ಹರಿಪ್ರಿಯ ಅಭಿನಯದ 25ನೆ ಚಿತ್ರ ‘ಡಾಟರ್ ಆಫ್ ಪಾರ್ವತಮ್ಮ’

ಈ ಸುದ್ದಿಯನ್ನು ಶೇರ್ ಮಾಡಿ

parvatamma
ಸಾಮಾನ್ಯವಾಗಿ ಚಿತ್ರದ ಶೀರ್ಷಿಕೆ ಕೇಳಿದಾಕ್ಷಣ ಕುತೂಹಲ ಹುಟ್ಟುವುದು ಸಹಜ. ಅದರಂತೆ ಪಾರ್ವತಮ್ಮ ಎನ್ನುವ ಹೆಸರು ಚಿತ್ರೋದ್ಯಮದಲ್ಲಿ ಬಹಳ ಚಿರಪರಿಚಿತ. ಅದೊಂದು ಶಕ್ತಿ ಎಂದು ಹೇಳಬಹುದು. ನಮ್ಮ ಚಿತ್ರರಂಗದ ವರ ನಟ ಡಾ.ರಾಜ್‍ಕುಮಾರ್ ಅವರ ಧರ್ಮಪತ್ನಿ ಪಾರ್ವತಮ್ಮನವರಿಗೂ ಈ ಚಿತ್ರದ ಕಥೆಗೂ ಯಾವುದೇ ಸಂಬಂಧ ಇಲ್ಲ ಎಂಬ ವಿಚಾರವನ್ನು ತಂಡ ಸ್ಪಷ್ಟಪಡಿಸಿದೆ. ಚಿತ್ರದ ಶೀರ್ಷಿಕೆಯಷ್ಟೇ ಪಾರ್ವತಮ್ಮ ಎಂದು ಬಳಸಲಾಗಿದೆಯಂತೆ.

ನೀರ್‍ದೋಸೆ ಬೆಡಗಿ ಹರಿಪ್ರಿಯ ಅಭಿನಯದ 25ನೆ ಚಿತ್ರ ಡಾಟರ್ ಆಫ್ ಪಾರ್ವತಮ್ಮ. ಶಂಕರ್ ಅವರ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದ ಟೀಸರ್ ಅನಾವರಣ ಸಮಾರಂಭ ನಡೆಯಿತು. ನಟ ವಿನಯ್‍ರಾಜ್‍ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಟೀಸರ್ ಬಿಡುಗಡೆ ಮಾಡಿದರು. ಚಿತ್ರದ ನಿರ್ಮಾಪಕರಾದ ಶಶಿಧರ್ ಮಾತನಾಡಿ, ನಾನು ನಟರಾಜ ಸರ್ವೀಸ್ ಚಿತ್ರದಲ್ಲಿ ಒಂದು ಸಣ್ಣ ಪಾತ್ರ ಮಾಡಿದ್ದೆ. ನಂತರ ಪುಷ್ಪಕ ವಿಮಾನ ಚಿತ್ರಕ್ಕೆ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆದೆ. ಈಗ ದಿಶಾ ಎಂಟರ್‍ಪ್ರೈಸಸ್ ಎಂಬ ಬ್ಯಾನರ್ ಆರಂಭಿಸಿದಾಗ ನನ್ನ ಸ್ನೇಹಿತರೂ ಕೈ ಜೋಡಿಸಿದರು.

ಡಾಟರ್ ಆಫ್ ಪಾರ್ವತಮ್ಮ ತಮ್ಮ ಒಂದು ಥ್ರಿಲ್ಲರ್ ಸಬ್ಜೆಕ್ಟ್ ಆಗಿರುವುದರಿಂದ ಇದನ್ನು ಬೇರೆ ಥರನೇ ಪ್ರೆಸೆಂಟ್ ಮಾಡೋಣ ಎಂದು ನಿರ್ಧರಿಸಿ ನಾಯಕಿ ಪಾತ್ರಕ್ಕೆ ಹುಡುಕಾಟ ನಡೆಸಿದವು. ಆಗಿ ಸಿಕ್ಕವರೇ ಹರಿಪ್ರಿಯ. ಅವರು ಕಲಾವಿದರ , ತಂತ್ರಜ್ಞರ ಆಯ್ಕೆಯಲ್ಲಿ ತುಂಬಾ ಸಲಹೆಗಳನ್ನು ಕೊಟ್ಟರು. ಸಂಗೀತ , ಛಾಯಾಗ್ರಹಣ ಎಲ್ಲಾ ವಿಭಾಗದವರ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ. ನಾನು ಬ್ಯಾಂಕ್‍ನಲ್ಲಿ ಉದ್ಯೋಗಿಯಾಗಿದ್ದು , ಈಗ ಚಿತ್ರರಂಗಕ್ಕೆ ಬಂದಿದ್ದೇನೆ. ನಮ್ಮ ಬ್ಯಾನರ್‍ನಿಂದ ಸ್ವಮೇಕ್ ಸಿನಿಮಾಗಳನ್ನೇ ಹೆಚ್ಚಾಗಿ ನಿರ್ಮಾಣ ಮಾಡಬೇಕೆಂಬ ಆಸೆಯಿದೆ. ಈಗಾಗಲೇ ಇನ್ನೊಂದು ಸಿನಿಮಾ ಪ್ಲಾನ್ ಕೂಡ ನಡೀತಿದೆ ಎಂದು ಹೇಳಿದರು. ನಾಯಕಿ ಹರಿಪ್ರಿಯ ಮಾತನಾಡಿ, ನಾನು ಇಂಡಸ್ಟ್ರಿಗೆ ನಿನ್ನೆ ಮೊನ್ನೆಯಷ್ಟೇ ಬಂದ ಹಾಗಿದೆ.

