ರಸ್ತೆ ಬದಿ ನಿಂತವರ ಮೇಲೆ ಹರಿದ ಲಾರಿ, ನಾಲ್ವರ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

Lorry--01

ಕಲಬುರಗಿ, ಅ.11- ರಸ್ತೆ ಬದಿ ನಿಂತಿದ್ದವರ ಮೇಲೆ ಲಾರಿ ಹರಿದು ನಾಲ್ವರು ಸಾವನ್ನಪ್ಪಿ ಇಬ್ಬರು ಗಾಯ ಗೊಂಡಿರುವ ದಾರುಣ ಘಟನೆ ಇಂದು ಬೆಳಗ್ಗೆ ಜೇವರ್ಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶ್ರೀಕಾಂತ್ ಬಡಿಗೇರ (25), ವಿಶ್ವಕರ್ಮ, ಮೊಹಿದ್(18) ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಫೀರ್‍ಸಾಬ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಅಸು ನೀಗಿದ್ದಾರೆ. ಮತ್ತಿಬ್ಬರನ್ನು ಜೇವರ್ಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಿಲ್ಲೆಯ ಜೇರಟಗಿ ಬಳಿ ಕೆಲಸಕ್ಕೆ ತೆರಳಲು ರಸ್ತೆ ಬದಿ ಹಲವರು ನಿಂತಿದ್ದರು. ಈ ವೇಳೆ ವೇಗವಾಗಿ ಬಂದ ಲಾರಿ ರಸ್ತೆಯಲ್ಲಿ ಮುಂದೆ ಸಾಗದೆ ಏಕಾಏಕಿ ಬದಿಯಲ್ಲಿ ನಿಂತಿದ್ದವರ ಕಡೆ ನುಗ್ಗಿದ್ದರಿಂದ ಕೆಲವರ ಮೇಲೆ ಟ್ರಾಕ್ಟರ್ ಹರಿದು ಈ ದುರ್ಘಟನೆ ಸಂಭವಿಸಿದೆ.

ಈ ಸ್ಥಳದಲ್ಲಿದ್ದ ಬಸ್ ನಿಲ್ದಾಣವನ್ನು ತೆರವುಗೊಳಿಸಿದ್ದರಿಂದ ಅದೇ ರಸ್ತೆ ಬದಿಯಲ್ಲಿ ನಿಂತು ಬಸ್‍ಗಾಗಿ ಜನ ಕಾಯುತ್ತಿದ್ದರು. ಈ ವೇಳೆ ನಡೆದ ಘಟನೆಯಿಂದಾಗಿ ಸ್ಥಳದಲ್ಲೇ ಆತಂಕದ ವಾತಾವರಣ ನಿರ್ಮಾಣವಾಯಿತು.  ಜೇವರ್ಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

Facebook Comments