ಏಷ್ಯಾ ಪ್ಯಾರಾ ಗೇಮ್ಸ್ : ಕ್ಲಬ್ ಥ್ರೋನಲ್ಲಿ ಏಕ್ತಾಗೆ ಚಿನ್ನದ ಪದಕ

ಈ ಸುದ್ದಿಯನ್ನು ಶೇರ್ ಮಾಡಿ

Aisa--01

ಜಕಾರ್ತ, ಅ.9- ಇಂಡೋನೆಷ್ಯಾ ರಾಜಧಾನಿ ಜಕಾರ್ತ ದಲ್ಲಿ ನಡೆ ಯುತ್ತಿರುವ 3ನೇ  ಏಷ್ಯನ್ ಪ್ಯಾರಾ ಗೇಮ್ಸ್‍ನಲ್ಲಿ ಭಾರತದ ಕ್ಲಬ್ ಥ್ರೋ ಪಟು ಏಕ್ತಾ ಭ್ಯಾನ್ ಬಂಗಾರದ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಭಾರತ ಈವರೆಗೆ ನಾಲ್ಕು ಚಿನ್ನದ ಪದಕಗಳನ್ನು ಗೆದ್ದಂತಾಗಿದೆ.

ಇಂದು ನಡೆದ ಮಹಿಳೆಯರ ಕ್ಲಬ್ ಥ್ರೋ ಸ್ಪರ್ಧೆಯಲ್ಲಿ ಏಕ್ತಾ ನಾಲ್ಕನೇ ಯತ್ನದಲ್ಲಿ 16.02 ಮೀಟರ್ ದೂರಕ್ಕೆ ಕ್ಲಬ್ ಎಸೆದು ಚಿನ್ನ ಗೆದ್ದರು. ಈ ವರ್ಷದ ಆರಂಭದಲ್ಲಿ ನಡೆದ ಇಂಡಿಯನ್ ಓಪನ್ ಪ್ಯಾರಾ ಅಥ್ಲೆಟಿಕ್ ಚಾಂಪಿಯನ್‍ಶಿಪ್‍ನಲ್ಲೂ ಅವರು ಚಿನ್ನ ಜಯಿಸಿದ್ದರು.  ನಿನ್ನೆ ಜಾವೆಲಿನ್ ಎಸೆತಗಾರ ಸಂದೀಪ್ ಚೌಧರಿ ಚಿನ್ನದ ಸಾಧನೆ ಮಾಡಿದ್ದರು. ಇದರೊಂದಿಗೆ ಭಾರತ ಪ್ರಥಮ ಬಂಗಾರದ ಪದಕ ಖಾತೆ ತೆರೆದಿತ್ತು. ನಿನ್ನೆಯಿಂದ ಭಾರತ ಒಟ್ಟು ನಾಲ್ಕು ಚಿನ್ನದ ಪದಕಗಳನ್ನು ಗೆದ್ದಿದೆ.

Facebook Comments