11 ವರ್ಷವಾಯಿತು. 25 ಚಿತ್ರಗಳನ್ನು ಮಾಡಿದ್ದೇನೆಂದರೆ ನಂಬಲಿಕ್ಕೆ ಸಾಧ್ಯವಿಲ್ಲ. ಇಂಥ ಪವರ್ ಫುಲ್ ಟೈಟಲ್ ಇರುವ ಈ ಚಿತ್ರಕ್ಕೆ ಹೇಗೆ ಕಥೆ ಮಾಡಿರುವರೆಂಬ ಕುತೂಹಲವಿತ್ತು. ಚೆನ್ನಾಗಿದೆ. ನಾನು ಕೂಡ ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಪಾರ್ವತಮ್ಮನವರ ಆಶೀರ್ವಾದ ಪಡೆದಿದ್ದೆ. ಈ ಚಿತ್ರದಲ್ಲಿ ಇನ್‍ವೆಸ್ಟಿಗೇಟಿಂಗ್ ಆಫೀಸರ್ ಪಾತ್ರ ಮಾಡಿದ್ದೇನೆ. ನಾನು ಪ್ರತಿಪಾತ್ರ ಮಾಡುವಾಗಲೂ ಭಯ ಇದ್ದೇ ಇರುತ್ತೆ. ಈ ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನಾ ಎಂದು ಈಗಲೂ ಅಳುಕಿದೆ. ಒಂದು ಕೇಸ್ ಹ್ಯಾಂಡಲ್ ಮಾಡುವುದರಿಂದ ಈ ಚಿತ್ರದ ಕಥೆ ಆರಂಭವಾಗುತ್ತದೆ.

ನಾನು ಯಾವುದೇ ಪ್ಲಾನ್ ಮಾಡದೇ ಇದ್ದರೂ ಇಂಥ ಪಾತ್ರ 25ನೆ ಚಿತ್ರದಲ್ಲಿ ಸಿಕ್ಕಿರುವುದು ಅದೃಷ್ಟ ಎಂದು ಹೇಳಿದರು. ಹಿರಿಯ ನಟಿ ಸುಮಲತಾ ಅಂಬರೀಶ್ ಮಾತನಾಡುತ್ತಾ, ಇದೊಂದು ವಿಭಿನ್ನವಾದ ಚಿತ್ರ. ಪಾರ್ವತಮ್ಮನವರ ಹೆಸರೇ ಒಂದು ಶಕ್ತಿಯುತ ವಾದದ್ದು. ನನಗೆ ಈ ಚಿತ್ರದಲ್ಲಿ ಅಭಿ ನಯಿಸುವುದಕ್ಕೆ ಬಹಳ ಸಂತೋಷ ವಾಗಿದೆ. ಒಬ್ಬ ತಾಯಿಯಾಗಿ ಜವಾಬ್ದಾರಿ ಇರುವಂತಹ ಪಾತ್ರ ಮಾಡಿದ್ದೇನೆ ಎಂದು ಚಿತ್ರದ ಕುರಿತು ಮಾಹಿತಿಯನ್ನು ಹಂಚಿಕೊಂಡರು.

ನಟ ವಿನಯ ರಾಜ್‍ಕುಮಾರ್ ಮಾತನಾಡಿ, ಟೀಸರ್ ತುಂಬಾ ಕುತೂಹಲ ಕೆರಳಿಸುವಂತಿದೆ. ಹರಿಪ್ರಿಯಾ
ನನಗೆ ತುಂಬಾ ಇಷ್ಟವಾದ ನಟಿ. ಅಜ್ಜಿಯ ಹೆಸರು ಇರುವ ಈ ಚಿತ್ರ ಸೂಪರ್ ಹಿಟ್ ಆಗಲಿ ಎಂದು ಹೇಳಿದರು. ಉಳಿದಂತೆ ಚಿತ್ರತಂಡದವರು ತಮ್ಮ ತಮ್ಮ ಅನುಭವಗಳ ನ್ನು ಹೇಳಿಕೊಂಡರು.
ಚಿತ್ರ ಸದ್ಯದಲ್ಲಿಯೇ ತೆರೆಗೆ ಬರಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

Facebook Comments