ಪ್ರೇಯಸಿಯನ್ನೇ ಹರಾಜಿಕಗಿಟ್ಟ ಮಹಾನ್ ಪ್ರೇಮಿ ಈತ..!

ಈ ಸುದ್ದಿಯನ್ನು ಶೇರ್ ಮಾಡಿ

Love--01

ಲಂಡನ್,ಅ.10- ಅತ್ಯಂತ ವಿಚಿತ್ರ ಪ್ರಕರಣವೊಂದರಲ್ಲಿ ಬ್ರಿಟನ್ ಮೂಲದ ಯುವಕ ತನ್ನ ಪ್ರೇಯಸಿಯನ್ನು ಆನ್‍ಲೈನ್‍ನಲ್ಲಿ ಹರಾಜಿಗಿಟ್ಟ ಪ್ರಸಂಗ ನಡೆದಿದೆ. ಕೊಲ್‍ಚೆಸ್ಟರ್ ಪ್ರದೇಶದ ಡೇಲೀಕ್ಸ್ ತನ್ನ ಗೆಳತಿ ಕೆಲ್ಲಿ ಗ್ರೀವ್ಸ್ ಅನ್ನು ಇಬೇನಲ್ಲಿ ವೆಬ್‍ಸೈಟ್‍ನಲ್ಲಿ 70 ಸಾವಿರ ಪೌಂಡ್‍ಗೆ ಹರಾಜಿಗೆ ಇಟ್ಟಿದ್ದಾನೆ. ಭಾರತೀಯ ಮೌಲ್ಯದಲ್ಲಿ ಇದು ಸರಿಸುಮಾರು 68 ಲಕ್ಷ ರೂ.

ಹರಾಜಿಗಿಟ್ಟ 24 ಗಂಟೆಯಲ್ಲಿ 81 ಸಾವಿರ ಮಂದಿ ಈ ಜಾಹೀರಾತನ್ನು ವೀಕ್ಷಣೆ ಮಾಡಿದ್ದಾರೆ. ನೂರಕ್ಕೂ ಹೆಚ್ಚು ಮಂದಿ ಬಿಡ್ಡಿಂಗ್ ನಡೆಸಿದ್ದು, ಬಹುತೇಕ ಮೂಲ ಬೆಲೆಗೆ ಬಿಡ್ಡಿಂಗ್ ನಡೆದಿದೆ. ಇವೆಲ್ಲದರ ಜೊತೆಗೆ ಆಕೆಯ ಜೊತೆಗೆ ಒಂದು ದಿನದ ಡ್ರೈವ್ ಹೋಗಲು ಅನೇಕರು ಆಸಕ್ತಿ ತೋರಿ ಡೇಲ್‍ಗೆ ಸಂದೇಶ ರವಾನಿಸಿದ್ದಾರೆ. ಜಾಹೀರಾತನ್ನು ನೀಡಿದ ಬಳಿಕ ಕೆಲ್ಲಿಗೆ ವಿಷಯ ತಿಳಿದಿದ್ದು, ಆಕೆ ನಕ್ಕು ಸುಮ್ಮನಾಗಿದ್ದಾಳೆ. ಒಂದು ದಿನದ ಬಳಿಕ ಇಬೇ ತನ್ನ ವೆಬ್‍ಸೈಟ್‍ನಿಂದ ಈ ಜಾಹೀರಾತನ್ನು ತೆಗೆದುಹಾಕಿದ್ದು, ಮಾನವರನ್ನು ಇಲ್ಲಿ ಮಾರಾಟ ಮಾಡಲು ಅವಕಾಶವಿಲ್ಲ ಎಂದು ಇಬೇ ತಿಳಿಸಿದೆ.

ಯಾವುದೇ ಆನ್‍ಲೈನ್ ಮಾರಾಟ ಸಂಸ್ಥೆ ಮಾನವ ಮಾರಾಟ ಮತ್ತು ಖರೀದಿಯನ್ನು ನಿಷೇಧಿಸಿದೆ. ಈ ಬಗ್ಗೆ ಸ್ಪಷ್ಟವಾದ ನಿಯಮವೂ ಇದೆ. ಯಾವುದೇ ವ್ಯಕ್ತಿ ಇಂತಹ ಜಾಹೀರಾತು ನೀಡಿದ ತಕ್ಷಣವೇ ಆನ್‍ಲೈನ್ ಸೈಟ್‍ನಲ್ಲಿ ಈ ಸಂಬಂಧ ಮೆಸೇಜ್ ಸಹ ಕಾಣಿಸಿಕೊಳ್ಳುತ್ತದೆ. ಇದು ಕಂಪನಿ ನಿಬಂಧನೆಗಳನ್ನ ಉಲ್ಲಂಘಿಸುವಂತಿದ್ದರೆ ಅಂತಹ ಜಾಹೀರಾತುಗಳನ್ನ ಕಂಪನಿ ತಕ್ಷಣ ತೆಗೆದು ಹಾಕುವ ಹಕ್ಕು ಹೊಂದಿದೆ.

 

 

 

 

 

 

 

 

 

 

 

 

 

 

 

 

 

 

 

Facebook Comments