ಪ್ಯಾರಾ ಒಲಿಂಪಿಕ್ಸ್ ನಲ್ಲಿ ಭಾರತೀಯರ ಪದಕ ಬೇಟೆ, ಹರವೀಂದರ್’ಗೆ ಒಲಿದ ಚಿನ್ನ

ಈ ಸುದ್ದಿಯನ್ನು ಶೇರ್ ಮಾಡಿ

Harvinder-Singh

ಜಕಾರ್ತ, ಅ.10- ಪ್ಯಾರಾ ಒಲಿಂಪಿಕ್ಸ್‍ನಲ್ಲಿ ಭಾರತೀಯ ಅಥ್ಲೀಟ್‍ಗಳ ಪದಕ ಬೇಟೆ ಮುಂದುವರೆದಿದ್ದು ಇಂದು ಕೂಡ ಒಂದು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕವನ್ನು ಗೆಲ್ಲುವ ಮೂಲಕ ದೇಶದ ಕೀರ್ತಿ ಹೆಚ್ಚಿಸಿದ್ದಾರೆ.

# ಹರ್‍ವೀಂದರ್‍ಗೆ ಸ್ವರ್ಣ:
ಪ್ಯಾರಾ ಒಲಿಂಪಿಕ್ಸ್‍ನ ಅರ್ಚರಿಯ ಫೈನಲ್ ಸ್ಪರ್ಧೆಯಲ್ಲಿ ಭಾರತದ ಹವೀಂದರ್ ಸಿಂಗ್ ಅವರು ಚೀನಾದ ಜಾಹೋ ಲಿಕ್ಸುಯಿ ಅವರನ್ನು ಹಿಂದಿಕ್ಕಿ ಸ್ವರ್ಣ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಎಫ್-11 ವಿಭಾಗದಲ್ಲಿ ಪಾಲ್ಗೊಂಡಿದ್ದ ಭಾರತದ ಮೋನು ಗಂಗಾಸ್ ಡಿಸ್ಕಸ್ ಥ್ರೋನಲ್ಲಿ ಬೆಳ್ಳಿ ಪದಕ ಹಾಗೂ ಎಫ್-46 ವಿಭಾಗದಲ್ಲಿ ಪಾಲ್ಗೊಂಡಿದ್ದ ಮೊಹಮ್ಮದ್ ಯಾಸರ್ ಶಾಟ್‍ಫುಟ್‍ನಲ್ಲಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.

ಮೋನು ತಮ್ಮ ಮೂರು ಎಸೆತಗಳಲ್ಲಿ 35.89 ಮೀಟರ್ ದೂರ ಡಿಸ್ಕಸ್ ಥ್ರೋ ಮಾಡುವ ಮೂಲಕ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರೆ, ಇರಾನ್‍ನ ಓಲಾಂದ್ ಮೆಹದಿ 42.37 ಮೀಟರ್ ದೂರ ಎಸೆದು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ಶಾಟ್‍ಫುಟ್‍ನಲ್ಲಿ ಪಾಲ್ಗೊಂಡಿದ್ದ ಭಾರತದ ಯಾಸೀರ್ 14.22 ಮೀ ದೂರ ಎಸೆಯುವ ಮೂಲಕ ಕಂಚಿನ ಪದಕವನ್ನು ಕೊರಳಿಗೆ ಅಲಂಕರಿಸಿಕೊಂಡರೆ, ಚೀನಾದ ವೈ ಎನ್‍ಲಾಂಗ್ (15.67 ಮೀ) ಸ್ವರ್ಣ ಪದಕ, ಕಜಕೀಸ್ತಾನ್‍ನ ಮನ್ಸುರ್‍ಬಾಹೈವ್ ರಾವಿಲ್ (14.66) ರಜತ ಪದಕವನ್ನು ತಮ್ಮದಾಗಿಸಿಕೊಂಡರು.

Facebook Comments