ಸಮ್ಮಿಶ್ರ ಸರ್ಕಾರ ತಾನಾಗಿಯೇ ಬೀಳುವುದು ಪಕ್ಕಾ ಆಗಿದೆ : ಡಿವಿಎಸ್

ಈ ಸುದ್ದಿಯನ್ನು ಶೇರ್ ಮಾಡಿ

sadananda
ಬೆಂಗಳೂರು. ಅ.11 : ಸಮ್ಮಿಶ್ರ ಸರ್ಕಾರ ತಾನಾಗಿಯೇ ಬೀಳುತ್ತೆ ಅಂತಾ ಹೇಳುತ್ತಾ ಬರುತ್ತೀದ್ದೆವು ಈಗ ಸರ್ಕಾರ ತನ್ನಷ್ಟಕ್ಕೆ ತನೇ ಬೀಳುವುದು ಪಕ್ಕಾ ಆಗಿದೆ. ನಾವು ಹೇಳಿದ್ದು ಇವತ್ತು ಸತ್ಯವಾಗಿದೆ ಎಂದು ಬೆಂಗಳೂರಿನಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿಕೆ ನೀಡಿದರು.

ನಾವು ಯಾರು ಕೂಡಾ ಜ್ಯೋತಿಷಿಗಳಲ್ಲ. ಆದರೆ ರಾಜಕೀಯದ ಬಗ್ಗೆ ತಿಳಿದುಕೊಂಡವರು ಸಮ್ಮಿಶ್ರ ಸರ್ಕಾರ ತಾನಾಗೇ ಬೀಳುತ್ತದೆ ಅಂತ ನಾವು ಹೇಳಿದ್ದು ನಿಜವಾಗಿದೆ. ಸುಮ್ನೆ ಆಪರೇಷನ್ ಕಮಲ ಮಾಡ್ತಿದ್ದೇವೆ ಅಂತ ಸುದ್ದಿ ಬರ್ತಾ ಇತ್ತು. ಇನ್ನೂ ಮುಂದೆ ಯಡಿಯೂರಪ್ಪ ನಾಯಕತ್ವದಲ್ಲಿ ನಮ್ಮ ಪ್ರಯತ್ನ ಮುಂದುವರಿಸುತ್ತೇವೆ ಎಂದು ಹೇಳಿದರು.

ಕೊಳಕು ನೀರಿನಲ್ಲಿ ಮೀನುಗಳು ಆಗಾಗ ಮೇಲೆ ಬಂದು ಉಸಿರು ತೆಗೆದುಕೊಂಡು ಜೀವ ಉಳಿಸಿಕೊಳ್ಳಲು ಪ್ರಯತ್ನ ಪಡುವ ರೀತಿಯಲ್ಲಿ ಜೆಡಿಎಸ್ ನವರು ಪರಸ್ಥಿತಿ ಈಗ ಆಗಿದೆ. ಹೊಸ ಸಸಿ ನೆಡುವುದು ರಾಜಕಾರಣದಲ್ಲಿ ಅನಿವಾರ್ಯ. ಅದನ್ನು ನಾವು ಮಾಡುತ್ತಿದ್ದೇವೆ. ಆಂತರಿಕವಾಗಿ ಎಲ್ಲವೂ ಕೂಡಾ ಬಿಜೆಪಿಯಲ್ಲಿ ನಾಲ್ಕು ಗೋಡೆಯ ಮಧ್ಯೆ ಸಭೆಯಲ್ಲಿ ನಿರ್ಧಾರ ಆಗುತ್ತದೆ ಎಂದು ಇದೇ ವೇಳೆ ಜೆಡಿಎಸ್‌ ವಿರುದ್ಧ ಕೇಂದ್ರ ಸಚಿವ ಡಿ ವಿ ಸದಾನಂದಗೌಡ ಕಿಡಿಕಾರಿದರು.

Facebook Comments