ಕೋರ್ಟ್ ಕಲಾಪಗಳ ನೇರ ಪ್ರಸಾರಕ್ಕೆ ಸುಪ್ರೀಂ ಸಮ್ಮತಿ

ಈ ಸುದ್ದಿಯನ್ನು ಶೇರ್ ಮಾಡಿ

Court-Live--01

ನವದೆಹಲಿ, ಸೆ.26-ನ್ಯಾಯಾಲಯಗಳ ಕಲಾಪಗಳನ್ನು ನೇರ ಪ್ರಸಾರ ಮಾಡುವುದಕ್ಕೆ ಇಂದು ಸಮ್ಮತಿ ನೀಡಿದೆ. ಇದರೊಂದಿಗೆ ಇನ್ನು ಮುಂದೆ ಕೋರ್ಟ್‍ಗಳಲ್ಲಿ ಮಹತ್ವದ ಪ್ರಕರಣಗಳ ವಿಚಾರಣೆಗಳು ನೇರ ಪ್ರಸಾರದಲ್ಲಿ ಲಭ್ಯವಾಗಲಿದೆ.  ಕೋರ್ಟ್ ಕಲಾಪದ ನೇರ ಪ್ರಸಾರಕ್ಕೆ ಅವಕಾಶ ಕೋರಿ ಸಲ್ಲಿಸಲಾಗಿದ್ದ ಅರ್ಜಿ ಕುರಿತು ಸುಪ್ರೀಂಕೋರ್ಟ್ ಇಂದು ವಿಚಾರಣೆ ನಡೆಸಿ ಈ ಮಹತ್ವದ ತೀರ್ಪು ನೀಡಿತು.

ಕೋರ್ಟ್ ಕಲಾಪವನ್ನು ನೇರ ಪ್ರಸಾರ ಮಾಡುವಾಗ ಸಾರ್ವಜನಿಕರ ಹಕ್ಕುಗಳು ಮತ್ತು ತಕರಾರುದಾರರ ಘನತೆಯನ್ನು ರಕ್ಷಿಸುವ ಕುರಿತು ಅಗತ್ಯ ಕಾನೂನುಗಳನ್ನು ತಾನು ಸದ್ಯದಲ್ಲೇ ತಿಳಿಸುವುದಾಗಿ ನ್ಯಾಯಾಲಯ ಸೂಚಿಸಿದೆ.

ಮಾಹಿತಿ ಕುರಿತ ಸಾರ್ವಜನಿಕ ಹಕ್ಕು ರಕ್ಷಿಸಲು ಮತ್ತು ನ್ಯಾಯಾಂಗ ವ್ಯವಹಾರಗಳಲ್ಲಿ ಇನ್ನೂ ಹೆಚ್ಚಿನ ಪಾರದರ್ಶಕತೆ ಕಾಯ್ದುಕೊಳ್ಳಲು ಇದರಿಂದ ನೆರವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.  ಹಿರಿಯ ವಕೀಲರಾದ ಇಂದಿರಾ ಜಯ್‍ಸಿಂಗ್, ಕಾನೂನು ವಿದ್ಯಾರ್ಥಿ ಸ್ನೇಹಿಲ್ ತ್ರಿಪಾಠಿ ಮತ್ತು ಸೆಂಟರ್ ಫಾರ್ ಅಕೌಂಟ್ ಎಬಿಲಿಟಿ ಎನ್‍ಜಿಒ ಸೇರಿ ಅನೇಕರು ಕೋರ್ಟ್ ಕಲಾಪ ನೇರ ಪ್ರಸಾರಕ್ಕೆ ಕೋರಿ ಅರ್ಜಿ ಸಲ್ಲಿಸಿದ್ದರು.

Facebook Comments

Sri Raghav

Admin