ಭಾರಿ ಕುತೂಹಲ ಕೆರಳಿಸಿದೆ ಸಚಿವ ಸಾ.ರಾ.ಮಹೇಶ್ ಹೇಳಿಕೆ..!

ಈ ಸುದ್ದಿಯನ್ನು ಶೇರ್ ಮಾಡಿ

 

ಮೈSa-Ra-Mahesh--01ಸೂರು, ಅ.11- ದಸರಾ ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್ ನಾಯಕರು ಏಕೆ ಭಾಗವಹಿಸುತ್ತಿಲ್ಲ ಎಂಬುದರ ಬಗ್ಗೆ ಸಮಾರಂಭದ ಕೊನೆಯ ದಿನ ಹೇಳುತ್ತೇನೆ ಎಂದು ಹೇಳುವ ಮೂಲಕ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಕುತೂಹಲ ಕೆರಳಿಸಿದ್ದಾರೆ. ನಗರದ ಪುರಭವನದ ಬಳಿ ಇಂದು ಬೆಳಗ್ಗೆ ಪಾರಂಪರಿಕ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ದಸರಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರು ಒಬ್ಬರೂ ಕಾಣುತ್ತಿಲ್ಲವಲ್ಲ ಎಂಬ ವರದಿಗಾರರ ಪ್ರಶ್ನೆಗೆ, ದಸರಾ ಕೊನೆಯ ದಿನ ನಿಮ್ಮ ಪ್ರಶ್ನೆಗೆ ಉತ್ತರ ನೀಡುತ್ತೇನೆ ಎಂದು ಸಚಿವರು ಉತ್ತರಿಸಿದ್ದಾರೆ. ದಸರಾದಲ್ಲಿ ಏಕೆ ಭಾಗವಹಿಸುತ್ತಿಲ್ಲ ಎಂದು ನೀವುಗಳು ಕಾಂಗ್ರೆಸ್‍ನವರನ್ನು ಕೇಳಿ. ಅವರು ಉತ್ತರ ಕೊಡದಿದ್ದರೆ ನಾನು ಉತ್ತರಿಸುತ್ತೇನೆ ಎಂದರು.

ನಿನ್ನೆಯಿಂದ ನಗರದಲ್ಲಿ ದಸರಾ ಸಂಭ್ರಮ ಪ್ರಾರಂಭವಾಗಿದೆ. ಇಂತಹ ನಾಡಹಬ್ಬದಲ್ಲಿ ಸಮ್ಮಿಶ್ರ ಸರ್ಕಾರದ ಭಾಗವಾಗಿರುವ ಕಾಂಗ್ರೆಸ್ ನಾಯಕರು ಗೈರಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವಿದ್ದರೂ ದಸರಾದ ಎಲ್ಲಾ ಕಾರ್ಯಕ್ರಮಗಳಲ್ಲೂ ಜೆಡಿಎಸ್‍ನವರು ಮಾತ್ರ ಕಾಣುತ್ತಿದ್ದಾರೆ. ಮೈಸೂರು ಕಾಂಗ್ರೆಸ್-ಜೆಡಿಎಸ್ ನಾಯಕರ ನಡುವಿನ ಭಿನ್ನಾಭಿಪ್ರಾಯವಿರುವುದನ್ನು ಇದು ಎತ್ತಿ ತೋರುತ್ತಿದೆ.

Facebook Comments