‘ಕನ್ನಡ ದೇಶದೊಳ್’ ಆಡಿಯೋ ರಿಲೀಸ್

ಈ ಸುದ್ದಿಯನ್ನು ಶೇರ್ ಮಾಡಿ

Kannada-Deshadol--01

ಕನ್ನಡ ಭಾಷೆಯ ಸಂಸ್ಕøತಿ ಸಾರುವ ಕನ್ನಡ ದೇಶದೊಳ್ ಅಡಿಬರಹದಲ್ಲಿ ಕರುನಾಡಲ್ಲಿ ಕನ್ನಡಿಗನೇ ಕಂಠೀರವ ಅಂತ ಹೇಳಿಕೊಂಡಿರುವ ಚಿತ್ರದ ಧ್ವನಿಸಾಂದ್ರಿಕೆಯು ಕಲಾವಿದರ ಸಂಘದಲ್ಲಿ ಅನಾವರಣಗೊಂಡಿತು.  ನಿರ್ದೇಶಕ ಅಭಿರಾಮ್‍ಕಂಠೀರವ ಮಾತನಾಡಿ, ಕನ್ನಡದ ತಾಕತ್ತು, ಗತ್ತು, ವೈಭವ ಎಲ್ಲವನ್ನು ತೋರಿಸುವ ಚಿತ್ರವಾಗಿದೆ.

ನೋಡುಗರಿಗೆ ಇದರಿಂದ ಅಭಿಮಾನ ಹೆಚ್ಚಾಗುತ್ತದೆ. ಚಿತ್ರದಲ್ಲಿ ಕನ್ನಡಿಗನ ಶಕ್ತಿ ಏನೆಂದು ತೋರಿಸಲಾಗಿದೆ. ಪರಭಾಷಿಗರು ಕರ್ನಾಟಕ ಸಾಹಿತ್ಯ, ಸಂಸ್ಕøತಿ , ಸೊಗಡು, ಮಾನ್ಯತೆ ಎಲ್ಲವನ್ನು ಚಿತ್ರ ವೀಕ್ಷಿಸಿದ ನಂತರ ತಿಳಿದುಕೊಳ್ಳುತ್ತಾರೆ. ನಮ್ಮದು ಅಪ್ಪಟ ಕನ್ನಡಿಗರ ಚಿತ್ರವೆಂದು ಬಣ್ಣಿಸಿಕೊಂಡರು. ಇದರ ಮಧ್ಯೆ ರಾಜ್ಯದ ಕೊಡವ, ಕೊಂಕಣಿ, ಉತ್ತರಕರ್ನಾಟಕ, ತುಳು ಭಾಷೆಗಳಲ್ಲಿ ಸಿದ್ದಪಡಿಸಿರುವ ಲಿರಿಕಲ್ ವಿಡಿಯೋ ಹಾಡನ್ನು ತೋರಿಸಲಾಯಿತು.

ಸಿಡಿ ಬಿಡುಗಡೆ ಮಾಡಿದ ಮಾಜಿ ಲೋಕಾಯುಕ್ತ ಸಂತೋಷ್‍ಹೆಗಡೆ ಇದೊಂದು ಸುಂದರ ದಿನವೆಂದು ಹೇಳಬಹುದು. ತಂಡಕ್ಕೆ ಒಳ್ಳೆಯದಾಗಲಿ ಎಂದರು. ಇಂದು ಸಿಲಿಕಾನ್ ಸಿಟಿಯಲ್ಲಿ ಕನ್ನಡವನ್ನು ಹುಡುಕುವ ಪರಿಸ್ಥಿತಿ ಬಂದಿದೆ. ಕನ್ನಡ ಮಾತನಾಡಿದರೆ ಅವಮಾನವಾಗುತ್ತದೆಂದು ಎಲ್ಲರು ಇಂಗ್ಲೀಷ್‍ನಲ್ಲಿ ಮಾತನಾಡುವುದನ್ನು ನೋಡಿದಾಗ ಬೇಸರವಾಗುತ್ತದೆ. ಪ್ರಸಕ್ತ ಯುವಜನಾಂಗವು ಕನ್ನಡ ಅಭಿಮಾನವನ್ನು ಎತ್ತಿ ಹಿಡಿಯಬೇಕು.

ನವೆಂಬರ್ ತಿಂಗಳಲ್ಲಿ ಮಾತ್ರ ಕನ್ನಡ ಮಾತನಾಡಿದಂತೆ ವರ್ಷದ 12 ತಿಂಗಳು ನಮ್ಮ ಭಾಷೆಯ ಮೇಲೆ ಪ್ರೀತಿಯನ್ನು ತೋರಿಸಿ, ನಾವೆಲ್ಲರೂ ಕನ್ನಡಿಗರಾಗಿ ಉಳಿಯೋಣ ಅಂತ ನೂತನ ಮಹಾಪೌರರಾದ ಗಂಗಾಂಬಿಕೆ ಕರೆ ನೀಡಿದರು. ಕಲಾವಿದರು, ತಂತ್ರಜ್ಞರು ಇವರುಗಳಿಗೆ ಮೈಕ್ ಸಿಗಲಿಲ್ಲ. ಪರಭಾಷೆಯ ಸಂಗೀತ ನಿರ್ದೇಶಕ ಸೊಲೊರಾಜ್‍ಮೇಲಂಗಿ ಮುಂದಿನ ಬಾರಿ ಕನ್ನಡದಲ್ಲಿ ಮಾತನಾಡುವೆನೆಂದು ಹೇಳಿಕೊಂಡರು.

ನಟಿ ಸುಮನ್‍ನಗರ್‍ಕರ್, ದಿವ್ಯಉರಡುಗ, ಬೆಳಕು ಆಶ್ರಮದ ಮಕ್ಕಳು ಸುಂದರ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಪ್ರಕಾಶ್.ಆರ್, ಹೆಚ್.ವಿನೋದ್‍ಗೌಡ, ವೆಂಕಟೇಶ್, ಯೋಗಾನಂದ್.ಆರ್ ಮತ್ತು ವಿಶ್ವನಾಥ್.ಜಿ ಸೇರಿಕೊಂಡು ನಿರ್ಮಾಣ ಮಾಡಿರುವಂತಹ ಈ ಚಿತ್ರದಲ್ಲಿ ಬಹಳಷ್ಟು ಯುವ ಪಡೆಗಳ ದಂಡು ಹಗಲಿರುಳೆನ್ನದೆ ಶ್ರಮವಹಿಸಿ ಚಿತ್ರವನ್ನು ಸಿದ್ಧ ಪಡಿಸಿದ್ದಾರೆ. ಎಲ್ಲ ಅಂದುಕೊಂಡಂತೆ ನಡೆಯುತ್ತಿದ್ದು, ನ.1 ರಂದು ಈ ಚಿತ್ರವು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಗೊಳಿಸುವ ತಯಾರಿಯಲ್ಲಿ ಚಿತ್ರತಂಡ ಸನ್ನದ್ದವಾಗಿದೆ. ಕನ್ನಡ ಪ್ರೇಮಿಗಳು ಈ ನಮ್ಮ ಕನ್ನಡ ಕಟ್ಟುವ ಪ್ರಯತ್ನದ ಚಿತ್ರವನ್ನು ನೋಡುತ್ತಾರೆ ಎಂಬು ವಿಶ್ವಾಸವನ್ನು ಹೊಂದಿದ್ದಾರೆ.

Facebook Comments