ಥಾಯ್ಲೆಂಡ್ ಕೋರ್ಟ್‍ನಲ್ಲಿ ಭಾರತದ ಜೊತೆ ಕಾನೂನು ಸಮರಕ್ಕಿಳಿದ ಪಾಕ್

ಈ ಸುದ್ದಿಯನ್ನು ಶೇರ್ ಮಾಡಿ

India-And-Pakistan--01
ಮುಂಬೈ, ಅ.6- ಭೂಗತ ದೊರೆ ಚೋಟಾ ಶಕೀಲ್‍ನ ಸಹಚರ ಮುದಸರ್ ಹುಸೇನ್ ಸೈಯದ್ ಅಲಿಯಾಸ್ ಮುನ್ನಾ ಝಿಂಗಾಡಾ(50)ನನ್ನು ತಮ್ಮ ವಶಕ್ಕೆ ನೀಡಬೇಕೆಂದು ಥಾಯ್ಲೆಂಡ್ ಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿರುವ ಪಾಕಿಸ್ತಾನ ಈ ಮೂಲಕ ಭಾರತದ ಜತೆ ಕಾನೂನು ಸಮರಕ್ಕೆ ಇಳಿದಿದೆ. ಈ ಗ್ಯಾಂಗ್‍ಸ್ಟರ್‍ನನ್ನು ತಮ್ಮ ವಶಕ್ಕೆ ನೀಡುವಂತೆ ಭಾರತ ಮಾಡಿಕೊಂಡಿದ್ದ ಮನವಿಯನ್ನು ಪುರಸ್ಕರಿಸಿದ ಅಲ್ಲಿನ ಕೋರ್ಟ್, ಝಿಂಗಾಡಾನನ್ನು ಭಾರತಕ್ಕೆ ಗಡಿಪಾರು ಮಾಡುವಂತೆ ತೀರ್ಪು ನೀಡಿತ್ತು. ಆದರೆ ಈತ ಪಾಕಿಸ್ತಾನಿ ಪ್ರಜೆಯಾಗಿರುವುದರಿಂದ ಈತನನ್ನು ತಮ್ಮ ವಶಕ್ಕೆ ನೀಡಬೇಕೆಂದು ಪಾಕಿಸ್ತಾನ ಆಗ್ರಹಿಸಿದೆ.

ಝಿಂಗಾಡಾ ಭಾರತದ ಪ್ರಜೆ ಎಂದು ಅಭಿಪ್ರಾಯಪಟ್ಟು ಥಾಯ್ಲೆಂಡ್ ಕೋರ್ಟ್ ಕಳೆದ ಆಗಸ್ಟ್‍ನಲ್ಲಿ ನೀಡಿದ್ದ ತೀರ್ಪನ್ನು ಪಾಕಿಸ್ತಾನ ಕಳೆದ ತಿಂಗಳು ಪ್ರಶ್ನಿಸಿದೆ. ಮೂಲತಃ ಜೋಗೇಶ್ವರಿಯವನಾದ ಝಿಂಗಾಡಾ, ಶಕೀಲ್‍ನ ಕೃಪಾಕಟಾಕ್ಷದಲ್ಲಿ ಪ್ರತಿಸ್ಪರ್ಧಿ ಗ್ಯಾಂಗ್‍ಸ್ಟರ್ ಛೋಟಾ ರಾಜನ್ ಹತ್ಯೆಗೆ 2000ನೇ ಇಸವಿಯಲ್ಲಿ ಬ್ಯಾಂಕಾಕ್‍ನಲ್ಲಿ ಯತ್ನಿಸಿದ್ದ. ಝಿಂಗಾಡಾಗೆ 10 ವರ್ಷ ಜೈಲುಶಿಕ್ಷೆ ವಿಧಿಸಲಾಗಿತ್ತು.

2012ರಲ್ಲಿ ಜೈಲು ಶಿಕ್ಷೆ ಪೂರ್ಣಗೊಳಿಸಿದ ಬಳಿಕ ಭಾರತ ಹಾಗೂ ಪಾಕಿಸ್ತಾನ ಆತನ ರಾಷ್ಟ್ರೀಯತೆಯ ಬಗ್ಗೆ ಥಾಯ್ಲೆಂಡ್ ಕೋರ್ಟ್‍ನಲ್ಲಿ ಕಾನೂನು ಸಮರ ನಡೆಸುತ್ತಿವೆ. ಪಾಕಿಸ್ತಾನ ಸಲ್ಲಿಸಿದ ಮೇಲ್ಮನವಿ ಈತನ ಗಡಿಪಾರು ಪ್ರಕ್ರಿಯೆಯನ್ನು ಮತ್ತಷ್ಟು ವಿಳಂಬಗೊಳಿಸಲಿದೆ. ಪಾಕಿಸ್ತಾನ ಸರ್ಕಾರ, ಸ್ಥಳೀಯ ಜನನ ಪ್ರಮಾಣಪತ್ರ, ಶಾಲಾ ಪ್ರಮಾಣಪತ್ರ ಸೇರಿದಂತೆ ನಕಲಿ ದಾಖಲೆಗಳನ್ನು ಸಲ್ಲಿಸಿದೆ.

ಡಿಎನ್‍ಎ ವರದಿಯಂಥ ಪ್ರಬಲ ಪುರಾವೆ, ಮುನ್ನಾ ಝಿಂಗಾಡಾನ ಬಾಲ್ಯದ ಚಿತ್ರಗಳನ್ನು ಥಾಯ್ಲೆಂಡ್ ಕೋರ್ಟ್‍ನ ಮುಂದೆ ಪ್ರಸ್ತುತಪಡಿಸಿದ್ದೇವೆ. ಪಾಕಿಸ್ತಾನದ ಮನವಿಯನ್ನು ಕೋರ್ಟ್ ತಿರಸ್ಕರಿಸುತ್ತದೆ ಎಂಬ ವಿಶ್ವಾಸವಿದೆ ಎಂದು ಭಾರತದ ಹಿರಿಯ ಪೆÇಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

Facebook Comments

Sri Raghav

Admin