ವಿಂಡೀಸ್ ವಿರುದ್ಧ 2ನೆ ಟೆಸ್ಟ್ ಗೆ ಟೀಂ ಇಂಡಿಯಾ ಪ್ರಕಟ, ಮಯಾಂಕ್ ಮತ್ತೆ ಬೆಂಚ್ ಬಾಯ್

ಈ ಸುದ್ದಿಯನ್ನು ಶೇರ್ ಮಾಡಿ

Mayank--01

ಹೈದ್ರಾಬಾದ್, ಅ.11- ಕನ್ನಡಿಗ ಮಯಾಂಕ್ ಅಗರ್‍ವಾಲ್ ವೆಸ್ಟ್  ಇಂಡೀಸ್ ವಿರುದ್ಧದ 2ನೆ ಪಂದ್ಯದಲ್ಲೂ ಬೆಂಚ್ ಆಟಗಾರರಾಗಿಯೇ ಮುಂದುವರಿದಿದ್ದಾರೆ. ತಮ್ಮ ಅದ್ಭುತ ಪ್ರದರ್ಶನದಿಂದ ತಂಡದಲ್ಲಿ ಸ್ಥಾನ ಪಡೆದರೂ ಕೂಡ 11ರ ಸ್ಥಾನದಲ್ಲಿ ಗುರುತಿಸಿಕೊಂಡು ಮೈದಾನಕ್ಕೆ ಇಳಿಯಲು ಅವಕಾಶ ಪಡೆಯದ ಮಯಾಂಕ್ ಮುಂದಿನ ಏಕದಿನ ಸರಣಿಗಾಗಿ ಎದುರು ನೋಡುವಂತಾಗಿದೆ.

ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್‍ನಲ್ಲಿ ಕ್ರಿಕೆಟ್ ಜೀವನಕ್ಕೆ ಪಾದಾರ್ಪಣೆ ಮಾಡಿದ ಹನುಮವಿಹಾರಿ ಅವರು ಅರ್ಧಶತಕ ಹಾಗೂ ಮೂರು ವಿಕೆಟ್ ಪಡೆದ ಅರ್ಹತೆ ಮೇಲೆಯೇ ವಿಂಡೀಸ್ ಸರಣಿಗೆ ಆಯ್ಕೆಯಾದರಾದರೂ ಸರಣಿಯುದ್ದಕ್ಕೂ ಬೆಂಚ್ ಬಾಯ್ ಆಗಿಯೇ ಗುರುತಿಸಿಕೊಂಡಿದ್ದಾರೆ. ಪಾದಾರ್ಪಣೆ ಪಂದ್ಯದಲ್ಲೇ ಆಕರ್ಷಕ ಶತಕ ಸಿಡಿಸಿದ್ದ ಯುವ ಆಟಗಾರ ಪೃಥ್ವಿಶಾ, ಕನ್ನಡಿಗ ಕೆ.ಎಲ್.ರಾಹುಲ್‍ರೊಂದಿಗೆ ಇನ್ನಿಂಗ್ಸ್ ಕಟ್ಟಿದರೆ, ಮಧ್ಯಮ ಕ್ರಮಾಂಕದಲ್ಲಿ ತಂಡದ ಮೊತ್ತವನ್ನು ಹಿಗ್ಗಿಸುವ ಜವಾಬ್ದಾರಿಯನ್ನು ನಾಯಕ ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ, ಅಂಜೆಕ್ಯ ರಹಾನೆ, ವಿಕೆಟ್‍ಕೀಪರ್ ರಿಷಭ್ ಪಂತ್ ಹೆಗಲಿಗೇರಿದೆ.

ಭಾರತ ತಂಡವು ನಾಳೆಯ ಪಂದ್ಯದಲ್ಲಿ ಇಬ್ಬರು ವೇಗಿಗಳು ಹಾಗೂ ಮೂವರು ಸ್ಪಿನ್ನರ್‍ಗಳೊಂದಿಗೆ ಅಂಗಳಕ್ಕೆ ಇಳಿಯಲಿದೆ. 2 ಪಂದ್ಯಗಳ ಸರಣಿಯಲ್ಲಿ ರಾಜ್‍ಕೋಟ್‍ನಲ್ಲಿ ನಡೆದ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ 272 ರನ್‍ಗಳ ಬೃಹತ್ ಅಂತರದ ಗೆಲುವು ಸಾಧಿಸಿರುವ ವಿರಾಟ್ ಪಡೆ ಮುತ್ತಿನ ನಗರಿ ಹೈದ್ರಾಬಾದ್‍ನಲ್ಲಿ ಇನ್ನಿಂಗ್ಸ್ ವಶಪಡಿಸಿಕೊಳ್ಳುವತ್ತ ಚಿತ್ತ ಹರಿಸಿದ್ದಾರೆ.

Facebook Comments