ರಫೇಲ್ ಒಪ್ಪಂದವಾದಾಗ ನಾನು ಅಧಿಕಾರದಲ್ಲಿ ಇರಲಿಲ್ಲ : ಫ್ರಾನ್ಸ್ ಅಧ್ಯಕ್ಷ

ಈ ಸುದ್ದಿಯನ್ನು ಶೇರ್ ಮಾಡಿ

Rafel--01

ವಿಶ್ವಸಂಸ್ಥೆ, ಸೆ.26 (ಪಿಟಿಐ)- ಭಾರತ ಮತ್ತು ಫ್ರಾನ್ಸ್ ನಡುವಣ 56,000 ಕೋಟಿ ರೂ. ವೆಚ್ಚದಲ್ಲಿ 36 ರಫೇಲ್ ಯುದ್ಧ ವಿಮಾನಗಳ ಖರೀದಿ ಒಪ್ಪಂದ ಕುರಿತು ಉಲ್ಬಣಗೊಂಡಿರುವ ವಿವಾದದ ಬಗ್ಗೆ ಫ್ರೆಂಚ್ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರೋನ್ ಕೆಲವೊಂದು ಸ್ಪಷ್ಟಿಕರಣಗಳನ್ನು ನೀಡಿದ್ದಾರೆ.

ವಿಶ್ವಸಂಸ್ಥೆಯ 73ನೇ ಸಾಮಾನ್ಯ ಅಧಿವೇಶನದಲ್ಲಿ ಭಾಗವಹಿಸಲು ನ್ಯೂಯಾರ್ಕ್‍ನಲ್ಲಿರುವ ಮ್ಯಾಕ್ರೋನ್ ಸುದ್ದಿಗೋಷ್ಠಿ ನಡೆಸಿ. ಇದು ಸರ್ಕಾರಗಳ ನಡುವೆ ಆಗ ಮಾತುಕತೆ ಒಪ್ಪಂದವಾಗಿದೆ. ರಫೇಲ್ ಒಡಂಬಡಿಕೆಯಾದಾಗ ನಾನು ಅಧಿಕಾರದಲ್ಲಿ ಇರಲೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರಫೇಲ್ ಜೆಟ್ ಖರೀದಿ ಒಪ್ಪಂದದಲ್ಲಿ ಸಹಭಾಗಿ ಸಂಸ್ಥೆಯನ್ನಾಗಿ ರಿಲಯನ್ಸ್ ಡಿಫೆನ್ಸ್ ನನ್ನು ಆಯ್ಕೆ ಮಾಡಿಕೊಳ್ಳುವ ವಿಚಾರದಲ್ಲಿ ಫ್ರಾನ್ಸ್ ಅಥವಾ ಫ್ರೆಂಚ್ ಏರೋಸ್ಪೇಸ್ ಕಂಪನಿ ಡಿಸ್ಸೌಲ್ಟ್ ಪಾತ್ರ ಕುರಿತು ಅಂತಾರಾಷ್ಟ್ರೀಯ ಮಾಧ್ಯಮಗಳು ಉತ್ತರ ಬಯಸಿದಾಗ, ಇದು ಫ್ರಾನ್ಸ್ ಮತ್ತು ಭಾರತ ಸರ್ಕಾರದ ನಡುವೆ ಆದ ಮಾತುಕತೆ-ಒಪ್ಪಂದವಾಗಿದೆ. ರಿಲಾಯನ್ಸ್ ಸಂಸ್ಥೆಯನ್ನು ಸಹಭಾಗಿ ಸಂಸ್ಥೆಯನ್ನಾಗಿ ಆಯ್ಕೆ ಮಾಡಿದ್ದರಲ್ಲಿ ಸರ್ಕಾರದ ಪಾತ್ರವಿಲ್ಲ. ಇದು ಡಿಸ್ಸೌಲ್ಟ್ ಸಂಸ್ಥೆಯ ನಿರ್ಧಾರವಾಗಿತ್ತು ಎಂದು ಅವರು ತಿಳಿಸಿದರು.

ಈ ಬಗ್ಗೆ ಫ್ರಾನ್ಸ್ ಸರ್ಕಾರ ಸಾಕಷ್ಟು ಸ್ಪಷ್ಟೀಕರಣಗಳನ್ನು ನೀಡಿದೆ. ಇದು ಎರಡು ಸರ್ಕಾರಗಳ ನಡುವೆ ನೇರವಾಗಿ ಆದ ಒಪ್ಪಂದ. ಎಲ್ಲಕ್ಕಿಂತ ಮುಖ್ಯವಾಗಿ ರಫೇಲ್ ಒಪ್ಪಂದವಾದಾಗ ನಾನು ಅಧಿಕಾರದಲ್ಲಿ ಇರಲಿಲ್ಲ ಎಂದು ಮ್ಯಾಕ್ರೋನ್ ಹೇಳಿದರು.

Facebook Comments

Sri Raghav

Admin