ಗ್ರೆನೇಡ್ ದಾಳಿ : ಮಾಜಿ ಪ್ರಧಾನಿ ಪುತ್ರ ಸೇರಿ 19 ಅಪರಾಧಿಗಳಿಗೆ ಜೀವಾವಧಿ, ಇತರೆ 19 ಮಂದಿಗೆ ಗಲ್ಲು

ಈ ಸುದ್ದಿಯನ್ನು ಶೇರ್ ಮಾಡಿ

dhaka--01
ಢಾಕಾ, ಅ.10-ಬಾಂಗ್ಲಾದೇಶದಲ್ಲಿ 2004ರಲ್ಲಿ 24 ಜನರನ್ನು ಬಲಿ ಪಡೆದ ಗ್ರೆನೇಡ್ ದಾಳಿ ಕುರಿತು ದೇಶದ ನ್ಯಾಯಾಲಯವೊಂದು ಇಂದು ಮಹತ್ವದ ತೀರ್ಪು ನೀಡಿದೆ. 19 ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದ್ದು, ಮಾಜಿ ಪ್ರಧಾನಿ ಖಾಲಿದಾ ಜಿಯಾ ಪುತ್ರ ತಾರಿಖ್ ರೆಹಮಾನ್ ಸೇರಿದಂತೆ ಇತರ 19 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಮಾಜಿ ಗೃಹ ಖಾತೆ ರಾಜ್ಯ ಸಚಿವ ಲುಫ್ತೋಜ್‍ಮನ್ ಬಾಬರ್ ಸೇರಿದಂತೆ 19 ಜನರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಲಾಗಿದೆ. ಈ ಪ್ರಕರಣದಲ್ಲಿ ಈಗ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಪ್ರಧಾನಿ ಪುತ್ರ ಹಾಗೂ ಬಿಎನ್‍ಪಿ ಹಿರಿಯ ಉಪಾಧ್ಯಕ್ಷ ರೆಹಮಾನ್ ಲಂಡನ್‍ನಲ್ಲಿದ್ದಾರೆ.

ಆಗಸ್ಟ್ 21, 2004ರಲ್ಲಿ ಆವಾಮಿ ಲೀಗ್ ರ್ಯಾಲಿ ವೇಳೆ ಈ ದಾಳಿ ನಡೆದಿತ್ತು. ಈಗ ಪ್ರಧಾನಮಂತ್ರಿಯಾಗಿರುವ ಆಗಿನ ವಿರೋಧ ಪಕ್ಷದ ನಾಯಕಿ ಶೇಖ್ ಹಸೀನಾ ಅವರನ್ನು ಗುರಿಯಾಗಿಟ್ಟುಕೊಂಡು ಈ ದಾಳಿ ನಡೆಸಲಾಗಿತ್ತು. ಈ ಭೀಕರ ಆಕ್ರಮಣದಲ್ಲಿ 24 ಮಂದಿ ಹತರಾಗಿ, ಶೇಖ್ ಹಸೀನಾ ಸೇರಿದಂತೆ 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ದಾಳಿ ನಂತರ ಹಸೀನಾ ಅವರಿಗೆ ಶ್ರವಣ ದೋಷವಾಗಿತ್ತು.

Facebook Comments