ಗಾಂಜಾ ಮಾರಲು ಪ್ರಯತ್ನಿಸುತ್ತಿದ್ದ ಮೂವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

3-Arrested

ಬೆಂಗಳೂರು, ಅ.11- ಹೊರರಾಜ್ಯದಿಂದ ಮಾದಕ ವಸ್ತುವನ್ನು ತಂದು ನಗರದಲ್ಲಿ ಮಾರಾಟ ಮಾಡಲು ಹೊಂಚುಹಾಕುತ್ತಿದ್ದ ಮೂವರನ್ನು ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿ 5 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಕೇರಳ ರಾಜ್ಯದ ಮೊಹಮ್ಮದ್ ರಿಸಾದ್ (26), ಮೊಹಮ್ಮದ್ ರಹೀಸ್ (32) ಮತ್ತು ಬೆಂಗಳೂರಿನ ವಾಲ್ಮೀಕಿ ನಗರದ ಸಾದಿಕ್ ಪಾಷ (31) ಬಂಧಿತರು.

ಮೊಹಮ್ಮದ್ ರಿಸಾದ್ ಹಾಗೂ ಮೊಹಮ್ಮದ್ ರಹೀಸ್ ಮೂಲತಃ ಕೇರಳದವರಾಗಿದ್ದು ಇವರಿಬ್ಬರು ಸ್ನೇಹಿತರು. ಮಲಪುರಂ ಜಿಲ್ಲೆಯ ಕೆಲವು ಗ್ರಾಮಗಳ ಜಮೀನುಗಳಲ್ಲಿ ಗಾಂಜಾ ಗಿಡ ಬೆಳೆಯುತ್ತಿದ್ದು ಅವುಗಳನ್ನು ಗ್ರಾಮಸ್ಥರಿಂದ ಖರೀದಿಸಿ ಪ್ಯಾಕ್ ಮಾಡಿಕೊಂಡು ಬೆಂಗಳೂರಿಗೆ ಖಾಸಗಿ ಬಸ್‍ಗಳಲ್ಲಿ ತಂದು ನಗರದಲ್ಲಿ ವಾಸವಾಗಿರುವ ಸ್ನೇಹಿತ ಸಾಹಿದ್ ಪಾಷ ನ ಮೂಲಕ ವಿವಿಧೆಡೆ ಗಾಂಜಾ ಮಾರಾಟ ಮಾಡಿ ಹಣ ಗಳಿಸುತ್ತಿದ್ದರು. ಸುದ್ದಗುಂಟೆ ಪಾಳ್ಯ ಪೊಲೀಸರು ಆರೋಪಿಗಳಿಂದ 5 ಕೆಜಿ 200 ಗ್ರಾಂ ಗಾಂಜಾ, 100 ಗ್ರಾಂ ಚರಸ್ ವಶಪಡಿಸಿಕೊಂಡಿದ್ದಾರೆ.

Facebook Comments