ರಷ್ಯಾ ಜೊತೆ ಒಪ್ಪಂದದ ಮಾಡಿಕೊಂಡ ಭಾರತಕ್ಕೆ ಶೀಘ್ರದಲ್ಲೇ ಬಿಸಿ ತಟ್ಟಲಿದೆ : ಟ್ರಂಪ್

ಈ ಸುದ್ದಿಯನ್ನು ಶೇರ್ ಮಾಡಿ

Trump-Modi--01
ವಾಷಿಂಗ್ಟನ್, ಅ.11-ಸುಮಾರು 39,000 ಕೋಟಿ ರೂ. ವೆಚ್ಚದಲ್ಲಿ ಎಸ್-400 ಕ್ಷಿಪಣಿ ಖರೀದಿಸಲು ರಷ್ಯಾದೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಪರಿಣಾಮ ಏನೆಂಬುದು ಭಾರತಕ್ಕೆ ಶೀಘ್ರ ಅರಿವಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾರ್ಮಿಕವಾಗಿ ಹೇಳಿದ್ದಾರೆ. ಇದರೊಂದಿಗೆ ಭಾರತದ ಮೇಲೆ ಅಮೆರಿಕದ ಸಂಭವನೀಯ ಕ್ರಮದ ಮನ್ಸೂಚನೆ ಇದಾಗಿದೆ ಎಂದು ಹೇಳಲಾಗುತ್ತಿದೆ.

ಶ್ವೇತ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾರತ-ರಷ್ಯಾ ರಕ್ಷಣಾ ಖರೀದಿ ಒಪ್ಪಂದ ಸಹಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ಇದರ ಪರಿಣಾಮ ಏನೆಂಬುದು ಭಾರತಕ್ಕೆ ಅತಿ ಬೇಗನೇ ಮನವರಿಕೆಯಾಗಲಿದೆ. ಭಾರತಕ್ಕೆ ನೀವು ನಿರೀಕ್ಷಿಸಿರುವುದಕ್ಕಿಂತ ಬೇಗ ಬಿಸಿ ಮುಟ್ಟಲಿದೆ ಎಂದು ತಿಳಿಸಿದ್ದಾರೆ.

ಅಮೆರಿಕ ವಿರೋಧಿಗಳನ್ನು ನಿಷೇಧ-ನಿರ್ಬಂಧಗಳ ಮೂಲಕ ಮಟ್ಟ ಹಾಕುವ ಕ್ಯಾಸ್ಟಾ ಕಾಯ್ದೆಗೆ ಅಮೆರಿಕ ಅಧ್ಯಕ್ಷರು ತಿದ್ದುಪಡಿ ಮಾಡಿದ್ದಾರೆ. ಈಗಾಗಲೇ ನಿರ್ಬಂಧಕ್ಕೆ ಗುರಿಯಾಗಿರುವ ರಷ್ಯಾ ಜೊತೆ ಐದು ಶತಕೋಟಿ ಡಾಲರ್ ಮೌಲ್ಯದ ಟ್ರಯಂಫ್ ಕ್ಷಿಪಣಿ ಖರೀದಿಸಲು ಭಾರತ ಒಪ್ಪಂದ ಮಾಡಿಕೊಂಡಿರುವುದು ಅಮೆರಿಕ ಕಣ್ಣು ಕೆಂಪಗಾಗಲು ಕಾರಣವಾಗಿದೆ.

ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಅಮೆರಿಕ ಮೇಲ್ನೋಟಕ್ಕೆ ಹೇಳಿಕೆ ನೀಡಿದ್ದರೂ, ಭಾರತಕ್ಕೆ ಭವಿಷ್ಯದಲ್ಲಿ ತೊಂದರೆಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ನಿಷೇಧಗಳಿಂದ ವಿನಾಯಿತಿ ನೀಡುವ ಅಧಿಕಾರ ಇರುವುದ ಟ್ರಂಪ್ ಕೈಯಲ್ಲಿ ಮಾತ್ರ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )