2ನೇ ಶನಿವಾರ ರಜೆಯಲ್ಲಿ ಯಾವುದೇ ಬದಲಾವಣೆ ಇಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

october

ಬೆಂಗಳೂರು, ಅ. 11 : ಕಳೆದ ವಾರದಿಂದ ಹಬ್ಬದ ಹಿನ್ನೆಲೆಯಲ್ಲಿ 2ಟಿe ಶನಿವಾರದ ರಜೆ ಕುರಿತು ಇದ್ದ ಗೊಂದಡಗಳಿಗೆ ರಾಜ್ಯ ಸಾರ್ಕಾರ ತೆರೆ ಎಳೆದಿದೆ. ಎರಡನೇ ಶನಿವಾರ (ಅ.13)ದಂದು ರಜೆಯನ್ನು ರದ್ದುಪಡಿಸಿ ಅ.20ರಂದು ರಜೆ ನೀಡಲಾಗುವುದು ಎನ್ನಲಾಗುತ್ತಿತ್ತು, ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ರಾಜ್ಯ ಸರಕಾರ ಎರಡನೇ ಶನಿವಾರದ ರಜೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಹೀಗಾಗಿ ಎಂದಿನಂತೆ ಅ.13ರ ಎರಡನೇ ಶನಿವಾರ ರಜೆ ಇರುತ್ತದೆ ಹಾಗೂ ಅ.20ರ ಮೂರನೆ ಶನಿವಾರ ಸರಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ ಎಂದು ರಾಜ್ಯ ಸರಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ.

Facebook Comments