ಟ್ರಂಪ್ ಕ್ರೇಜಿ ಹೇಳಿಕೆಯಿಂದ ಜಾಗತಿಕ ಷೇರು ಮಾರುಕಟ್ಟೆ ತಲ್ಲಣ

ಈ ಸುದ್ದಿಯನ್ನು ಶೇರ್ ಮಾಡಿ

Trump--01
ಹಾಂಕಾಂಗ್, ಅ.11-ಅಧಿಕ ಬಡ್ಡಿ ದರಗಳಿಗಾಗಿ ಯೋಜನೆಗಳೊಂದಿಗೆ ಕೇಂದ್ರ ಮೀಸಲು ಏರಿಳಿತವಾಗಿದೆ(ಗಾನ್ ಕ್ರೇಜಿ) ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿರುವುದರಿಂದ ಇಂದು ವಾಲ್ ಸ್ಟ್ರೀಟ್‍ನ ಜಾಗತಿಕ ಷೇರುಪೇಟೆ ತಲ್ಲಣಗೊಂಡಿದೆ. ಇದರ ಪರಿಣಾಮ ಏಷ್ಯಾದ ಷೇರು ಮಾರುಕಟ್ಟೆ ಮೇಲೂ ಉಂಟಾಗಿದೆ. ಹಾಂಕಾಂಗ್‍ನ ಹ್ಯಾಂಗ್ ಸೆಂಗ್‍ನ ನಿಕ್ಕೀಯಲ್ಲಿ ಇಂದು ಬೆಳಗಿನ ಆರಂಭಿಕ ಷೇರು ವಹಿವಾಟಿನಲ್ಲಿ ಶೇ. 3ರಷ್ಟು ಕುಸಿತ ಕಂಡಿದೆ. ಶಾಂಘೈ ಸ್ಟಾಕ್ ಎಕ್ಸ್‍ಚೆಂಜ್‍ನಲ್ಲೂ ಆರಂಭಿಕ ಇಳಿಕೆ ದಾಖಲಾಗಿದೆ.

ಟ್ರಂಪ್ ಹೇಳಿಕೆ ನಂತರ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಂಟರ್‍ನ್ಯಾಷನಲ್ ಮಾನಿಟರಿ ಫಂಟ್(ಐಎಂಎಫ್ ಅಥವಾ ಅಂತಾರಾಷ್ಟ್ರೀಯ ಹಣಕಾಸು ನಿಧಿ) ಅಧ್ಯಕ್ಷೆ ಕ್ರಿಸ್ಟೀನ್ ಲಾಗರ್ಡೆ, ಸೆಂಟ್ರಲ್ ಬ್ಯಾಂಕ್ ಬಡ್ಡಿ ಏರಿಕೆ ಅಗತ್ಯ ಬೆಳವಣಿಗೆ ಎಂದು ಪ್ರತಿಕ್ರಿಯಿಸಿದ್ದಾರೆ.

# ಡಾಲರ್ ಎದುರು ಮತ್ತೆ ಕುಸಿದ ರೂಪಾಯಿ 
ಅಮೆರಿಕ ಡಾಲರ್ ಎದುರು ಇಂದು ಭಾರತೀಯ ರೂಪಾಯಿ ಮೌಲ್ಯದಲ್ಲಿ ಮತ್ತೆ ಕುಸಿತ ಕಂಡು ಬಂದಿದೆ. ಇಂದು ರೂಪಾಯಿ ಮೌಲ್ಯ ಹಿಸದಾಗಿ 24 ಪೈಸೆಗಳಷ್ಟು ಕುಗ್ಗಿದ್ದು, 74.45ರಷ್ಟಿದ್ದು, ಇದು ಸಾರ್ವಕಾಲಿಕ ದಾಖಲೆಯ ಕುಸಿತ ಎನಿಸಿದೆ.  ಅನಿಯಂತ್ರಿತ ವಿದೇಶಿ ನಿಧಿಗಳು ಹೊರ ಹರಿಯುವಿಕೆ ಮತ್ತು ದೇಶೀಯ ಷೇರು ಮಾರುಕಟ್ಟೆಯಲ್ಲಿ ತೀವ್ರ ನಷ್ಟದ ನಡುವೆಯೂ ಆಮದುದಾರರಿಂದ ಅಮೆರಿಕ ಕರೆನ್ಸಿ ಬೇಡಿಕೆ ತೀವ್ರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯದಲಿ ಗುರುವಾರ ಮತ್ತಷ್ಟು ಕುಸಿತ ಕಂಡುಬಂದಿತು.

ಅಂತರ್‍ಬ್ಯಾಂಕ್ ವಿದೇಶಿ ವಿನಿಮಯ(ಫೋರೆಕ್ಸ್) ಮಾರುಕಟ್ಟೆಯಲ್ಲಿ, ದೇಶೀಯ ಕರೆನ್ಸಿ ವಹಿವಾಟು 74.37 ರೂ.ಗಳೊಂದಿಗೆ ದುರ್ಬಲವಾಗಿ ಆರಂಭವಾಗಿ ಮತ್ತಷ್ಟು ಇಳಿಕೆಯಾಗಿ 74.45 ರೂ.ಗಳ ಸರ್ವಕಾಸಿಕ ಕುಸಿತ ಕಂಡಿತು. ಇಂದು ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ಮತ್ತೆ 24 ಪೈಸೆಗಳ ಸವಕಳಿಯೊಂದಿಗೆ ಇನ್ನಷ್ಟು ಇಳಿಮುಖವಾಗಿದೆ.  ರೂಪಾಯಿ ಮೌಲ್ಯ ಮತ್ತೆ ಕುಸಿತಗೊಂಡಿರುವುದರಿಂದ ಮುಂಬೈ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಬಿಎಸ್‍ಇ ಸಂವೇದಿ ಸೂಚ್ಯಂಕ 1,030 ಪಾಯಿಂಟ್‍ಗಳಿಗೆ ಇಳಿದಿದೆ.

Facebook Comments