ಗಂಗಾ ನದಿ ಶುದ್ಧೀಕರಣಕ್ಕಾಗಿ ಕಳೆದ 110 ದಿನಗಳಿಂದ ಉಪವಾಸವಿದ್ದ ಅಗರವಾಲ್ ಇನ್ನಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

Agarwal--01

ನವದೆಹಲಿ. ಅ. 11 : ಜೂನ್ 22 ರಿಂದ ಗಂಗಾ ನದಿಯ ಸ್ವಚ್ಚತೆಗಾಗಿ ಕಳೆದ 110 ದಿನಗಳಿದ ಅಮರಣಾಂತ ಉಪವಾಸ ಸತ್ಯಾಗ್ರಹ ಕುಳಿತಿದ್ದ ಜಿ.ಡಿ.ಅಗರ್ವಾಲ್ ಅವರು ರಿಷಿಕೇಶ್ ದಲ್ಲಿನ ಏಮ್ಸ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. 110 ದಿನಗಳಿಂದ ಉಪವಾಸ ಮಾಡುತ್ತಿದ್ದ 87 ವರ್ಷದ ಸ್ವಾಮೀಜಿಯ ಆರೋಗ್ಯ ತೀವ್ರ ಹದಗೆಟ್ಟಿದ್ದರಿಂದ ಪೊಲೀಸರು ಬುಧವಾರ ಹರಿದ್ವಾರದಿಂದ ಹೃಷಿಕೇಷದ ಎಐಐಎಂಎಸ್‌ಗೆ ಸ್ಥಳಾಂತರಿಸಿದ್ದರು. ಆದರೆ, ಅವರು ಹೃದಯಾಘಾತದಿಂದ ನಿಧನ ಹೊಂದಿದರು

ಐಐಟಿ ಕಾನ್ಪುರ್ ದಲ್ಲಿ ನಿವೃತ್ತ ಪ್ರಾಧ್ಯಾಪಕರಾಗಿದ್ದ ಜಿಡಿ ಅಗರವಾಲ್ ಗಂಗಾ ನದಿಯನ್ನು ಸ್ವಚ್ಚಗೊಳಿಸಬೇಕೆಂದು ಅಮರಣಾಂತ ಉಪಹಾಸ ಸತ್ಯಾಗ್ರಹಕ್ಕೆ ಕುಳಿತಿದ್ದರು.ಬುಧುವಾರದಂದು ನೀರನ್ನು ಸಹಿತ ಕುಡಿಯುವುದನ್ನು ನಿಲ್ಲಿಸಿದ್ದರು. ಸಾವಿಗೂ ಮುನ್ನ ಹರಿದ್ವಾರದ ಆಡಳಿತ ವಿಭಾಗವು ಒತ್ತಯಪೂರಕವಾಗಿ ಅವರನ್ನು ಪ್ರತಿಭಟನಾ ಸ್ಥಳದಿಂದ ಏಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದರು ಎಂದು ಅವರು ಆರೋಪಿಸಿದ್ದರು

ಪ್ರೊ.ಅಗರವಾಲ್ ಅವರು ಗಂಗಾ ನದಿಯುದ್ದಕ್ಕೂ ಹೈಡ್ರೋಎಲೆಕ್ಟ್ರಿಕ್ ಪ್ರೊಜೆಕ್ಟ್ ಗಳನ್ನು ನಿರ್ಮಿಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಇದಕ್ಕೆ ತಡೆಯೋಡ್ದಲು ಗಂಗಾನದಿ ರಕ್ಷಣಾ ನಿರ್ವಹಣೆ ಕಾಯ್ದೆಯನ್ನು ಜಾರಿಗೆ ತರಲು ಅವರು ಅಗ್ರಹಿಸಿದ್ದರು.

ನದಿಗಳ ರಕ್ಷಣೆಗಾಗಿ ಅವರು ಈ ಹಿಂದೆಯೂ ಉಪವಾಸಗಳನ್ನು ನಡೆಸಿದ್ದರು. 2009ರಲ್ಲಿ ಅವರ ಉಪವಾಸ ಸತ್ಯಾಗ್ರಹವು ಭಾಗೀರಥಿ ನದಿಗೆ ಕಟ್ಟಲಾಗುತ್ತಿದ್ದ ಅಣೆಕಟ್ಟಿನ ಕಾಮಗಾರಿಯನ್ನು ತಡೆಯುವಲ್ಲಿ ಯಶಸ್ವಿಯಾಗಿತ್ತು.

Facebook Comments