೂಪಕಿಯಾಗಿರುವ ಪದ್ಮಾ ಆಗ ನಡೆದ ಘಟನೆ ಹಾಗೂ ಇಷ್ಟು ವರ್ಷಗಳ ಕಾಲ ಮೌನವಾಗಿದ್ದ ಕಾರಣಗಳನ್ನೂ ಸಹ ನ್ಯೂಯಾರ್ಕ್ ಟೈಮ್ಸ್ ಅಭಿಪ್ರಾಯ ಅಂಕಣದಲ್ಲಿ ತಿಳಿಸಿದ್ದಾರೆ.   ಆಗ ನಾನು ಲಾಸ್ ಏಂಜೆಲ್ಸ್‍ನಲ್ಲಿದ್ದೆ. ನನಗೆ 23 ವರ್ಷದ ಸುಂದರ ತರುಣನೊಬ್ಬ ಪರಿಚಿತನಾದ. ಆತನೊಂದಿಗೆ ಸುತ್ತಾಟ ನಡೆದಿತ್ತು. ಕೆಲವು ತಿಂಗಳ ನಂತರ ಹೊಸ ವರ್ಷಾಚರಣೆ ವೇಳೆ ಆತ ನನ್ನನ್ನು ಬಲತ್ಕಾರವಾಗಿ ಅನುಭವಿಸಿದ ಎಂದು ಪದ್ಮಾ ಬರೆದಿದ್ದಾರೆ.

ನಾನು ಇಷ್ಟು ವರ್ಷಗಳ ಕಾಲ ಈ ವಿಷಯವನ್ನು ಎಲ್ಲೂ ಬಾಯಿ ಬಿಟ್ಟಿರಲಿಲ್ಲ. ಆದರೆ ಅಮೆರಿಕದ ಸುಪ್ರೀಂಕೋರ್ಟ್‍ಗೆ ನಾಮನಿರ್ದೇಶನಗೊಂಡಿರುವ ಬ್ರೆಟ್ ಕವನೌಟ್ ವಿರುದ್ಧ ಲೈಂಗಿಕ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಇಂಥ ಘಟನೆಗಳು ನಡೆಯುತ್ತವೆ ಎಂಬುದನ್ನು ತಿಳಿಸುವ ಉದ್ದೇಶದಿಂದ ನಾನು ಈಗ ಮೌನ ಮುರಿದಿದ್ದೇನೆ. ಇಂಥ ಘಟನೆಗಳು ನಡೆಯದಂತೆ ಇತರರು ಎಚ್ಚರ ವಹಿಸಬೇಕು ಹಾಗೂ ತಮ್ಮ ಮೇಲೆ ನಡೆದ ಲೈಂಗಿಕ ಶೋಷಣೆಯನ್ನು ಇತರರು ಕೂಡ ಬಹಿರಂಗಗೊಳಿಸಬೇಕೆಂಬ ಕಾರಣದಿಂದ ಈಗ ಆ ಸಂಗತಿಯನ್ನು ನಾನು ಬಹಿರಂಗಗೊಳಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

Rape--03

ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ಕ್ರಿಸ್ಟೀನ್ ಬ್ಲಾಸೆ ಫೋರ್ಡ್ ಮತ್ತು ಡೆಬೋರಾ ರ್ಯಾಮಿರೆಜ್ ಅವರು ಕೆಲವು ವರ್ಷಗಳ ಕಾಲ ಸುಮ್ಮನಿದ್ದ ಪ್ರಕರಣವನ್ನು ಉಲ್ಲೇಖಿಸಿರುವ ಪದ್ಮಾ, ಸಂದರ್ಭ-ಸನ್ನಿವೇಶಗಳಿಂದ ಮಹಿಳೆಯರು ಇಂಥ ಕೆಟ್ಟ ಘಟನೆಗಳ ಬಗ್ಗೆ ಮËನ ವಹಿಸುತ್ತಾರೆ. ಅದೇ ಪರಿಸ್ಥಿತಿಯಲ್ಲಿ ನಾನು ಸಹ ಇದ್ದೇ. ಈಗ ನಮಗೆ ಆಗಿರುವ ಲೈಂಗಿಕ ಶೋಷಣೆಯನ್ನು ಬಹಿರಂಗಗೊಳಿಸುವುದು ಸೂಕ್ತ ಎಂಬ ಕಾರಣಕ್ಕಾಗಿ ಇದನ್ನು ತಿಳಿಸುತ್ತಿದ್ದೇನೆ ಎಂದು ಆಕೆ ತಿಳಿಸಿದ್ದಾರೆ.

ನನ್ನ ತಾಯಿ ಚಿಕ್ಕವಳಿದ್ದಾಗ ಆಕೆಯ ಮೇಲೂ ಲೈಂಗಿಕ ದೌರ್ಜನ್ಯ ನಡೆದಿತ್ತಂತೆ. ಆಕೆಯ ಮಲ ತಂದೆಯ ಸಂಬಂಧಿಕನೊಬ್ಬ ಅನಾವಶ್ಯಕವಾಗಿ ನನ್ನ ತಾಯಿಯ ಅಂಗಾಂಗಗಳನ್ನು ಸ್ಪರ್ಶಿಸಿ ಕಿರುಕುಳ ನೀಡಿದ್ದನೆಂಬ ಸಂಗತಿಯನ್ನೂ ಸಹ ಪದ್ಮಾ ಲಕ್ಷ್ಮೀ ಉಲ್ಲೇಖಿಸಿದ್ದಾರೆ.

Rape--02

Facebook Comments

Sri Raghav

Admin